ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿದೆ. ಇಡೀ ಚಿತ್ರರಂಗವೇ ರಣವೀರ್ ಅವರನ್ನು ಶ್ಲಾಘಿಸುತ್ತಿದ್ದರೆ, ಪತ್ನಿ ದೀಪಿಕಾ ಪಡುಕೋಣೆ ಮಾತ್ರ ಮೌನವಾಗಿದ್ದಾರೆ. ಪತಿಯ ಗೆಲುವಿನ ಬಗ್ಗೆ ದೀಪಿಕಾ ಮೌನಕ್ಕೆ ಅವರ ರಾಜಕೀಯ ಸಿದ್ಧಾಂತಗಳೇ ಕಾರಣವೇ ಎಂಬ ಚರ್ಚೆ ಶುರುವಾಗಿದೆ.
ಬೆಂಗಳೂರು: ಧುರಂಧರ್-2 ಸಿನಿಮಾ ಬಾಲಿವುಡ್ ಇತಿಹಾಸದಲ್ಲೇ ಅತಿದೊಡ್ಡ ಓಪನಿಂಗ್ ಪಡೆದುಕೊಂಡಿದೆ. ಸಿನಿಲೋಕದ ದಿಗ್ಗಜರೆಲ್ಲಾ ರಣವೀರ್ ಸಿಂಗ್‌ನ ಪ್ರಶಂಸಿಸ್ತಾ ಇದ್ದಾರೆ. ಆದ್ರೆ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಮಾತ್ರ ಫುಲ್ ಸೈಲೆಂಟ್. ಧುರಂಧರ್-2 ವಿಶೇಷ ಪ್ರದರ್ಶನಕ್ಕೂ ದೀಪಿಕಾ ಬಂದಿಲ್ಲ. ಪತಿಯ ಚಿತ್ರದ ಸಕ್ಸಸ್ ಬಗ್ಗೆ ಒಂದು ಪೋಸ್ಟ್ ಕೂಡ ಹಾಕಿಲ್ಲ. ಧುರಂಧರ್ ಬಂದ ಮೇಲೆ ಗಂಡ ಹೆಂಡತಿ ನಡುವೆ ಏನ್ ನಡೀತಿದೆ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಧುರಂಧರ್-2 ಸೂಪರ್ ಡೂಪರ್ ಸಕ್ಸಸ್..!
ಯೆಸ್ ಸದ್ಯ ಧುರಂಧರ್-2 ಸಿನಿಮಾ ಭಾರತದಾದ್ಯಂತ ಸಕ್ಸಸ್ಫುಲ್ ಪ್ರದರ್ಶನ ಕಾಣ್ತಾ ಇದೆ. ಬಾಕ್ಸಾಫೀಸ್ನಲ್ಲಂತೂ ಈ ಸಿನಿಮಾ ಹಣದ ಹೊಳೆಯನ್ನೇ ಹರಿಸ್ತಾ ಇದೆ. ಮೊದಲ ವಾರಾಂತ್ಯದಲ್ಲೇ ಧುರಂಧರ್-2 ಕಲೆಕ್ಷನ್ 500 ಕೋಟಿ ದಾಟಿದೆ. ಧುರಂಧರ್ ಸಿನಿಮಾದು ಬರೀ ಬಾಕ್ಸಾಫೀಸ್ ಸಕ್ಸಸ್ ಅಲ್ಲ, ಇದು ಭಾರತೀಯ ಸಿನಿರಂಗದ ಬೆಂಚ್ ಮಾರ್ಕ್ ಸಿನಿಮಾ ಅಂತ ಎಲ್ಲರೂ ಹೊಗಳ್ತಾ ಇದ್ದಾರೆ. ರಾಮ್ ಗೋಪಾಲ್ ವರ್ಮಾ, ರಾಜಮೌಳಿ, ಅಲ್ಲು ಅರ್ಜುನ್, ರಾಮ್‌ಚರಣ್ ಮಹೇಶ್ ಬಾಬು, ನಮ್ಮ ರಿಷಬ್ ಶೆಟ್ಟಿ ಸೇರಿದಂತೆ ಸಿನಿಲೋಕದ ದಿಗ್ಗಜರು ಧುರಂಧರ್ ಮೂವಿನ ಕೊಂಡಾಡ್ತಾ ಇದ್ದಾರೆ.
