JASSM-ER missile capabilities: ಇರಾನ್ ವಿರುದ್ಧ ಮಾರಕ ಕ್ಷಿಪಣಿ ಬಳಕೆಗೆ ಅಮೆರಿಕದಿಂದ ತಯಾರಿ? | Jassm Er Missile Capabilities Is America Preparing To Use Deadly Missiles Against Iran

JASSM-ER missile capabilities: ಇರಾನ್ ವಿರುದ್ಧ ಮಾರಕ ಕ್ಷಿಪಣಿ ಬಳಕೆಗೆ ಅಮೆರಿಕದಿಂದ ತಯಾರಿ? | Jassm Er Missile Capabilities Is America Preparing To Use Deadly Missiles Against Iran



JASSM-ER missile capabilities: ಇರಾನ್ ವಿರುದ್ಧ ಮಾರಕ ಕ್ಷಿಪಣಿ ಬಳಕೆಗೆ ಅಮೆರಿಕದಿಂದ ತಯಾರಿ? | Jassm Er Missile Capabilities Is America Preparing To Use Deadly Missiles Against Iran

JASSM-ER missile capabilities: ತನ್ನ ಎಫ್-35 ಯುದ್ಧ ವಿಮಾನಗಳ ಹಾನಿಯಿಂದ ಹತಾಶೆಗೊಂಡಿರುವ ಅಮೆರಿಕ, ಇದೀಗ ಇರಾನ್ ವಿರುದ್ಧ ತನ್ನ ಮಾರಕ JASSM-ER ಕ್ಷಿಪಣಿಗಳನ್ನು ನಿಯೋಜಿಸುತ್ತಿದೆ. ಈ ಸ್ಟೆಲ್ತ್ ಕ್ಷಿಪಣಿಗಳು ರಾಡಾರ್‌ಗೆ ಕಾಣಿಸುವುದಿಲ್ಲ ಎಂದು ವರದಿಯಾಗಿದೆ.

ಮಾರಕ ಕ್ಷಿಪಣಿಯನ್ನು ಶತ್ರುದೇಶ ಇರಾನ್ ಕಡೆ ತಿರುಗಿಸಿದ ಅಮೆರಿಕಾ

ವಾಷಿಂಗ್ಟನ್: ಈಗಾಗಲೇ 5 ವಾರಗಳನ್ನು ಪೂರೈಸಿದ್ದರೂ ಹಳೆಯ ಹುಮ್ಮಸ್ಸಿನಲ್ಲಿ ಯುದ್ಧವನ್ನು ಮುಂದುವರೆಸಿದ್ದ ಅಮೆರಿಕಕ್ಕೆ, ತನ್ನ ಸೇನೆಯ ಕಿರೀಟದಂತಿದ್ದ 2 ಅತ್ಯಾಧುನಿಕ ಎಫ್-35 ಯುದ್ಧ ವಿಮಾನಗಳಿಗೆ ಹಾನಿಯಾದ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಹತಾಶೆ ಹಾಗೂ ಕೋಪದಿಂದ ತನ್ನ ಬತ್ತಳಿಕೆಯಲ್ಲಿರುವ ಮಾರಕ ಕ್ಷಿಪಣಿಯನ್ನು ಶತ್ರುದೇಶ ಇರಾನ್ ಕಡೆ ತಿರುಗಿಸಿದೆ ಎಂದು ಅಲ್ಲಿನ ಪ್ರತಿಷ್ಠಿತ ಸಂಸ್ಥೆ ಬ್ಲೂಂಬರ್ಗ್ ವರದಿ ಮಾಡಿದೆ.

ಇತ್ತೀಚೆಗಷ್ಟೇ ಅಧ್ಯಕ್ಷ ಟ್ರಂಪ್, ಇರಾನ್‌ ಅನ್ನು ಶಿಲಾಯುಗಕ್ಕೆ ಕಳಿಸುವ ಬೆದರಿಕೆ ಹಾಕಿದ್ದರು. ಇದು ತೀವ್ರ, ದಾಳಿಯ ಮುನ್ಸೂಚನೆಯಾಗಿತ್ತು. ಇದರ ಬೆನ್ನಲ್ಲೇ, ಜೆಎಎಸ್‌ಎಸ್‌ಎಂ-ಇಆರ್ ಎಂಬ ತನ್ನ ದೂರಗಾಮಿ ಸ್ಟೆಲ್ (ರಾಡಾರ್ ಕಣ್ಣಿಗೆ ಕಾಣದ) ಕಿಪಣಿಯ ಪ್ರಯೋಗಕ್ಕೆ ಸಿದ್ಧತೆಗಳನ್ನು ಆರಂಭಿಸಿದು, ಪೆಸಿಫಿಕ್ ಸೇರಿದಂತೆ ಅನ್ಯ ಪ್ರದೇಶಗಳಲ್ಲಿ ನಿಯೋಜನೆಯಾಗಿದ್ದ ಅವುಗಳನ್ನಿಗ ಮಧ್ಯ ಪ್ರಾಚ್ಯದ ಕಡೆ ಸಾಗಿಸಬಹುದು ಎನ್ನಲಾಗಿದೆ.

