ಗೆಳೆಯನಿಗೆ ₹8 ಲಕ್ಷ ಕೊಟ್ಟು ಮೋಸ ಹೋದ ಟೆಕ್ಕಿ! ನ್ಯೂಜಿಲೆಂಡ್‌ಗೆ ಹಾರಿದವ ನಾಪತ್ತೆ, ಸಾಲದ ಸುಳಿಯಲ್ಲಿ ಐಟಿ ಉದ್ಯೋಗಿ! | Indian Techie In Debt After Friend Ghosts Him With 8 Lakh For New Zealand Studies Sat

ನ್ಯೂಜಿಲೆಂಡ್‌ನಲ್ಲಿ ಓದಲು ಹೋದ ಬಾಲ್ಯದ ಗೆಳೆಯನಿಗೆ 8 ಲಕ್ಷ ರೂಪಾಯಿ ಕೊಟ್ಟು ಐಟಿ ಉದ್ಯೋಗಿಯೊಬ್ಬರು ಮೋಸ ಹೋಗಿದ್ದಾರೆ. ಸ್ನೇಹಿತ ಸಂಪರ್ಕ ಕಡಿದುಕೊಂಡಿದ್ದರಿಂದ, ಸಾಲದ ಹಣ ತೀರಿಸಲಾಗದೆ, ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಾಲ್ಯದ ಗೆಳೆಯನಿಗೆ ಸಹಾಯ ಮಾಡಲು ಹೋಗಿ, ಭಾರತೀಯ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಈಗ ಸಾಲದ ಸುಳಿಯಲ್ಲಿ ಸಿಲುಕಿ, ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ರೆಡ್ಡಿಟ್‌ನಲ್ಲಿ ಇವರು ತಮ್ಮ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. ವಾರ್ಷಿಕ 12 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಈ ಐಟಿ ಉದ್ಯೋಗಿ, ತನ್ನ ಆತ್ಮೀಯ ಸ್ನೇಹಿತನಿಗೆ ನ್ಯೂಜಿಲೆಂಡ್‌ನಲ್ಲಿ ಮಾಸ್ಟರ್ಸ್ ಪದವಿ ಮಾಡಲು ಸಹಾಯ ಮಾಡಿದ್ದಾರೆ.

ಹಲವು ಕಂತುಗಳಲ್ಲಿ ಒಟ್ಟು 8 ಲಕ್ಷ ರೂಪಾಯಿ ಹಣವನ್ನು ಸ್ನೇಹಿತನಿಗೆ ಕೊಟ್ಟಿದ್ದಾರೆ. ಆದರೆ, ನ್ಯೂಜಿಲೆಂಡ್‌ಗೆ ಹೋದ ತಕ್ಷಣ ಆ ಸ್ನೇಹಿತ ಇವರ ಜೊತೆಗಿನ ಸಂಪರ್ಕವನ್ನು ಕಡಿಮೆ ಮಾಡಲು ಶುರುಮಾಡಿದ್ದಾನೆ. ಈಗಂತೂ ಫೋನ್ ಕರೆ, ಮೆಸೇಜ್ ಯಾವುದಕ್ಕೂ ಉತ್ತರ ಕೊಡದೆ ಸಂಪೂರ್ಣವಾಗಿ ಮಾಯವಾಗಿದ್ದಾನೆ.

ಲೋನ್ ಆಪ್ ಮೂಲಕ 5 ಲಕ್ಷ ರೂ. ಸಾಲ

ಸ್ನೇಹಿತನಿಗೆ ಹಣ ಹೊಂದಿಸಲು ಇವರು ಹಲವು ಲೋನ್ ಆ್ಯಪ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿದ್ದರು. ದುರದೃಷ್ಟವಶಾತ್, ಮೂರು ತಿಂಗಳ ಹಿಂದೆ ಇವರ ಕೆಲಸವೂ ಹೋಯಿತು. ಇದರಿಂದಾಗಿ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ಬಡ್ಡಿ ಬೆಳೆಯುತ್ತಾ ಹೋಯಿತು, ಜೊತೆಗೆ ಲೋನ್ ಏಜೆಂಟರ ಕಾಟವೂ ಹೆಚ್ಚಾಯಿತು. ಈ ಎಲ್ಲದರಿಂದ ಅವರ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಕುಟುಂಬದವರೂ ತನ್ನ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ

ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹತ್ತಿರದ ಸ್ನೇಹಿತರೇ ಹೀಗೆ ಮೋಸ ಮಾಡಲು ಹೇಗೆ ಸಾಧ್ಯ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಇನ್ನು ಕೆಲವರು, ಭಾರತದಲ್ಲಿ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿ, ಎಫ್‌ಐಆರ್ ದಾಖಲಿಸುವಂತೆ ಹೇಳಿದ್ದಾರೆ. ಮೊದಲು ನಿಮ್ಮ ಮಾನಸಿಕ ಆರೋಗ್ಯ ಸರಿಪಡಿಸಿಕೊಳ್ಳಿ, ಸಂಬಂಧಿಕರಿಂದ ಕಡಿಮೆ ಬಡ್ಡಿಗೆ ಹಣ ಪಡೆದು ಲೋನ್ ಆ್ಯಪ್‌ಗಳ ಕಾಟದಿಂದ ಪಾರಾಗಿ ಎಂದು ಹಲವರು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

Source link

Leave a Reply

Your email address will not be published. Required fields are marked *