ಆದ್ರೆ ಹೊರಗಿನವರಿಂದ ಇಷ್ಟೆಲ್ಲಾ ಪ್ರಶಂಸೆ ಬಂದರೂ ರಣವೀರ್ ಸಿಂಗ್‌ಗೆ ಅವರ ಪತ್ನಿಯಿಂದಲೇ ಇಲ್ಲಿತನಕ ಒಂದೇ ಒಂದು ವಿಶ್ ಬಂದಿಲ್ಲ. ಹೌದು ಧುರಂಧರ್ ಸಿನಿಮಾ ಸ್ಪೆಷಲ್ ಶೋಗೆ ನಟಿ ಮತ್ತು ರಣವೀರ್ ಪತ್ನಿ ದೀಪಿಕಾ ಬಂದಿರಲಿಲ್ಲ. ಹೋಗಲಿ ಸಿನಿಮಾ ಇಷ್ಟು ದೊಡ್ಡ ಸಕ್ಸಸ್ ಕಂಡಮೇಲಾದ್ರೂ ಒಂದು ಪೋಸ್ಟ್ ಕೂಡ ಹಾಕಿ ಅಭಿನಂದಿಸಿಲ್ಲ. ಇದನ್ನ ನೋಡಿದ ಫ್ಯಾನ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೋಲ್ ಮಾಡ್ತಾ ಇದ್ದಾರೆ. ಜಗತ್ತೇ ಗೆದ್ದರೂ ರಣವೀರ್‌ಗೆ ಮನೆಯಲ್ಲಿ ಹೆಂಡತಿಯ ಮೆಚ್ಚುಗೆ ಸಿಕ್ಕಿಲ್ಲವಲ್ಲ ಅಂತ ಟ್ರೋಲ್ ಮಾಡ್ತಾ ಇದ್ದಾರೆ.
ಎಡಪಂಥೀಯ ದೀಪಿಕಾಗೆ ಧುರಂಧರ್ ನೋಡಿ ಉರಿ..?
ಹೌದು ದೀಪಿಕಾ ಹೇಳಿ ಕೇಳಿ ಲೆಫ್ಟಿಸ್ಟ್. ಈ ಹಿಂದೆ ರಾಹುಲ್ ಗಾಂಧಿಯವರನ್ನ ನಾನು ಪ್ರಧಾನಿಯಾಗಿ ನೋಡಬಯಸ್ತಿನಿ ಅಂತ ಹೇಳಿದ್ರು. 2020ರಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ನಡೆದಾಗ ಕ್ಯಾಂಪಸ್‌ಗೆ ಭೇಟಿ ನೀಡಿ ಎಡಪಂಥೀಯ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಒಂಥರಾ ಮಹಿಳಾವಾದಿ, ವಿಚಾರವಾದಿಯಂತೆ ಬ್ರ್ಯಾಂಡ್ ಆಗಿದ್ದ ದೀಪಿಕಾಗೆ ಪತಿಯ ಧುರಂಧರ್-1 ಚಿತ್ರ ನೋಡಿನೇ ಅರಗಿಸಿಕೊಳ್ಳೋದಕ್ಕೆ ಆಗಿರಲಿಲ್ಲವಂತೆ. ಆಗಲೂ ಡಿಪ್ಪಿ ಸಿನಿಮಾ ಬಗ್ಗೆ ಮಾತನಾಡಿರಲಿಲ್ಲ. ಈಗಲಂತೂ ದುರಂಧರ್ -2 ಸಕ್ಸಸ್ ನೋಡಿ ಪ್ರಕಾಶ್ ರೈ, ರಮ್ಯಾ ಸೇರಿದಂತೆ ಕೆಲ ಲೆಫ್ಟಿಸ್ಟ್ ನಟರು ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಪಾಪ ದೀಪಿಕಾಗೆ ಪತಿಯ ಸಿನಿಮಾನ ವಿರೋಧ ಮಾಡೋದಕ್ಕೂ ಆಗ್ತಿಲ್ಲ. ಸುಮ್ಮನೆ ಇರೋದಕ್ಕೂ ಆಗ್ತಿಲ್ಲ..!
ಸದ್ಯ ಧುರಂಧರ್ ಸಿನಿಮಾ ಬಂದ ಮೇಲೆ ಬರೀ ದೀಪಿಕಾ ಅಲ್ಲ ಇಡೀ ಬಾಲಿವುಡ್ ಹಿಂದೆ ಮಾಡ್ತಾ ಇದ್ದ ಪ್ರೊಪೊಗಾಂಡಾ ಚಿತ್ರಗಳನ್ನ ಹುಡುಕಿ ಹುಡುಕಿ ಟ್ರೋಲ್ ಮಾಡಲಾಗ್ತಾ ಇದೆ. ಈ ಹಿಂದೆ ಶಾರೂಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ದೀಪಿಕಾ ಐಎಸ್ಐ ಏಜೆಂಟ್ ಪಾತ್ರ ಮಾಡಿದ್ರು. ಪಾಕ್ ಏಜೆಂಟ್ ಆಗಿ ಬಿಕಿನಿ ತೊಟ್ಟು ರಾ ಏಜೆಂಟ್ ಶಾರೂಖ್ ಜೊತೆ ಡ್ಯುಯೆಟ್ ಹಾಡಿದ್ರು.
ಇದೆಲ್ಲವನ್ನೂ ಈಗ ಯದ್ವಾ ತದ್ವಾ ಟ್ರೋಲ್ ಮಾಡಲಾಗ್ತಾ ಇದೆ. ಪತಿಯ ಗೆಲುವನ್ನೂ ಸಂಭ್ರಮಿಸಬೇಕೋ , ತನ್ನನ್ನ ಟ್ರೋಲ್ ಮಾಡ್ತಾ ಇರೋದನ್ನ ಜೋಡಿ ದುಃಖ ಪಡಬೇಕೋ ಒಂದೂ ಗೊತ್ತಾಗದೇ ದೀಪಿಕಾ ಮೌನಕ್ಕೆ ಜಾರಿದ್ದಾರಂತೆ.
ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.