ಈ ಕ್ಷಿಪಣಿ ಮಾರಕವೇಕೆ?: ಜೆಎಎಸ್ಎಸ್ ಎಂ-ಇಆರ್ ಎಂಬುದು ಅಮೆರಿಕದ ನೌಕಾಪಡೆ ಮತ್ತು ವಾಯುಪಡೆ ಬಳಸಬಹುದಾದ ಕ್ಷಿಪಣಿಯಾಗಿದ್ದು, ಇದನ್ನು ಯುದ್ಧವಿಮಾನಗಳಿಂದ ಉಡಾವಣೆ ಮಾಡಬಹುದಾಗಿದೆ. ಹಳೆಯ ಜೆಎಎಸ್ ಎಸ್‌ಎಂಗಿಂತ ಎರಡುಪಟ್ಟು (600 ಮೈಲಿ) ದೂರದವರೆಗೆ ತಲುಪುವ ಸಾಮರ್ಥ್ಯ ಇದಕ್ಕಿದೆ. 450 ಕೆ.ಜಿ. ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥವಿರುವ ಇದು ರಾಡಾರ್‌ ಕಣ್ಣಿಗೂ ಬೀಳುವುದಿಲ್ಲ. ಒಂದು ಜೆಎಸ್‌ಎಸ್‌ಎಂ-ಇಆರ್‌ನ ಬೆಲೆ 13 ಕೋಟಿ ಆಗಿದೆ.

ಈ JSSM-ER ಕ್ಷಿಪಣಿ ಬಳಸಿದರೆ ಲಾಭವೇನು?:

ಇರಾನ್‌ನ ಬಂಕರ್, ವಾಯುನೆಲೆ, ಕಮಾಂಡ್ ಕೇಂದ್ರಗಳನ್ನು ಪುಡಿಗಟ್ಟಲು ಯುದ್ಧ ವಿಮಾನವನ್ನು ಬಳಸಿದರೆ ಅದು ಅಮೆರಿಕಕ್ಕೆ ದುಬಾರಿಯಾಗುತ್ತದೆ. ಜತೆಗೆ, ಅದರ ಮೇಲೆ ದಾಳಿಯಾದರೆ ಒಳಗಿರುವ ಪೈಲಟ್ ಅನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಆದರೆ ಕ್ಷಿಪಣಿಗಳನ್ನು ಬಳಸುವುದರಿಂದ ಖರ್ಚು ತಗ್ಗುವ ಜತೆಗೆ ಪೈಲಟ್‌ಗಳ ಅಮೂಲ್ಯ ಜೀವಗಳೂ ಉಳಿಯುತ್ತವೆ.

ಇದನ್ನೂ ಓದಿ: ಮಹಿಳಾ ಕಸ್ಟಮ್ಸ್ ಅಧಿಕಾರಿ ಮೇಲೆ ಅತ್ಯಾ*ಚಾರ: ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ : ಉದ್ಯಮಿ ಅಂದರ್

ಬಳಕೆ ಮೊದಲಲ್ಲ: ಅಮೆರಿಕ ಈ ಕ್ಷಿಪಣಿಗಳನ್ನು ಈಗಾಗಲೇ ಇರಾನ್ ವಿರುದ್ಧ ಬಳಸಿದೆ. ಯುದ್ಧ ಆರಂಭವಾದ 4 ವಾರಗಳಲ್ಲಿ ಸುಮಾರು 1000 ಜೆಎಸ್‌ಎಸ್‌ಎಂ-ಇಆರ್‌ ಕ್ಷಿಪಣಿಗಳು ಇರಾನ್ ವಿರುದ್ಧ ಬಳಕೆಯಾಗಿವೆ. ಇದರ ಪರಿಣಾಮ, ಫೆ.28ಕ್ಕೂ ಮುನ್ನ 2,300 ಇದ್ದ ಇವುಗಳ ಸಂಖ್ಯೆಯೀಗ 425ಕ್ಕೆ ಕುಸಿದಿದೆ. ಇವುಗಳಲ್ಲೂ 75 ಕ್ಷಿಪಣಿಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಪರಿಣಾಮ ಅವುಗಳ ಬಳಕೆ ಸಾಧ್ಯವಾಗದು. ಅತ್ತ ವರ್ಷಕ್ಕೆ 390ರಷ್ಟು (ತಿಂಗಳಿಗೆ 33) ಮಾತ್ರ ಉತ್ಪಾದನೆಯಾಗುವ ಇವುಗಳ ತಯಾರಿಕೆಯನ್ನು ವೇಗ ಹೆಚ್ಚಿಸುವುದು ಸಾಧ್ಯವಿಲ್ಲ.

  • ಈ ಜೆಎಎಸ್‌ಎಸ್‌ಎಂ-ಇಆರ್ ಬಳಸಿದರೆ ಇರಾನ್ ಶಿಲಾಯುಗಕ್ಕೆ ಜಾರುವ ಭೀತಿ
  • ವಿಶ್ವಾದ್ಯಂತ ಇದ್ದ ಕ್ಷಿಪಣಿಗಳೀಗ ಗಲ್ಫ್ ದೇಶಗಳತ್ತ ದೌಡು, ನಿಯೋಜನೆ
  • ಸೇನಾ ಹಾನಿಯ ವೆಚ್ಚ ತಗ್ಗಿಸಲೂ ಅಮೆರಿಕಕ್ಕೆ ಈ ಕ್ರಮ ಸಹಕಾರಿ
  • ಇದು ಭಯಂಕರ ಮಿಸೈಲ್ ಆದ್ರೂ ಅಮೆರಿಕದಲ್ಲಿ ಸಾಕಷ್ಟು ಸ್ಟಾಕ್ ಇಲ್ಲ
  • ಕಡಿಮೆ ಲಭ್ಯತೆಯ ಈ ಕ್ಷಿಪಣಿಯ ದಿಢೀರ್ ಉತ್ಪಾದನೆ ಹೆಚ್ಚಳ ಈಗ ಅಸಾಧ್ಯ



Source link

Leave a Reply

Your email address will not be published. Required fields are marked *