Headlines

ಹಳೇ ರಿಲೇಷನ್‌ಶಿಪ್‌ ನೋವಿನಿಂದ ಹೊರಬರಲು ವಿಜಯ್‌ ದೇವರಕೊಂಡ ಸಹಾಯ ಮಾಡಿದ್ದು ನಿಜ: ರಶ್ಮಿಕಾ ಮಂದಣ್ಣ ಓಪನ್ ಟಾಕ್! | Rashmika Mandanna Vijay Deverakonda Relationship Wedding Rumors San

ಹಳೇ ರಿಲೇಷನ್‌ಶಿಪ್‌ ನೋವಿನಿಂದ ಹೊರಬರಲು ವಿಜಯ್‌ ದೇವರಕೊಂಡ ಸಹಾಯ ಮಾಡಿದ್ದು ನಿಜ: ರಶ್ಮಿಕಾ ಮಂದಣ್ಣ ಓಪನ್ ಟಾಕ್! | Rashmika Mandanna Vijay Deverakonda Relationship Wedding Rumors San



ಹಳೇ ರಿಲೇಷನ್‌ಶಿಪ್‌ ನೋವಿನಿಂದ ಹೊರಬರಲು ವಿಜಯ್‌ ದೇವರಕೊಂಡ ಸಹಾಯ ಮಾಡಿದ್ದು ನಿಜ: ರಶ್ಮಿಕಾ ಮಂದಣ್ಣ ಓಪನ್ ಟಾಕ್! | Rashmika Mandanna Vijay Deverakonda Relationship Wedding Rumors San

ರಶ್ಮಿಕಾ ತಮ್ಮ ಹಿಂದಿನ ‘ನೋ ಚಾಯ್ಸ್’ ಸಂಬಂಧದ ಬಗ್ಗೆ ಮಾತನಾಡಿದ್ದು ಮತ್ತೆ ಮುನ್ನೆಲೆಗೆ ಬಂದಿದೆ. ಆ ಭಾವನಾತ್ಮಕ ನೋವಿನಿಂದ ಹೊರಬರಲು ಮತ್ತು ಆನ್‌ಲೈನ್ ಟ್ರೋಲಿಂಗ್‌ ಎದುರಿಸುವಾಗ ವಿಜಯ್ ತಮಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ರೂಮರ್‌ಗಳ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರ ಮದುವೆ ಫೆ.26 ರಂದು ಉದಯಪುರದಲ್ಲಿ ನಡೆಯಬಹುದು ಎನ್ನುವ ವದಂತಿಗಳು ಜೋರಾಗಿದೆ. ಈ ಜೋಡಿ ಈಗಾಗಲೇ ಕಳೆದ ಅಕ್ಟೋಬರ್‌ನಲ್ಲಿ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನೋ ಮಾತುಗಳೂ ಇವೆ. ಆದರೆ, ಇಬ್ಬರೂ ಕೂಡ ಈ ಬಗ್ಗೆ ಮೌನವಾಗಿದ್ದು, ಯಾವುದನ್ನೂ ಖಚಿತವಾಗಿ ಹೇಳಿಲ್ಲ. ಆದರೆ ಇತ್ತೀಚೆಗೆ ಪಾಪರಾಜಿಗಳು ಕೇಳಿದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ನಗುತ್ತಲೇ ನಿರಾಕರಣೆ ಮಾಡಿದ್ದಾರೆ.

ಈ ಎಲ್ಲಾ ಕ್ಷಣದಿಂದಾಗಿ ಅವರ ಹಳೆಯ ಮಾತು ಈಗ ಮತ್ತೆ ವೈರಲ್ ಆಗುತ್ತಿದೆ. ರಶ್ಮಿಕಾ ಒಂದು ಕಾಲದಲ್ಲಿ “ಬೇರೆ ದಾರಿಯೇ ಕಾಣದಂತ” ಸಂಬಂಧದಲ್ಲಿದ್ದೆ ಎಂದು ಹೇಳಿದ್ದರು.

