
ರಿಯಲ್ ಎಸ್ಟೇಟ್ ಎಜೆಂಟ್ ಕಿಡ್ನಾಪ್ & ಹತ್ಯೆ ಕೇಸ್, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್, ಪ್ರಕರಣ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಮತ್ತೊಬ್ಬಿರನ್ನು ಟ್ರೇಸ್ ಮಾಡಲಾಗಿದೆ ಎಂದಿದ್ದಾರೆ.
ಆನೇಕಲ್ (ಮಾ.09) ಆನೇಕಲ್‌ನ ರಿಯಲ್ ಎಸ್ಟೇಟ್ ಎಜೆಂಟ್ ಗೋಪಾಲ್ ಕಿಡ್ನಾಪ್ ಮಾಡಿ ಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆಡೆಯುತ್ತಿದೆ. ಹೊನ್ನಾಕಳಸಪುರದ ಗೋಪಾಲ್ ಪ್ರಯಾಣ ಮಾಡುತ್ತಿದ್ದ ಕಾರಿಗೆ ಟಾಟಾ ಎಸ್ ವಾಹನ ಮೂಲಕ ಡಿಕ್ಕಿ ಮಾಡಿ ಗೋಪಾಲ್‌ನ ಕಿಡ್ನಾಪ್ ಮಾಡಲಾಗಿತ್ತು. ಸತತ ಹುಡುಕಾಟದಲ್ಲಿದ್ದ ಪೊಲೀಸರಿಗೆ ತಮಿಳುನಾಡಿನಲ್ಲಿ ಗೋಪಾಲ್ ಮೃತದೇಹ ಪತ್ತೆಯಾಗಿತ್ತು.
ಘಟನೆ ಸಂಬಂದ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದಾರೆ. ಈ ಕೊಲೆ ಮಾಡಿದವರು ನಮ್ಮ ಸಮುದಾಯವರ ಅಲ್ಲ ಎಂದಿದ್ದಾರೆ. ಇದೇ ವೇಳೆ ಯಾರೇ ಆದರೂ ಕಾನೂನಿನ ಅಡಿ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದಿದ್ದಾರೆ.
ಗೋಪಾಲ್ ಕುಟುಂಬಸ್ಥಿರಿಗೆ ಸಾಂತ್ವಾನ ಹೇಳಲು ಆಗಮಿಸಿದ ಪ್ರದೀಪ್ ಈಶ್ವರ್, ಎಸ್‌ಪಿ ಚಂದ್ರಕಾಂತ್ ಜೊತೆ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಹಳೇ ದ್ವೇಷ ಸಂಬಂಧ ಕೊಲೆ ನಡೆದಿದೆ ಎಂದಿದ್ದಾರೆ. ನಾಳೆ (ಮಾ.10) ಬೆಳಗ್ಗೆ 10.30ರ ಒಳಗೆ ಮೃತದೇಹ ಆನೇಕಲ್‌ಗೆ ಬರಲಿದೆ. ಕಾನೂನು ಪ್ರಕ್ರಿಯೆ ಮುಗಿಸಲಾಗುತ್ತದೆ. ಕೊಲೆಯಾದ ಗೋಪಾಲ್ ಹಾಗೂ ಆರೋಪಿ ಮೋಹನ್ ಬಾಬು ನಡುವೆ ಕಳೆದ 10 ವರ್ಷಗಳಿಂದ ದ್ವೇಷವಿತ್ತು ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಕೊಲೆ ಮಾಡಿರುವುದು ನಮ್ಮ ಕಮ್ಯೂನಿಟಿ ಅಲ್ಲ
ಗೋಪಾಲ್ ಕಿಡ್ನಾಪ್ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ನಮ್ಮ ಸಮುದಾಯದ ಪಾತ್ರವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಆರೋಪಿಗಳು ಯಾರೇ ಆಗಿದ್ದರೂ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಆರೋಪಿಗಳನ್ನು ಕರೆತಂದು ವಿಚಾರಣೆ ಮಾಡುತ್ತೇವೆ. ಈಗಾಗಲೇ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಮತ್ತಿಬ್ಬರು ಶಿವಮೊಗ್ಗ ಕಡೆ ಟ್ರೇಸ್ ಆಗಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಆದಷ್ಟು ಬೇಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ. ಇದರ ನಡುವೆ ನಮ್ಮ ಸಮುದಾಯದವರು ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ.
ರೈಲ್ವೇ ಗೇಟ್ ಬಳಿ ಕಿಡ್ನಾಪ್
ಬೆಂಗಳೂರು ಹೊರವಲಯದ ಅನೇಕಲ್‌ನ ಕರ್ಪೂರ್ ರೈಲ್ವೇ ಗೇಟ್ ಬಳಿ ಈ ಕಿಡ್ನಾಪ್ ಪ್ರಕರಣ ನಡೆದಿತ್ತು. ಹೊನ್ನಾಕಳಸಪುರದ ಗೋಪಾಲ್ ಅತ್ತಿಬೆಲೆಯಿಂದ ಆನೇಕಲ್ ಕಡೆಗೆ ಬರುವಾಗ ಟಾಟಾ ಎಸ್ ವಾಹನ ಮೂಲಕ ಆರೋಪಿಗಳುು ಆಗಮಿಸಿದ್ದಾರೆ. ಗೋಪಾಲ್ ಚಲನ ವಲನ ಸಂಪೂರ್ಣವಾಗಿ ನಿಗಾ ಇರಿಸಿದ್ದ ಆರೋಪಿಗಳು ಗೋಪಾಲ್ ಕಾರಿಗೆ ಟಾಟಾ ಎಸ್ ವಾಹನ ಮೂಲಕ ಡಿಕ್ಕಿ ಹೊಡೆದಿದ್ದಾರೆ. ಕಣ್ಣಿಗೆ ಸ್ಪ್ರೇ ಮಾಡಿ ಗೋಪಾಲ್‌ನ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ. ಇತ್ತ ಗೋಪಾಲ್ ಸತೀಶ್‌ಗೂ ಸ್ಪ್ರೇ ಮಾಡಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಸತೀಶ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಗೋಪಾಲ್ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದರು.