School affair ಬಿಸಿಯೂಟದ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್, ಶಾಲಾ ಅಧ್ಯಕ್ಷ ಸೇರಿ ಗ್ರಾಮಸ್ಥರಿಂದ ಗೂಸ | Caught Red Handed Villagers Beat Up Headmaster Over Alleged Affair With School Cook Odisha

School affair ಬಿಸಿಯೂಟದ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್, ಶಾಲಾ ಅಧ್ಯಕ್ಷ ಸೇರಿ ಗ್ರಾಮಸ್ಥರಿಂದ ಗೂಸ | Caught Red Handed Villagers Beat Up Headmaster Over Alleged Affair With School Cook Odisha



School affair ಬಿಸಿಯೂಟದ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್, ಶಾಲಾ ಅಧ್ಯಕ್ಷ ಸೇರಿ ಗ್ರಾಮಸ್ಥರಿಂದ ಗೂಸ | Caught Red Handed Villagers Beat Up Headmaster Over Alleged Affair With School Cook Odisha

ಬಿಸಿಯೂಟದ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್, ಶಾಲಾ ಅಧ್ಯಕ್ಷ ಸೇರಿ ಗ್ರಾಮಸ್ಥರಿಂದ ಗೂಸ, ಕರ್ತವ್ಯದಲ್ಲಿದ್ದಾಗಲೇ ಹೆಡ್ ಮಾಸ್ಟರ್ ಮೇಲೆ ದಾಳಿ ನಡೆಸಲಾಗಿದೆ. ಬಳಿಕ ಚಪ್ಪಲಿ ಹಾರ ಹಾಕಿ ಪರೇಡ್ ನಡೆಸಿದ ಘಟನೆ ನಡೆದಿದೆ. 

ರೊರ್ಕೆಲಾ (ಮಾ.09) ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಅಡುಗೆ ಮಾಡುವ ಮಹಿಳಾ ಕುಕ್ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾರೆ. ಪ್ರತಿ ದಿನ ಕುಕ್ ಜೊತೆ ಮಹಿಳಾ ಕುಕ್ ಜೊತೆ ಮಂಚದಾಟವೂ ನಡೆಯುತ್ತಿದೆ ಎಂದು ಆರೋಪಿಸಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸೇರಿದಂತೆ ಕೆಲ ಗುಂಪು ಏಕಾಏಕಿ ಶಾಲಾ ಹೆಡ್‌ಮಾಸ್ಟರ್ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಹೆಡ್ ಮಾಸ್ಟರ್‌ಗೆ ಥಳಿಸಲಾಗಿದೆ. ಬಳಿಕ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲ ಪರೇಡ್ ಮಾಡಿದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶಾಲಾ ಅಧ್ಯಕ್ಷನ ಪತ್ನಿ ಜೊತೆಗೆ ಸರಸ

ಸುಂದರಘಡ ಜಿಲ್ಲೆಯ ಸೇವಾಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸೇವಾಶ್ರಮ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಮಾಡಿ ಬಡಿಸುವ ಮಹಳೆ ಅದೇ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷನ ಪತ್ನಿಯಾಗಿದ್ದಾರೆ. ಶಾಲೆಯಲ್ಲಿ ಪ್ರತಿ ದಿನ ಮಕ್ಕಳಿಗೆ ಬಿಸಿಯೂಟ ಮಾಡಲು ಆಗಮಿಸುವ ಮಹಿಳಾ ಕುಕ್ ಜೊತೆ ಶಾಲೆಯ ಹೆಡ್ ಮಾಸ್ಟರ್ 45 ವರ್ಷದ ರೋಹಿತ್ ಕಮಾರ್ ರೇ ಅಕ್ರಮ ಸಂಬಂಧ ಬೆಳೆಸಿದ್ದಾರೆ ಎಂದು ಮಹಿಳಾ ಕುಕ್ ಪತಿ ಹಾಗೂ ಇತರ ಕೆಲ ಸಿಬ್ಬಂದಿಗಳು ಆರೋಪಿಸಿದ್ದಾರೆ.