‘ನೋ ಚಾಯ್ಸ್’ ರಿಲೇಷನ್‌ಷಿಪ್‌ ಬಗ್ಗೆ ಮಾತನಾಡಿದ್ದ ರಶ್ಮಿಕಾ

ಕಳೆದ ವರ್ಷ ಸಂದರ್ಶನವೊಂದರಲ್ಲಿ, ರಶ್ಮಿಕಾ ಜೀವನದಲ್ಲಿ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಬಗ್ಗೆ ಮಾತನಾಡಿದ್ದರು.. “ನೀವು ಯಾರೊಂದಿಗೆ ಇರಬೇಕೆಂದು ಬಯಸುತ್ತೀರಿ ಎಂಬುದನ್ನು ನೀವೇ ಆರಿಸಿಕೊಳ್ಳಬೇಕು. ಬೇರೆ ದಾರಿಯಿಲ್ಲದೆ ಈತನ ಜೊತೆಗೆ ಇರುತ್ತಿದ್ದೇನೆ ಅನ್ನೋ ಸ್ಥಿತಿಯಲ್ಲಿ ನೀವು ಇರಬಾದರು. ನಾನು ಇದನ್ನು ಮಾಡಿದ್ದೇನೆ. ಇಂದು ನಾನು ಒಬ್ಬ ವ್ಯಕ್ತಿ ನನ್ನ ಜೊತೆ ಇರಬೇಕು ಎಂದು ಬಯಸಿದಾಗ, ನಾನೂ ಸಂತೋಷವಾಗಿರುತ್ತೇನೆ. ಆ ವ್ಯಕ್ತಿ ಕೂಡ ಸಂತೋಷವಾಗಿರುತ್ತಾನೆ ಮತ್ತು ನಮ್ಮ ಸುತ್ತಮುತ್ತಲ ಎಲ್ಲರೂ ಸಂತೋಷವಾಗಿರುತ್ತಾರೆ’ ಎಂದು ಹೇಳಿದ್ದರು.

ರಶ್ಮಿಕಾ ಈ ವೇಳೆ ಯಾರ ಹೆಸರನ್ನೂ ಹೇಳಲಿಲ್ಲ. ಆದರೆ, ಹಿಂದೊಮ್ಮೆ ತಾನು ಇಷ್ಟವೇ ಪಡದ ಸ್ಥಳದಲ್ಲಿ ಸಿಲುಕಿಕೊಂಡಿದ್ದೆ ಹಾಗೂ ಅದರಿಂದ ಪಾಠ ಕಲಿತಿದ್ದೇನೆ ಅನ್ನೋದನ್ನು ಮಾತ್ರ ಹಂಚಿಕೊಂಡಿದ್ದರು. ಸಂಬಂಧಗಳನ್ನು ಸ್ವಾತಂತ್ರ್ಯದಿಂದ ಆರಿಸಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಸುತ್ತಮುತ್ತಲ ಜನ ಕೂಡ ಶಾಂತವಾಗಿರಬೇಕು ನನ್ನ ನಿರ್ಧಾರ ಬಲವಂತದ್ದಾಗಿರಬಾರದು ಎಂದಿದ್ದಾರೆ.

ನಾನು ನೆಮ್ಮದಿಯಾಗಲು ಸಹಾಯ ಮಾಡಿದ್ದು ವಿಜಯ್‌ ದೇವರಕೊಂಡ

‘ದಿ ಗರ್ಲ್‌ಫ್ರೆಂಡ್’ ಚಿತ್ರದ ಪ್ರಚಾರದ ಸಮಯದಲ್ಲಿ, ರಶ್ಮಿಕಾ ತಮ್ಮ ಹಿಂದಿನ ಭಾವನಾತ್ಮಕ ನೋವಿನ ಬಗ್ಗೆ ಮಾತನಾಡಿದರು. ದಿನಗಳು ಕಳೆದಂತೆ ಈ ನೋವಿನಿಂದ ನಾನು ಗುಣವಾದೆ. ವಿಜಯ್‌ ಆ ಸಮಯದಲ್ಲಿ ನನಗೆ ಸಹಾಯ ಮಾಡಿದರು. “ಅದೃಷ್ಟವಶಾತ್, ನನಗೆ ಒಬ್ಬ ಸಂಗಾತಿ ಇದ್ದಾರೆ, ಹಿಂದಿನ ಸಂಬಂಧದಿಂದ ಉಂಟಾದ ನೋವಿನಿಂದ ನನ್ನನ್ನು ಗುಣಪಡಿಸಿದ್ದಾರೆ. ಆದ್ದರಿಂದ, ಭೂಮಾ ಆಗಿ, ಅವರು ನನಗೆ ಗುಣಪಡಿಸಲು ಸಹಾಯ ಮಾಡಿದ್ದಾರೆ. ಈ ಚಿತ್ರ ನನಗೆ ಹೇಗೆ ಸರಿಯೋ ಹಾಗೆಯೇ, ಅವರು ಸಮಾನರು… ನಾನು ಅವರಿಗೆ ಚಪ್ಪಾಳೆ ತಟ್ಟಬೇಕು ಮತ್ತು ಅದಕ್ಕಾಗಿ ಅವರಿಗೆ ಧನ್ಯವಾದ ಹೇಳಬೇಕು’ ಎಂದಿದ್ದಾರೆ.

