Headlines

Karnataka Budget: ಈ ಬಾರಿ 1.32 ಲಕ್ಷ ಕೋಟಿ ಸಾಲಕ್ಕೆ ಸಿದ್ದರಾಮಯ್ಯ ತೀರ್ಮಾನ, ರಾಜ್ಯದ ಸಾಲ ಈಗ 8.24 ಲಕ್ಷ ಕೋಟಿ! | Karnataka Budget 2026 State Debt Reaches 8 Lakh Crore Siddaramaiah Borrowing San

Karnataka Budget: ಈ ಬಾರಿ 1.32 ಲಕ್ಷ ಕೋಟಿ ಸಾಲಕ್ಕೆ ಸಿದ್ದರಾಮಯ್ಯ ತೀರ್ಮಾನ, ರಾಜ್ಯದ ಸಾಲ ಈಗ 8.24 ಲಕ್ಷ ಕೋಟಿ! | Karnataka Budget 2026 State Debt Reaches 8 Lakh Crore Siddaramaiah Borrowing San



Karnataka Budget: ಈ ಬಾರಿ 1.32 ಲಕ್ಷ ಕೋಟಿ ಸಾಲಕ್ಕೆ ಸಿದ್ದರಾಮಯ್ಯ ತೀರ್ಮಾನ, ರಾಜ್ಯದ ಸಾಲ ಈಗ 8.24 ಲಕ್ಷ ಕೋಟಿ! | Karnataka Budget 2026 State Debt Reaches 8 Lakh Crore Siddaramaiah Borrowing San

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ರ ಬಜೆಟ್‌ನಲ್ಲಿ, ರಾಜ್ಯವು ದಾಖಲೆಯ 1,32,190 ಕೋಟಿ ರೂಪಾಯಿಗಳ ಸಾಲವನ್ನು ಪಡೆಯಲು ನಿರ್ಧರಿಸಿದೆ. ಈ ನಿರ್ಧಾರದಿಂದಾಗಿ, ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲದ ಹೊರೆಯು 8,27,389 ಕೋಟಿ ರೂಪಾಯಿಗಳಿಗೆ ತಲುಪುವ ಅಂದಾಜಿದೆ.

ಬೆಂಗಳೂರು (ಮಾ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್ ರಾಜ್ಯದ ಪಾಲಿಗೆ ಐತಿಹಾಸಿಕವಾಗಿದ್ದರೂ, ಆರ್ಥಿಕವಾಗಿ ದೊಡ್ಡ ಮಟ್ಟದ ಸಾಲದ ಹೊರೆಯನ್ನು ಹೊರಿಸುತ್ತಿದೆ. 4,48,004 ಕೋಟಿ ರೂಪಾಯಿಗಳ ಬೃಹತ್ ಗಾತ್ರದ ಈ ಬಜೆಟ್ ಮಂಡಿಸಿರುವ ಸಿಎಂ, ಈ ಆರ್ಥಿಕ ವರ್ಷದಲ್ಲಿ ದಾಖಲೆಯ 1,32,190 ಕೋಟಿ ರೂಪಾಯಿಗಳ ಸಾಲ ಪಡೆಯಲು ತೀರ್ಮಾನಿಸಿದ್ದಾರೆ.

ಕೊರತೆ ಬಜೆಟ್ ಮತ್ತು ಸಾಲದ ಮೂಲಗಳು

ಈ ಬಾರಿಯ ಆಯವ್ಯಯವು 22,957 ಕೋಟಿ ರೂಪಾಯಿಗಳ ಕೊರತೆಯನ್ನು ಹೊಂದಿದ್ದು, ಇದನ್ನು ಸರಿದೂಗಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ ವಿವಿಧ ಮೂಲಗಳಿಂದ ಸಾಲ ಪಡೆಯುತ್ತಿದೆ. ಬಹಿರಂಗ ಮಾರುಕಟ್ಟೆಯಿಂದ 1,22,340 ಕೋಟಿ ರೂಪಾಯಿ ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,810 ಕೋಟಿ ರೂಪಾಯಿ ಸಾಲ ಪಡೆಯಲು ಯೋಜನೆ ಮಾಡಲಾಗಿದೆ. ಅದರೊಂದಿಗೆ LIC/NSSF/NCDC ಮತ್ತು RIDF ಸಂಸ್ಥೆಗಳಿಂದ 2,850 ಕೋಟಿ ರೂ, ಇತರೆ ಜಮೆ ಹಾಗೂ ವಸೂಲಿ: 190 ಕೋಟಿ ರೂಪಾಯಿ ಪಡೆಯಲು ತೀರ್ಮಾನಿಸಿದೆ.

ರಾಜ್ಯದ ಒಟ್ಟು ಸಾಲದ ಅಂದಾಜು

ಬಜೆಟ್‌ನ ಅಂಕಿಅಂಶಗಳ ಪ್ರಕಾರ, ಈ ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲವು 8,27,389 ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಶೇ. 24.94 ರಷ್ಟಾಗಲಿದ್ದು, ಆರ್ಥಿಕ ಶಿಸ್ತಿನ ಮಿತಿಯಲ್ಲೇ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಆದಾಯದ ಗುರಿ ಮತ್ತು ಬಜೆಟ್ ಗಾತ್ರ

ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲು ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ 2.20 ಲಕ್ಷ ಕೋಟಿ ರೂಪಾಯಿಗಳ ಸ್ವಂತ ತೆರಿಗೆ ಸಂಗ್ರಹದ ಗುರಿ ಹಾಕಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸುಮಾರು 65,000 ಕೋಟಿ ರೂಪಾಯಿಗಳಿಗೂ ಅಧಿಕ ಹಣ ವ್ಯಯಿಸುತ್ತಿದ್ದರೂ, ಬಂಡವಾಳ ವೆಚ್ಚಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಈ ಬೃಹತ್ ಸಾಲದ ಮೊರೆ ಹೋಗಲಾಗಿದೆ.

ಒಟ್ಟಾರೆಯಾಗಿ, ಜನಪ್ರಿಯ ಯೋಜನೆಗಳ ಅನುಷ್ಠಾನದ ನಡುವೆ ರಾಜ್ಯದ ಸಾಲದ ಹೊರೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ, ಜಿಎಸ್‌ಡಿಪಿ ಬೆಳವಣಿಗೆಯ ದರವು ಆಶಾದಾಯಕವಾಗಿರುವುದರಿಂದ ಸಾಲದ ಪ್ರಮಾಣವು ನಿರ್ವಹಿಸಬಲ್ಲ ಮಟ್ಟದಲ್ಲಿದೆ ಎಂಬುದು ಸರ್ಕಾರದ ವಿಶ್ವಾಸ.



Source link

Leave a Reply

Your email address will not be published. Required fields are marked *