ಮಕ್ಕಳಿಗೆ ಬಿಸಿಯೂಟದ ಬಳಿಕ ಶಾಲಾ ಹೆಡ್ ಮಾಸ್ಟರ್ ಹಾಗೂ ಮಹಿಳಾ ಕುಕ್ ಒಂದೇ ಕೋಣೆಯಲ್ಲಿರುತ್ತಾರೆ. ಅಕ್ರಮ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ. ಹೆಡ್ ಮಾಸ್ಟರ್ ಮಕ್ಕಳಿಗೆ ಪಾಠ ಕಲಿಸುವ ಬದಲು ತನ್ನ ಪತ್ನಿಗೆ ಮಕ್ಕಳಾಟ ಕಲಿಸುತ್ತಿದ್ದಾರೆ ಎಂದು ಶಾಲಾ ಅಧ್ಯಕ್ಷ ಗರಂ ಆಗಿದ್ದಾರೆ. ಕೆಲ ಗುಂಪಿನ ಜೊತೆಗೆ ಶಾಲೆಯ ಹೆಡ್ ಮಾಸ್ಟರ್ ಮೇಲೆ ದಾಳಿ ಮಾಡಿದ್ದಾರೆ. ಹೆಡ್ ಮಾಸ್ಟರ್‌ಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಇತ್ತ ಗುಂಪು ಶಾಲೆಯತ್ತ ಧಾವಿಸಿ ದಾಳಿ ಮಾಡುತ್ತಿದ್ದಂತೆ ಮಕ್ಕಳು ಬೆದರಿದ್ದಾರೆ.

ಹೆಡ್ ಮಾಸ್ಟರ್‌ ಮೇಲೆ ಹಲ್ಲೆ ಮಾಡಿ ಚಪ್ಪಳಿ ಹಾರ ಹಾಕಿ ಗ್ರಾಮದಲ್ಲ ಮೆರವಣಿಗೆ ನಡೆಸಲಾಗಿದೆ. ಹಲವರು ಕಲ್ಲು ಎಸೆದಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಹೆಡ್ ಮಾಸ್ಟರ್ ವಶಕ್ಕೆ ಪಡೆದು ಆಸ್ಪತ್ರೆ ದಾಖಲಿಸಿದ್ದರೆ, ಇತ್ತ ಹೆಡ್ ಮಾಸ್ಟರ್ ಮೇಲೆ ದಾಳಿ ಮಾಡಿದ ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಟೀಚರ್ ಜೊತೆ ಸರಸವಾಡಿ ಸಿಕ್ಕಿ ಬಿದ್ದಿದ್ದ ಹೆಡ್ ಮಾಸ್ಟರ್

ಗ್ರಾಮಸ್ಥರು ಹಲವು ಬಾರಿ ಅಧ್ಯಕ್ಷನ ಪತ್ನಿ ಜೊತೆಗಿನ ಅಕ್ರಮ ಸಂಬಂಧ ಬಿಟ್ಟು ಬಿಡುವಂತೆ ಎಚ್ಚರಿಸಿದ್ದರು ಎನ್ನಲಾಗುತ್ತಿದೆ. ಆದರೆ ಮಾತು ಕೇಳಿದ ಹೆಡ್ ಮಾಸ್ಟರ್ ಮೇಲೆ ದಾಳಿ ನಡೆಸಿದ್ದಾರೆ. ರೋಹಿತ್ ಕುಮಾರ್ ರೇ ಈ ಹಿಂದೆ ಇಂತದ್ದೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು, ಅಸಿಸ್ಟೆಂಟ್ ಟೀಚರ್ ಜೊತೆ ಸರಸವಾಡಿ ಸಿಕ್ಕಿ ಬಿದ್ದ ಕಾರಣ ಅರೆಸ್ಟ್ ಆಗಿದ್ದರು . ಬಳಿಕ ಶಿಕ್ಷೆ ಅನುಭವಿಸಿದ್ದರು. ಶಿಕ್ಷೆಯ ಅಡಿಯಲ್ಲಿ ವರ್ಗಾವಣೆಗೊಂಡಿದ್ದರು. ಇದೀಗ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.



Source link

Leave a Reply

Your email address will not be published. Required fields are marked *