Headlines

ಟ್ರೈನ್​, ಬಸ್​ನಲ್ಲಿ ಹೀಗೆ ನಿಲ್ಲೋ ಹುಡುಗಿಯರೇ ಎಚ್ಚರ! ಬ್ಯಾಗ್​ನಲ್ಲಿ ಕೈ ಹಾಕಿ ಈ ಆಸಾಮಿ ಏನ್​ ಮಾಡ್ದ ನೋಡಿ | Funny Video Gone Viral As A Man Spray Deodrant To Woman Due To Sweat Smell Suc

ಟ್ರೈನ್​, ಬಸ್​ನಲ್ಲಿ ಹೀಗೆ ನಿಲ್ಲೋ ಹುಡುಗಿಯರೇ ಎಚ್ಚರ! ಬ್ಯಾಗ್​ನಲ್ಲಿ ಕೈ ಹಾಕಿ ಈ ಆಸಾಮಿ ಏನ್​ ಮಾಡ್ದ ನೋಡಿ | Funny Video Gone Viral As A Man Spray Deodrant To Woman Due To Sweat Smell Suc



ಟ್ರೈನ್​, ಬಸ್​ನಲ್ಲಿ ಹೀಗೆ ನಿಲ್ಲೋ ಹುಡುಗಿಯರೇ ಎಚ್ಚರ! ಬ್ಯಾಗ್​ನಲ್ಲಿ ಕೈ ಹಾಕಿ ಈ ಆಸಾಮಿ ಏನ್​ ಮಾಡ್ದ ನೋಡಿ | Funny Video Gone Viral As A Man Spray Deodrant To Woman Due To Sweat Smell Suc

ಮೆಟ್ರೋ ಟ್ರೈನ್​ನಲ್ಲಿ ಸ್ಲೀವ್​ಲೆಸ್​ ಡ್ರೆಸ್​ ಹಾಕಿಕೊಂಡು ನಿಂತಿದ್ದ ಯುವತಿಯ ಕಂಕುಳಿಂದ ಬರುತ್ತಿದ್ದ ಬೆವರಿನ ವಾಸನೆಗೆ ಬೇಸತ್ತ ಸಹ ಪ್ರಯಾಣಿಕನೊಬ್ಬ, ಬ್ಯಾಗ್​ನಲ್ಲಿ ಕೈ ಹಾಕಿ ಏನು ಮಾಡಿದ್ದಾನೆ ನೋಡಿ . ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಯುವಕನ ಕೃತ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಹೇಳಿ ಕೇಳಿ ಈಗ ಬಿರು ಬಿಸಿಲು. ಹೆಚ್ಚಿನವರು ಆರಾಮದಾಯಕ ಬಟ್ಟೆ ಹಾಕಲು ಬಯಸೋದು ಮಾಮೂಲು. ಅಷ್ಟಕ್ಕೂ ಇಂದಿನ ಕೆಲವು ಹೆಣ್ಣುಮಕ್ಕಳಿಗೆ ಕಾಲ ಯಾವುದೇ ಆದರೂ, ಅವರ ಬಟ್ಟೆ ಮಾತ್ರ ಆರಾಮದಾಯಕವೇ ಆಗಿರುತ್ತದೆ. ಬಟ್ಟೆ ಎಲ್ಲಿ ಎಂದು ಹುಡುಕಬೇಕು ಅಷ್ಟೇ. ಎಲ್ಲಾ ಕಡೆ ಹರಿದಿರುವ, ಮೈ ಮಾಟವೆಲ್ಲಾ ಪ್ರದರ್ಶನ ಮಾಡುವ, ಸಿನಿಮಾ ತಾರೆಯರಿಗಿಂತ ತಾವೇನೂ ಕಮ್ಮಿ ಇಲ್ಲ ಎಂದು ತೋರಿಸುವ ಬಟ್ಟೆ ಹಾಕಿ ಅದನ್ನು ದಿನಪೂರ್ತಿ ಸರಿ ಮಾಡಿಕೊಳ್ಳುವವರಿಗೂ ಏನೂ ಕಡಿಮೆ ಇಲ್ಲ ಬಿಡಿ. ಅರ್ಧಂಬರ್ಧ ಬಟ್ಟೆ ಹಾಕೋದು, ಆಮೇಲೆ ಅವನು ದಿಟ್ಟಿಸಿ ನೋಡಿದ, ಇವನು ಗುರಾಯಿಸಿದ ಎಂದು ಕಂಪ್ಲೇಂಟ್​ ಮಾಡೋದು, ಇಂಥ ಬಟ್ಟೆ ತೊಟ್ಟಾಗ ಯಾರೂ ನೋಡದೇ ಹೋದರೆ ಮನದಲ್ಲಿಯೇ ಬೇಸರ ಪಟ್ಟುಕೊಳ್ಳುವುದು ಇವೆಲ್ಲಾ ಸೈಕಾಲಾಜಿ ಬಿಡಿ. ಇಂಥದ್ದೆಲ್ಲಾ ದಿನನಿತ್ಯವೂ ನಡೆದೇ ಇರುತ್ತದೆ ಅನ್ನಿ.

