‘ದೈವದ ಹೆಸರಲ್ಲಿ ಮಾಡಿದ ದುಡ್ಡನ್ನು ಆಸ್ಪತ್ರೆಗೆ ಸುರಿಸುತ್ತೇನೆ..’ ಕಾಂತಾರಕ್ಕೆ ಎಚ್ಚರಿಕೆ ನೀಡಿದ ಪಿಲ್ಚಂಡಿ ದೈವ! | Pilchandi Daiva Warning Kantara Controversy Money To Hospital San

Pilchandi Daiva Warns Kantara Critics Money Made in Gods Name Will Go to Hospitals ‘ಕಾಂತಾರ’ ಚಿತ್ರದಿಂದ ದೈವಕ್ಕೆ ಅಪಹಾಸ್ಯವಾಗಿದೆ ಎಂದು ಆರೋಪಿಸಿ ದೈವಾರಾಧಕರು ಪಿಲ್ಚಂಡಿ ದೈವದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಬೆಂಗಳೂರು (ಅ.9): ‘ಕಾಂತಾರ’ ಚಿತ್ರದ ವಿರುದ್ಧ ದೈವದ ಅಪಹಾಸ್ಯದ ಆರೋಪದ ಹಿನ್ನೆಲೆಯಲ್ಲಿ, ಕೆಲವು ದೈವಾರಾಧಕರು ಪಿಲ್ಚಂಡಿ ದೈವದ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ದೈವದ ನುಡಿಗಳು ದೈವಾರಾಧಕರಿಗೆ ಅಭಯ ನೀಡುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡಿವೆ.

‘ನಾನು ನಿಮ್ಮ ಹಿಂದಿದ್ದೇನೆ, ನಿಮ್ಮ ಹೋರಾಟ ಮುಂದುವರೆಸಿ’ ಎಂದು ದೈವವು ದೈವಾರಾಧಕರಿಗೆ ಅಭಯ ನೀಡಿದ್ದು, ‘ಹುಚ್ಚು ಕಟ್ಟಿದವರ ಹುಚ್ಚು ಹಿಡಿಸುತ್ತೇನೆ’ ಎಂದು ಹೇಳುವ ಮೂಲಕ ಎಚ್ಚರಿಕೆಯನ್ನೂ ನೀಡಿದೆ. ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು (ಆದಾಯವನ್ನು) ಆಸ್ಪತ್ರೆಗೆ ಸುರಿಸುವಂತೆ ಮಾಡುತ್ತೇನೆ ಎಂದೂ ಹೇಳಿದೆ.

ನಟನನ್ನೇ ದೈವವಾಗಿ ಆರಾಧಿಸುವ ಅವಿವೇಕಿಗಳಿದ್ದಾರೆ

ಇನ್ನು ದೈವಾರಾಧಕ ಶ್ರೀಧರ್‌ ಕವತ್ತಾರ್‌ ಮಾತನಾಡಿದ್ದು, ದೈವದ ಅಪಹಾಸ್ಯದಿಂದ ನಮಗೆ ತುಂಬಾ ಬೇಸರವಾಗಿದೆ. ನಮ್ಮ ಹೋರಾಟಕ್ಕೆ ದೈವವು ಸಂಪೂರ್ಣ ಬೆಂಬಲವಿದೆ ಎಂದು ನುಡಿ ನೀಡಿದೆ ಎಂದರು. ಅಲ್ಲದೆ, ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ, ‘ಇಂತಹ ತಪ್ಪನ್ನು ತುಳುವರು ಮಾಡಬೇಡಿ. ನಟನನ್ನೇ ದೈವವಾಗಿ ಆರಾಧಿಸುವಂತಹ ಅವಿವೇಕಿಗಳಿದ್ದಾರೆ. ದೈವಕ್ಕೆ ಯಾರೇ ಅಪಹಾಸ್ಯ ಮಾಡಿದರೂ ನಾವು ಅದನ್ನು ವಿರೋಧಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.

Source link

Leave a Reply

Your email address will not be published. Required fields are marked *