Headlines

58ರ ಮಹಿಳೆ ಸೀನಿದಾಗ ಮೂಗಿನಿಂದ ಹೊರಬಿತ್ತು 1 ಇಂಚಿನ ಜೀವಂತ ಹುಳು! ಚಿಕಿತ್ಸೆಗೆ ಹೋದರೆ ವೈದ್ಯರೇ ಶಾಕ್! | Greece Woman Sneezes Out Live Worms Sheep Botfly Larvae Medical Case Sat

58ರ ಮಹಿಳೆ ಸೀನಿದಾಗ ಮೂಗಿನಿಂದ ಹೊರಬಿತ್ತು 1 ಇಂಚಿನ ಜೀವಂತ ಹುಳು! ಚಿಕಿತ್ಸೆಗೆ ಹೋದರೆ ವೈದ್ಯರೇ ಶಾಕ್! | Greece Woman Sneezes Out Live Worms Sheep Botfly Larvae Medical Case Sat



58ರ ಮಹಿಳೆ ಸೀನಿದಾಗ ಮೂಗಿನಿಂದ ಹೊರಬಿತ್ತು 1 ಇಂಚಿನ ಜೀವಂತ ಹುಳು! ಚಿಕಿತ್ಸೆಗೆ ಹೋದರೆ ವೈದ್ಯರೇ ಶಾಕ್! | Greece Woman Sneezes Out Live Worms Sheep Botfly Larvae Medical Case Sat

58 ವರ್ಷದ ಮಹಿಳೆಯೊಬ್ಬರು ಸೀನಿದಾಗ ಅವರ ಮೂಗಿನಿಂದ ಜೀವಂತ ಹುಳು ಹೊರಬಿದ್ದಿದೆ. ವೈದ್ಯರು ಪರೀಕ್ಷಿಸಿದಾಗ, ಅದು ಕುರಿಗಳ ಮೂಗಿನಲ್ಲಿ ಬೆಳೆಯುವ ‘ಶೀಪ್ ಬಾಟ್ ಫ್ಲೈ’ ಲಾರ್ವಾ ಎಂದು ತಿಳಿದುಬಂದಿದ್ದು, ಶಸ್ತ್ರಚಿಕಿತ್ಸೆ ಮೂಲಕ ಇನ್ನೂ 10 ಲಾರ್ವಾಗಳನ್ನು ಹೊರತೆಗೆಯಲಾಗಿದೆ.

ಗ್ರೀಸ್‌ನಲ್ಲಿ 58 ವರ್ಷದ ಮಹಿಳೆಯೊಬ್ಬರು ಸೀನಿದಾಗ, ಅವರ ಮೂಗಿನಿಂದ ಸುಮಾರು ಒಂದು ಇಂಚು ಉದ್ದದ ಜೀವಂತ ಹುಳುಗಳು ಹೊರಬಿದ್ದಿವೆ. ಈ ಘಟನೆ ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ, ಈ ಮಹಿಳೆ ಕುರಿಗಳು ಮೇಯುತ್ತಿದ್ದ ಜಾಗದ ಬಳಿ ಕೆಲಸ ಮಾಡುತ್ತಿದ್ದರು. ಆಗ ತಮ್ಮ ಮುಖದ ಸುತ್ತ ಸಾಕಷ್ಟು ನೊಣಗಳು ಹಾರಾಡುತ್ತಿರುವುದನ್ನು ಅವರು ಗಮನಿಸಿದ್ದರು. ಆದರೆ, ಅದನ್ನವರು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂದು ವಾರದ ನಂತರ, ಅವರಿಗೆ ತೀವ್ರವಾದ ಸೈನಸ್ ನೋವು ಮತ್ತು ಕೆಮ್ಮು ಶುರುವಾಯಿತು. ಬೇರೆ ಯಾವುದೇ ರೋಗಲಕ್ಷಣಗಳು ಇಲ್ಲದ ಕಾರಣ, ಅವರು ಇದನ್ನೂ ನಿರ್ಲಕ್ಷಿಸಿದ್ದರು.

10 ಲಾರ್ವಾ ಮತ್ತು ಒಂದು ಪ್ಯೂಪಾ ಹೊರತೆಗೆದ ವೈದ್ಯರು

ಆದರೆ, ಅಕ್ಟೋಬರ್ 15 ರಂದು ಅವರು ಜೋರಾಗಿ ಸೀನಿದಾಗ, ಮೂಗಿನಿಂದ ಒಂದು ಹುಳು ಹೊರಗೆ ಬಂತು. ಇದರಿಂದ ಗಾಬರಿಗೊಂಡ ಅವರು ತಕ್ಷಣ ಇಎನ್‌ಟಿ ತಜ್ಞರನ್ನು ಭೇಟಿಯಾದರು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಅವರ ಮೂಗಿನೊಳಗಿನಿಂದ 10 ಲಾರ್ವಾಗಳನ್ನು ಮತ್ತು ಒಂದು ಪ್ಯೂಪಾವನ್ನು ಹೊರತೆಗೆದರು. ಪರೀಕ್ಷೆ ನಡೆಸಿದಾಗ, ಇವು ‘ಓಸ್ಟ್ರಸ್ ಓವಿಸ್’ ಅಥವಾ ‘ಶೀಪ್ ಬಾಟ್ ಫ್ಲೈ’ ಎಂಬ ನೊಣಗಳ ಲಾರ್ವಾಗಳು ಎಂದು ಪತ್ತೆಯಾಯಿತು. ಸಾಮಾನ್ಯವಾಗಿ ಈ ನೊಣಗಳು ಕುರಿಗಳ ಮೂಗಿನಲ್ಲಿ ಬೆಳೆಯುತ್ತವೆ. ಮನುಷ್ಯರಲ್ಲಿ ಇವು ಬೆಳೆಯುವುದು ತುಂಬಾನೇ ಅಪರೂಪ.

ಮನುಷ್ಯನ ದೇಹದಲ್ಲಿ ಲಾರ್ವಾ ಬೆಳೆಯಲ್ಲ

ಮನುಷ್ಯರ ದೇಹವನ್ನು ಈ ಲಾರ್ವಾಗಳು ಪ್ರವೇಶಿಸಿದರೂ, ಅವುಗಳಿಗೆ ಬೆಳೆಯಲು ಬೇಕಾದ ವಾತಾವರಣ ಸಿಗುವುದಿಲ್ಲ. ಆದರೆ ಈ ಮಹಿಳೆಯ ಮೂಗಿನ ಒಳಭಾಗದ ಮೂಳೆಯೊಂದು ಬಾಗಿದ್ದರಿಂದ, ಲಾರ್ವಾಗಳಿಗೆ ಬೆಳೆಯಲು ಜಾಗ ಸಿಕ್ಕಿದೆ. ಸಾಮಾನ್ಯವಾಗಿ ಮನುಷ್ಯರ ದೇಹದೊಳಗೆ ಈ ಲಾರ್ವಾಗಳು ಸತ್ತುಹೋಗುತ್ತವೆ. ಆದರೆ, ಅನುಕೂಲಕರ ವಾತಾವರಣ ಸಿಕ್ಕಿದ್ದರಿಂದ ಇವು ಪ್ಯೂಪಾ ಹಂತದವರೆಗೂ ಬೆಳೆದಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದಿದ್ದರಿಂದ, ಲಾರ್ವಾಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಯಿತು. ಮಹಿಳೆ ಈಗ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *