Headlines

ಬೆಂಗಳೂರು:ಪೊಲೀಸ್ ವೇಷದಲ್ಲಿ ಬಂದು ದರೋಡೆ ಪ್ರಕರಣಕ್ಕೆ ಟ್ವಿಸ್ಟ್, ಪೆರೋಲ್ ನಲ್ಲಿ ಬಂದು ಕಳ್ಳತನ ಮಾಡಿ ಮತ್ತೆ ಜೈಲಿಗೆ! | Paroled Prisoner Linked To Fake Police Robbery In Bengaluru Badarahalli Police Stunned By Jail Trail

ಬೆಂಗಳೂರು:ಪೊಲೀಸ್ ವೇಷದಲ್ಲಿ ಬಂದು ದರೋಡೆ ಪ್ರಕರಣಕ್ಕೆ ಟ್ವಿಸ್ಟ್, ಪೆರೋಲ್ ನಲ್ಲಿ ಬಂದು ಕಳ್ಳತನ ಮಾಡಿ ಮತ್ತೆ ಜೈಲಿಗೆ! | Paroled Prisoner Linked To Fake Police Robbery In Bengaluru Badarahalli Police Stunned By Jail Trail



ಬೆಂಗಳೂರು:ಪೊಲೀಸ್ ವೇಷದಲ್ಲಿ ಬಂದು ದರೋಡೆ ಪ್ರಕರಣಕ್ಕೆ ಟ್ವಿಸ್ಟ್, ಪೆರೋಲ್ ನಲ್ಲಿ ಬಂದು ಕಳ್ಳತನ ಮಾಡಿ ಮತ್ತೆ ಜೈಲಿಗೆ! | Paroled Prisoner Linked To Fake Police Robbery In Bengaluru Badarahalli Police Stunned By Jail Trail

ಪೊಲೀಸ್ ಸಮವಸ್ತ್ರದಲ್ಲಿ ಬಂದ ದುಷ್ಕರ್ಮಿಗಳು, ಮನೆಯಲ್ಲಿದ್ದವರನ್ನು ಕಟ್ಟಿಹಾಕಿ 20 ಲಕ್ಷ ನಗದು ಮತ್ತು ಅರ್ಧ ಕೆಜಿ ಚಿನ್ನ ದೋಚಿದ್ದಾರೆ. ತನಿಖೆ ವೇಳೆ, ಪೆರೋಲ್ ಮೇಲೆ ಹೊರಬಂದಿದ್ದ ಕೈದಿಯೊಬ್ಬ ಈ ಕೃತ್ಯ ಎಸಗಿ, ದರೋಡೆಯ ಮರುದಿನವೇ ಮತ್ತೆ ಜೈಲಿಗೆ ವಾಪಸ್ ಆಗಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರು: ಪೊಲೀಸರ ಸಮವಸ್ತ್ರದಲ್ಲಿಯೇ ಮನೆಯೊಂದಕ್ಕೆ ನುಗ್ಗಿ 20 ಲಕ್ಷ ರು. ನಗದು ಮತ್ತು ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ಶಾಕಿಂಗ್ ಸಂಗತಿಯೊಂದು ತಿಳಿದುಬಂದಿದೆ. ಪೆರೋಲ್ ಮೇಲೆ ಜೈಲಿಂದ ಹೊರಗಡೆ ಬಂದ ವ್ಯಕ್ತಿ ಕಳ್ಳತನ ಮಾಡಿ ಮತ್ತೆ ಜೈಲಿಗೆ ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ.

ಟೆಕ್ನಿಕಲ್ ಎವಿಡೆನ್ಸ್ ನಿಂದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಆರೋಪಿ ಯಾರು ಅನ್ನೋದನ್ನ ಬ್ಯಾಡರಹಳ್ಳಿ ಪೊಲೀಸರು ಪತ್ತೆ ಮಾಡಿದ್ದಾರೆ. ಆ ಸುಳಿವು ಕಂಡು ಪೊಲೀಸರಿಗೆ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕಂದ್ರೆ ಪೊಲೀಸರಿಗೆ ಸಿಕ್ಕ ಎವಿಡೆನ್ಸ್ ಜೈಲಲ್ಲಿ ಇರುವ ಕೈದಿಯದ್ದಾಗಿದ್ದು, ಸದ್ಯ ಕೈದಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಮುಂದಾದಾಗ ಪೊಲೀಸರಿಗೆ ಮತ್ತೊಂದು ಶಾಕ್ ಆಗಿದೆ.

