Headlines

ರಾಯಚೂರು: ಎಲ್ಲಮ್ಮ ದೇವಿ ಜಾತ್ರೆಯಲ್ಲಿ ಬಾಡೂಟ ಸವಿದು ಹೊರಟಿದ್ದವ ಭೀಕರ ರಸ್ತೆ ಅಪಘಾತಕ್ಕೆ ಬಲಿ! | Raichur Man Dies After Truck Bike Terrible Accident Near Maski

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಿ ಯಲ್ಲಮ್ಮ ಜಾತ್ರೆಯಿಂದ ಬಾಡೂಟ ಮುಗಿಸಿ ಹಿಂತಿರುಗುತ್ತಿದ್ದ ಬೈಕ್ ಸವಾರನಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಟಿಪ್ಪರ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.

ರಾಯಚೂರು (ಫೆ.4): ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ಬಾಡೂಟ ಸವೆದು ಹೊರಟಿದ್ದ ಬೈಕ್‌ ಸವಾರ ಭೀಕರ ಆಪಘಾತದಲ್ಲಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಯಕ್ಲಾಸಪುರ ಬಳಿ ನಡೆದಿದೆ.

ಬಸವರಾಜ್ (31) ಮೃತ ದುರ್ದೈವಿ. ಮೃತ ಬಸವರಾಜ್ ದೇವದುರ್ಗ ತಾಲೂಕಿನ ಚಡಕಲಗುಡ್ಡ ಗ್ರಾಮದವರು ಎಂದು ಗುರುತಿಸಲಾಗಿದೆ. ಸಿರವಾರ ತಾಲೂಕಿನ ಕುರಕುಂದ ಗ್ರಾಮದಿದಂದ ಪಾಮನಕಲ್ಲೂರಿಗೆ ಹೊರಟಿದ್ದ ವೇಳೆ ದುರಂತ ಸಂಭವಿಸಿದೆ.

ಇದನ್ನೂ ಓದಿ: ರಾಯಚೂರು: ಲವ್ ಫೇಲ್ ಅಂತ ರೈಲು ಹಳಿ ಮೇಲೆ ಮಲಗಿ ಪ್ರಾಣ ಬಿಟ್ಟ ನೀರಮಾನ್ವಿ ಯುವತಿ!

ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ

ಕುರಕುಂದ ಗ್ರಾಮದಿಂದ ಪಾಮನಕಲ್ಲೂರಿಗೆ ಹೊರಟಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರನ ದೇಹ ಛಿದ್ರವಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿರುವ ಖಾಸಗಿ ಕಂಪನಿಗೆ ಸೇರಿ ಟಿಪ್ಪರಿ ಚಾಲಕನ ನಿರ್ಲಕ್ಶ್ಯವೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿರುವ ಟಿಪ್ಪರ್ ಡ್ರೈವರ್.

ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source link

Leave a Reply

Your email address will not be published. Required fields are marked *