Headlines

ಬೈಕ್‌ಗೆ ನಾಯಿಮರಿ ಕಟ್ಟಿ ಎಳೆದೊಯ್ದ ದಂಪತಿ; ಪೊಲೀಸರೇ ಇಂಥವರನ್ನ ಬಂಧಿಸಿ ಜೈಲಿಟ್ಟಿ ಎಂದ ನೆಟ್ಟಿಗರು! | Kolkata Couple Drags Dog Tied To Scooter Video Viral Sparks Outrage Sat

ಬೈಕ್‌ಗೆ ನಾಯಿಮರಿ ಕಟ್ಟಿ ಎಳೆದೊಯ್ದ ದಂಪತಿ; ಪೊಲೀಸರೇ ಇಂಥವರನ್ನ ಬಂಧಿಸಿ ಜೈಲಿಟ್ಟಿ ಎಂದ ನೆಟ್ಟಿಗರು! | Kolkata Couple Drags Dog Tied To Scooter Video Viral Sparks Outrage Sat



ಬೈಕ್‌ಗೆ ನಾಯಿಮರಿ ಕಟ್ಟಿ ಎಳೆದೊಯ್ದ ದಂಪತಿ; ಪೊಲೀಸರೇ ಇಂಥವರನ್ನ ಬಂಧಿಸಿ ಜೈಲಿಟ್ಟಿ ಎಂದ ನೆಟ್ಟಿಗರು! | Kolkata Couple Drags Dog Tied To Scooter Video Viral Sparks Outrage Sat

ದಂಪತಿಯೊಬ್ಬರು ಚಲಿಸುತ್ತಿರುವ ಬೈಕ್‌ಗೆ ನಾಯಿಯನ್ನು ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಹಿಂಸೆಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರಾಣಿಗಳ ಮೇಲೆ ಮನುಷ್ಯರು ನಡೆಸುವ ಕ್ರೌರ್ಯದ ಹಲವು ಘಟನೆಗಳು ಆಗಾಗ ಇಂಟರ್ನೆಟ್‌ನಲ್ಲಿ ಚರ್ಚೆಗೆ ಬರುತ್ತವೆ. ಇದೀಗ ಕೋಲ್ಕತ್ತಾದ ಕಲ್ಯಾಣಿ ಎಕ್ಸ್‌ಪ್ರೆಸ್‌ವೇಯಿಂದ ಬಂದಿರುವ ಒಂದು ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಚಲಿಸುತ್ತಿರುವ ಬೈಕ್‌ಗೆ ನಾಯಿಯೊಂದನ್ನು ಕಟ್ಟಿ, ಅದನ್ನು ವೇಗವಾಗಿ ಓಡುವಂತೆ ಒತ್ತಾಯಿಸಿದ ಅಮಾನವೀಯ ದೃಶ್ಯ ಇದಾಗಿದೆ.

ಮನಕಲಕುವ ವಿಡಿಯೋ

ಈ ಮನಕಲಕುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿ ಬೈಕ್ ಓಡಿಸುತ್ತಿದ್ದರೆ, ಮಹಿಳೆಯೊಬ್ಬಳು ಹಿಂಬದಿ ಸವಾರಳಾಗಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಇವರು ಬೈಕ್‌ನ ಪಕ್ಕಕ್ಕೆ ನಾಯಿಯೊಂದರ ಕುತ್ತಿಗೆಗೆ ಬೆಲ್ಟ್ ಹಾಕಿ ಕಟ್ಟಿದ್ದಾರೆ. ವೇಗವಾಗಿ ಚಲಿಸುವ ಬೈಕ್ ಜೊತೆಗೆ ಓಡಲು ನಾಯಿ ಹರಸಾಹಸ ಪಡುತ್ತಿರುವ ದೃಶ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೈಕ್ ವೇಗ ಹೆಚ್ಚುತ್ತಿದ್ದಂತೆ, ನಾಯಿ ಕೂಡಾ ಜೊತೆಗೆ ಓಡಲು ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಬ್ಬ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ನಾಯಿಯನ್ನು ವಾಹನದಲ್ಲಿ ಕೂರಿಸಿಕೊಂಡು ಹೋಗುವ ಬದಲು, ಈ ರೀತಿ ರಸ್ತೆಯಲ್ಲಿ ಎಳೆದೊಯ್ದಿದ್ದು ಪ್ರಾಣಿ ಹಿಂಸೆ ಎಂದು ಹಲವರು ಕಿಡಿಕಾರಿದ್ದಾರೆ. ಈ ದಂಪತಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

Scroll to load tweet…

ನೆಟ್ಟಿಗರ ಆಕ್ರೋಶ

ಬೈಕ್‌ನ ವೇಗಕ್ಕೆ ಸರಿಸಮನಾಗಿ ಓಡಲು ಆ ನಾಯಿ ಪಡುತ್ತಿರುವ ಕಷ್ಟ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಇದು ಆ ಪ್ರಾಣಿಯ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ಮೂಡಿಸಿದೆ. ಬೈಕ್ ಚಲಿಸುವಾಗ ನಾಯಿಯ ಕುತ್ತಿಗೆಗೆ ಪಟ್ಟಿ (ಲೀಶ್) ಕಟ್ಟಿರುವುದರಿಂದ, ಒಂದು ವೇಳೆ ನಾಯಿ ಆಯತಪ್ಪಿ ಬಿದ್ದರೆ, ಅದರ ಕುತ್ತಿಗೆಗೆ ಗಂಭೀರ ಗಾಯವಾಗುವ ಸಾಧ್ಯತೆಯಿದೆ ಎಂದು ಹಲವರು ಎಚ್ಚರಿಸಿದ್ದಾರೆ. ಇಂಥವರಿಗೆ ಸಾಕುಪ್ರಾಣಿಗಳನ್ನು ಸಾಕಲು ಅರ್ಹತೆಯೇ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಯಾರಾದ್ರೂ ಈ ನಾಯಿಯನ್ನು ಅವರಿಂದ ರಕ್ಷಿಸಬೇಕು. ಇವರಿಗೆ ತಲೆ ಸರಿ ಇಲ್ಲ’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ‘ಎಂತಹ ಕೆಟ್ಟ ಜನ ಇವರು!’ ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ.



Source link

Leave a Reply

Your email address will not be published. Required fields are marked *