ಆಸಾಮಿ ಏನ್ ಮಾಡಿದ?

ಆದರೆ ಈ ವಿಡಿಯೋದಲ್ಲಿ ಮಾತ್ರ ಈ ಆಸಾಮಿ ಮಾಡಿದ್ದೇ ಬೇರೆ. ಇದು ಮೆಟ್ರೋ ಟ್ರೈನ್​ನಲ್ಲಿ ನಡೆದಿರುವ ಘಟನೆ. ಇಲ್ಲಿ ಒಬ್ಬ ಯುವತಿ ಸ್ಲೀವ್​ಲೆಸ್​ ಡ್ರೆಸ್​ ಹಾಕಿಕೊಂಡು ಕೈಯನ್ನು ಮೇಲೆ ಮಾಡಿ ನಿಂತಿದ್ದಾಳೆ. ಅಲ್ಲಿಯೇ ಕುಳಿತ ಆಸಾಮಿಯೊಬ್ಬ ಅವಳನ್ನು ಗುರಾಯಿಸಿದ್ದಾನೆ. ಆರಂಭದಲ್ಲಿ ಆತನನ್ನು ನೋಡಿದರೆ, ಆತ ಬೇರೆಯದ್ದೇ ಗುರಾಯಿಸುವಂತೆ ಕಾಣುತ್ತಿದೆ. ಆದರೆ ಅವನು ಮಾಡಿದ್ದು ಹಾಗಲ್ಲ. ಮೂಗು ಮುಚ್ಚಿಕೊಂಡಾಗ ಗೊತ್ತಾಗಿದೆ. ಆ ಮಹಿಳೆಯಿಂದ ಬೆವರು ವಾಸನೆ ಬರುತ್ತಿದೆ ಎಂದು.

ಬ್ಯಾಗ್​ನಲ್ಲಿ ಕೈ ಹಾಕಿದ!

ಕೂಡಲೇ ಬ್ಯಾಗ್​ನಲ್ಲಿ ಕೈ ಹಾಕಿದ ಆತ, ಅಲ್ಲಿಂದ ಡಿಯೋಡ್ರೆಂಟ್​ ಒಂದನ್ನು ತೆಗೆದು ಪುಸ್​ ಎಂದು ಆಕೆಯ ಕಂಕುಳಲ್ಲಿ ಸ್ಪ್ರೇ ಮಾಡಿದ್ದಾನೆ. ಅದರಿಂದ ಗಾಬರಿಗೊಂಡ ಆಕೆ ಹಿಗ್ಗಾಮುಗ್ಗ ಬೈದಿದ್ದಾಳೆ. ಟ್ರೈನ್​ನಲ್ಲಿ ಇರುವ ಎಲ್ಲರೂ ಗೊಳ್​ ಎಂದು ನಕ್ಕಿದ್ದಾರೆ.

ಆತನ ಪರ ಕಮೆಂಟ್​

ಅಷ್ಟಕ್ಕೂ ಇದು ನಿಜವೋ ಅಥವಾ ಸ್ಕ್ರಿಪ್ಟೆಡ್ಡೋ ಗೊತ್ತಿಲ್ಲ. ಇಂಥ ರೀಲ್ಸ್​ಗಳನ್ನು ವ್ಯೂವ್ಸ್​ಗೋಸ್ಕರ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೂ, ಇದೊಂದು ರೀತಿಯಲ್ಲಿ ಹೀಗೆ ನಿಂತುಕೊಳ್ಳುವವರಿಗೆ ಪಾಠವೂ ಆಗಿದೆ. ಆತ ಮಾಡಿರುವ ಕೃತ್ಯಕ್ಕೆ ಎಲ್ಲರೂ ಅವನ ಪರವಾಗಿಯೇ ಕಮೆಂಟ್​ ಹಾಕುತ್ತಿದ್ದಾರೆ ಎನ್ನುವುದೇ ವಿಶೇಷ. dailyauthority ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್ ಮಾಡಲಾಗಿದೆ.



Source link

Leave a Reply

Your email address will not be published. Required fields are marked *