Aishwarya Lekshmi: ಮದುವೆಗೆ ಮಾತ್ರ ನೋ.. ಆದರೆ ಆ ವಿಷಯಕ್ಕೆ ಓಕೆ ಎಂದ ನಟಿ ಐಶ್ವರ್ಯ ಲಕ್ಷ್ಮಿ | Actress Aishwarya Lekshmi On Relationships Without Marriage Gvd

Aishwarya Lekshmi: ಮದುವೆಗೆ ಮಾತ್ರ ನೋ.. ಆದರೆ ಆ ವಿಷಯಕ್ಕೆ ಓಕೆ ಎಂದ ನಟಿ ಐಶ್ವರ್ಯ ಲಕ್ಷ್ಮಿ | Actress Aishwarya Lekshmi On Relationships Without Marriage Gvd



Aishwarya Lekshmi: ಮದುವೆಗೆ ಮಾತ್ರ ನೋ.. ಆದರೆ ಆ ವಿಷಯಕ್ಕೆ ಓಕೆ ಎಂದ ನಟಿ ಐಶ್ವರ್ಯ ಲಕ್ಷ್ಮಿ | Actress Aishwarya Lekshmi On Relationships Without Marriage Gvd

ಮದುವೆ ಇಲ್ಲದೆ ಸಂಬಂಧದಲ್ಲಿ ಇರುವುದರ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹಂಚಿಕೊಂಡಿರುವ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದು ಕೇವಲ ಕಾನೂನಾತ್ಮಕ ದೃಢೀಕರಣದಿಂದ ಬಲಗೊಳ್ಳುವುದಿಲ್ಲ.

ಮದುವೆ ಇಲ್ಲದೆ ಸಂಬಂಧದಲ್ಲಿರುವುದರ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹಂಚಿಕೊಂಡಿರುವ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರ ದೃಷ್ಟಿಯಲ್ಲಿ, ಸಂಬಂಧ ಅನ್ನೋದು ಇಬ್ಬರು ವ್ಯಕ್ತಿಗಳ ನಡುವಿನ ತಿಳುವಳಿಕೆ, ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ.

ಅದು ಕೇವಲ ಕಾನೂನಾತ್ಮಕ ದೃಢೀಕರಣದಿಂದ ಬಲಗೊಳ್ಳುವುದಿಲ್ಲ, ಕೆಲವರು ಮದುವೆ ಇಲ್ಲದೆಯೂ ಸಂತೋಷವಾಗಿ ಬದುಕಬಹುದು. ನನ್ನ 34 ವರ್ಷಗಳ ಜೀವನದಲ್ಲಿ ನಾನು ಅನೇಕ ಮದುವೆಗಳನ್ನು, ಅನೇಕ ಜನರನ್ನು ನೋಡಿದ್ದೇನೆ. ಆದರೆ ಅವರೆಲ್ಲರೂ ನಿಜವಾಗಿಯೂ ಸಂತೋಷವಾಗಿರುವ ದಂಪತಿಗಳು ಕಡಿಮೆ. ಕೈಬೆರಳೆಣಿಕೆಯಷ್ಟು ಮಂದಿ ಮಾತ್ರ ಸಿಗುತ್ತಾರೆ ಎಂದು ಅವರು ಹೇಳುತ್ತಾರೆ.

ಇದೇ ವೇಳೆ, ಮದುವೆ ಒಂದು ತಪ್ಪು ಅಥವಾ ಅನಗತ್ಯ ಎಂದು ಅವರು ಹೇಳಿಲ್ಲ. ಬದಲಾಗಿ, ಅದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಎಂದು ಒತ್ತಿ ಹೇಳುತ್ತಾರೆ. ಕೆಲವರಿಗೆ ಮದುವೆ ಭದ್ರತೆ ಮತ್ತು ಸಾಮಾಜಿಕ ಮನ್ನಣೆ ನೀಡಬಹುದು; ಇತರರಿಗೆ, ಸ್ವತಂತ್ರವಾಗಿ ಬದುಕುವ ಸಂಬಂಧಗಳು ಸೂಕ್ತವಾಗಿರಬಹುದು. ಯಾವುದೇ ಸಂಬಂಧವಿರಲಿ, ಪರಸ್ಪರ ಗೌರವ, ನಂಬಿಕೆ ಮತ್ತು ಜವಾಬ್ದಾರಿ ಇರಬೇಕು ಎನ್ನುವುದೇ ಅವರ ಮಾತಿನ ತಿರುಳು.

ಅವರ ಈ ಹೇಳಿಕೆಗೆ ಬೆಂಬಲ ಮತ್ತು ವಿಮರ್ಶೆ ಎರಡೂ ವ್ಯಕ್ತವಾಗಿದ್ದು, ಇಂದಿನ ಯುವಜನರ ಸಂಬಂಧಗಳ ಬಗೆಗಿನ ಆಲೋಚನೆಗಳನ್ನು ಇದು ಪ್ರತಿಬಿಂಬಿಸುತ್ತದೆ. ಐಶ್ವರ್ಯ ಲಕ್ಷ್ಮಿ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ತಮ್ಮ ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಅವರು, ನಂತರ ಮಾಡೆಲಿಂಗ್ ಮತ್ತು ಸಿನಿಮಾಗೆ ಬಂದರು.

ವಿಶಿಷ್ಟ ಸ್ಥಾನ

‘ಮಾಯಾನದಿ’, ‘ವರತನ್’, ‘ಜಗಮೇ ತಂದಿರಂ’ ನಂತಹ ಚಿತ್ರಗಳಲ್ಲಿ ನಟಿಸಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಪಾತ್ರಗಳನ್ನು ಆಯ್ಕೆ ಮಾಡುವಲ್ಲಿ ಅವರು ತೋರುವ ಕಾಳಜಿ ಮತ್ತು ವಿಭಿನ್ನ ಕಥೆಗಳಲ್ಲಿ ನಟಿಸುವ ಆಸಕ್ತಿ, ಅವರನ್ನು ಹೊಸ ಪೀಳಿಗೆಯ ನಟಿಯರಲ್ಲಿ ಪ್ರಮುಖರನ್ನಾಗಿಸಿದೆ. ಮಲಯಾಳಂನಲ್ಲಿ ಅವರು ನಟಿಸಿರುವ ‘ಆಶಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಜೋಜು ಜಾರ್ಜ್ ಮತ್ತು ಊರ್ವಶಿ ನಟಿಸಿದ್ದು, ಜಫರ್ ಸನಲ್ ನಿರ್ದೇಶಿಸಿದ್ದಾರೆ.



Source link

Leave a Reply

Your email address will not be published. Required fields are marked *