ತಾರೀಖ್‌ ಪ್ರಮಾಣಕ್ಕೆ ಮೋದಿಗೆ ಆಹ್ವಾನ, ಸ್ಪೀಕರ್‌ ಬಿರ್ಲಾ ಭಾಗಿ

ತಾರೀಖ್‌ ಪ್ರಮಾಣಕ್ಕೆ ಮೋದಿಗೆ  ಆಹ್ವಾನ, ಸ್ಪೀಕರ್‌ ಬಿರ್ಲಾ ಭಾಗಿ

ತಾರೀಖ್‌ ಪ್ರಮಾಣಕ್ಕೆ ಮೋದಿಗೆ  ಆಹ್ವಾನ, ಸ್ಪೀಕರ್‌ ಬಿರ್ಲಾ ಭಾಗಿ

ನವದೆಹಲಿ: ಬಾಂಗ್ಲಾ ಪ್ರಧಾನಿಯಾಗಿ ಬಿಎನ್‌ಪಿ ಮುಖ್ಯಸ್ಥ ತಾರೀಖ್‌ ರೆಹಮಾನ್‌ ಫೆ.17ರಂದು ಪ್ರಮಾಣ ಸ್ವೀಕರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರ ಬದಲು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಭಾರತ ಸೇರಿ 13 ರಾಷ್ಟ್ರಗಳ ನಾಯಕರಿಗೆ ಬಾಂಗ್ಲಾದಿಂದ ಆಮಂತ್ರಣ

ಭಾರತ ಸೇರಿ 13 ರಾಷ್ಟ್ರಗಳ ನಾಯಕರಿಗೆ ಬಾಂಗ್ಲಾದಿಂದ ಆಮಂತ್ರಣ ರವಾನೆಯಾಗಿದೆ. ಆದರೆ ಶಪಥದ ದಿನದಂದೇ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಆಗಮಿಸುತ್ತಿರುವ ಕಾರಣ ಮೋದಿಯವರು ಬಾಂಗ್ಲಾ ಪ್ರವಾಸ ಕೈಗೊಳ್ಳುತ್ತಿಲ್ಲ. ಅತ್ತ ಸಂಬಂಧ ಸುಧಾರಣೆಯ ದೃಷ್ಟಿಯಿಂದ ಭಾರತದ ಉಪಸ್ಥಿತಿ ಅನಿವಾರ್ಯವಾಗಿರುವುದರಿಂದ ಬಿರ್ಲಾ ಮತ್ತು ಮಿಸ್ರಿ ಭಾಗವಹಿಸಲಿದ್ದಾರೆ.

ಇಂಡೋನೇಷ್ಯಾ ದೂತ ಬಾಂಗ್ಲಾಗೆ:

ಬಾಂಗ್ಲಾದೇಶದಲ್ಲಿ ಬಿಎನ್‌ಪಿ ನೇತೃತ್ವದ ಹೊಸ ಸರ್ಕಾರ ರಚನೆಯಾಗುತ್ತಿರುವ ಹೊತ್ತಿನಲ್ಲಿ, ಇಂಡೋನೇಷ್ಯಾಗೆ ಭಾರತದ ರಾಯಭಾರಿಯಾಗಿರುವ ಸಂದೀಪ್‌ ಚಕ್ರವರ್ತಿ ಅವರನ್ನು ಬಾಂಗ್ಲಾದ ದೂತರಾಗಿ ನೇಮಿಸಬಹುದು ಎನ್ನಲಾಗಿದೆ. ಚಕ್ರವರ್ತಿ ಅವರು 2012ರಿಂದ 2015ರ ವರೆಗೆ ಬಾಂಗ್ಲಾದ ಉಪರಾಯಭಾರಿಯಾಗಿದ್ದರು. ಸದ್ಯ ಪ್ರಣಯ್‌ ವರ್ಮಾ ಅವರು ಬಾಂಗ್ಲಾದ ದೂತರಾಗಿದ್ದಾರೆ.

Source link

Leave a Reply

Your email address will not be published. Required fields are marked *