ಮತ್ತೆ ಪುನಃ ಜೈಲಿಗೆ ವಾಪಸ್ ಆಗಿರೋ ಬಗ್ಗೆ ಮಾಹಿತಿ

ಯಾಕೆಂದರೆ ಆ ಆರೋಪಿ ಪೆರೋಲ್ ಮೇಲೆ ಹೊರಗಡೆ ಬಂದಿದ್ದು, ಮತ್ತೆ ಪುನಃ ಜೈಲಿಗೆ ವಾಪಸ್ ಆಗಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ರಾಬರಿ ಆದ ಮರುದಿನವೇ ವಾಪಸ್ ಜೈಲಿಗೆ ಹೋಗಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು, ಕಳ್ಳತನದ ಬಳಿಕ ತನ್ನ ಆಪ್ತರಿಗೆ ಹಣ ಒಡವೆ ಕೊಟ್ಟು ಮತ್ತೆ ಆರೋಪಿ ಜೈಲು ಸೇರಿದ್ದಾನೆ. ಹೀಗಾಗಿ ಜೈಲಲ್ಲಿ ಇರೋ ಕೈದಿಯನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪೊಲೀಸರು ದಾಖಲೆ ಪ್ರಕ್ರಿಯೆ ಆರಂಭಿಸಿದ್ದಾರೆ.

ಈಗ ಪೊಲೀಸರಿಗೆ ಮನೆಯಲ್ಲಿ ಹಣ ಇರೋ ವಿಚಾರ ಗೊತ್ತಾಗಿದ್ದು ಹೇಗೆ ಅನ್ನೋ ಅನುಮಾನ ಬಲವಾಗಿ ಕಾಡುತ್ತಿದೆ. ಕುಟುಂಬಸ್ಥರ ಮೇಲೂ ಬ್ಯಾಡರಹಳ್ಳಿ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೊಂಬಾಳೆಗೌಡ ಜಮೀನು ಮಾರಾಟ ಮಾಡಿ ಒಂದೂವರೆ ಕೋಟಿ ಹಣ ಮನೆಯಲ್ಲಿ ಇಟ್ಟಿದ್ದರು. ಮನೆಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಹಣ ಇತ್ತು.‌ ಆದ್ರೆ ಅದರಲ್ಲಿ 20 ಲಕ್ಷ ಹಣ ಹಾಗೂ ಅರ್ಧ ಕೆ.ಜಿ‌ ಚಿನ್ನ‌ ಮಾತ್ರ ರಾಬರಿಯಾಗಿದೆ.

ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿರುವ ಹೊಂಬಾಳೇಗೌಡ

ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿರುವ ಹೊಂಬಾಳೇಗೌಡ ಅವರ ಬಿಇಎಲ್‌ ಮನೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ದರೋಡೆ ನಡೆದಿತ್ತು. ಪಿಎಸ್ ಐ ಸಮವಸ್ತ್ರದಲ್ಲಿ ಬಂದ ಕಳ್ಳರು ಕೈಕಾಲುಗಳಿಗೆ ಟೇಪ್ ಸುತ್ತಿ ಪಿಸ್ತೂಲ್ ತೋರಿಸಿ ಮನೆ ರಾಬರಿ ಮಾಡಿದ್ದರು. ದುಷ್ಕರ್ಮಿಗಳು ಪೊಲೀಸರ ಸಮವಸ್ತ್ರ ಧರಿಸಿ ಬಂದಿದ್ದ ಹಿನ್ನೆಲೆಯಲ್ಲಿ ದಂಪತಿ ಅವರಿಗೆ ಚೇರ್‌ ಕೊಟ್ಟು ಕೂರಿಸಿ ಕುಡಿಯಲು ನೀರು ಕೊಟ್ಟಿದ್ದರು.

ಪತ್ನಿ ನೀರು ಕೊಟ್ಟು ಒಳಗಡೆ ಹೋಗುತ್ತಿದಂತೆ ಹೊಂಬಾಳೇಗೌಡ ಅವರ ಕೈಯನ್ನು ಕಟ್ಟಿ ಹಾಕಿ ಬಾಯಿಗೆ ಟೆಪ್ ಸುತ್ತಿದ್ದರು. ಬಳಿಕ ಚಿನ್ನಾಭರಣ ತೊರಿಸುವಂತೆ ಚಾಕು ತೋರಿಸಿ ಬೆದರಿಸಿದ್ದರು. ನೀವು ಎಷ್ಟು ಎಷ್ಟು ಮಾಡಿಟ್ಟಿದ್ದಿರಾ ಎಂಬುದು ನಮಗೆ ಗೊತ್ತು ಅವುಗಳನ್ನು ತೋರಿಸಿ ಇಲ್ಲವಾದರೆ ನಿಮ್ಮನ್ನು ಇಲ್ಲಿಯೇ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಇನ್ನು ಪತಿಯ ಶಬ್ದ ಕೇಳಿ ಓಡಿ ಬಂದ ಪತ್ನಿಯನ್ನು ಕೂಡ ಕಟ್ಟಿ ಹಾಕಿದ್ದರು.



Source link

Leave a Reply

Your email address will not be published. Required fields are marked *