ಆನ್‌ಲೈನ್‌ ಟ್ರೋಲಿಂಗ್‌ ಸಮಯದಲ್ಲೂ ಸಹಾಯ ಮಾಡಿದ್ದ ವಿಜಯ್‌

ಟ್ರೋಲ್‌ ಆದಾಗ ನನ್ನ ಸ್ಥಿತಿ ಹೇಗಿರುತ್ತದೆ ಅನ್ನೋದನ್ನೂ ರಶ್ಮಿಕಾ ಹೇಳಿದ್ದರು. ‘ನೀವು ಟ್ರೋಲ್‌ ಆಗುತ್ತೀರಿ. ಅದೂ ಕೂಡ ನಿಮಗೆ ಗೊತ್ತಿರುತ್ತದೆ. ನನ್ನ ಮನೆಯ ಬಗ್ಗೆ ನನ್ನ ಜೊತೆಗಾರನ ಬಗ್ಗೆ ಮಾತನಾಡುವಾಗ ಇಷ್ಟೆಲ್ಲಾ ಟ್ರೋಲ್‌ ಅನುಭವಿಸುತ್ತಿದ್ದೇನಾ ಅನಿಸುತ್ತಿತ್ತು. ಈ ಸಮಯದಲ್ಲಿ ಅವರು (ವಿಜಯ್‌), ಆ ರೀತಿಯದ್ದು ಏನೂ ಇಲ್ಲ. ಯಾಕಿಷ್ಟು ಅತಿಯಾದ ಆಲೋಚನೆ ಮಾಡ್ತೀಯಾ? ನಾನು ಇದನ್ನು ನೋಟಿಸ್‌ ಮಾಡೋದೇ ಇಲ್ಲ ಎಂದಿದ್ದ. ಅದಕ್ಕೆ ನಾನು ನೀನು ನೋಡೋದಿಲ್ಲ. ಆದರೆ, ನಾನು ನೋಡುತ್ತೇನೆ. ಕೆಲವು ಸಮಯದಲ್ಲಿ ನನ್ನ ಟ್ಯಾಗ್‌ ಮಾಡಿ ನಾನು ನೋಡುವಂತೆ ಮಾಡುತ್ತಿದ್ದರು ಎಂದು ರಶ್ಮಿಕಾ ಹೇಳಿದ್ದರು. ಈ ಹಂತದಲ್ಲಿ ವಿಜಯ್‌ ನನನ್ನು ಶಾಂತ ಮಾಡುತ್ತಿದ್ದ. ನಾನು ಸುರಕ್ಷಿತವಾಗಿರುವಂತೆ ಪ್ರಯತ್ನ ಮಾಡುತ್ತಿದ್ದ ಹಾಗೂ ಈ ಬಗ್ಗೆ ಹೆಚ್ಚು ಯೋಚನೆ ಮಾಡಬೇಡಿ ಎಂದು ಹೇಳುತ್ತಿದ್ದ ಎಂದಿದ್ದಾರೆ.

ಮದುವೆ ಬಗ್ಗೆ ಇನ್ನೂ ಖಚಿತವಿಲ್ಲ

ಈ ಹಿಂದೆ ಬಂದ ವರದಿಯ ಪ್ರಕಾರ, ಫೆಬ್ರವರಿ 26 ರಂದು ಉದಯಪುರದ ಅರಮನೆಯಲ್ಲಿ ಈ ಜೋಡಿ ವಿವಾಹವಾಗಲಿದ್ದಾರೆ. ನಂತರ ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸುವುದಾಗಿಯೂ ಅದು ಹೇಳಿದೆ. ಆದರೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.



Source link

Leave a Reply

Your email address will not be published. Required fields are marked *