ಅ.24ರ ರಾತ್ರಿಯಿಂದ 25ರ ಮಧ್ಯಾಹ್ನವರೆಗೆ ರಾಜ್ಯದ 5 ಎಸ್ಕಾಂಗಳ ಸೇವೆಯಲ್ಲಿ ವ್ಯತ್ಯಯ! | Karnataka Esccom Online Electricity Services Shutdown October 24 Gvd

ಅ.24ರ ರಾತ್ರಿಯಿಂದ 25ರ ಮಧ್ಯಾಹ್ನವರೆಗೆ ರಾಜ್ಯದ 5 ಎಸ್ಕಾಂಗಳ ಸೇವೆಯಲ್ಲಿ ವ್ಯತ್ಯಯ! | Karnataka Esccom Online Electricity Services Shutdown October 24 Gvd



ಅ.24ರ ರಾತ್ರಿಯಿಂದ 25ರ ಮಧ್ಯಾಹ್ನವರೆಗೆ ರಾಜ್ಯದ 5 ಎಸ್ಕಾಂಗಳ ಸೇವೆಯಲ್ಲಿ ವ್ಯತ್ಯಯ! | Karnataka Esccom Online Electricity Services Shutdown October 24 Gvd

ರಾಜ್ಯದ ಐದೂ ಎಸ್ಕಾಂಗಳಲ್ಲಿ ನಗರ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್‌ ಬಿಲ್‌ ಪಾವತಿ ಸೇರಿ ಯಾವುದೇ ಆನ್‌ಲೈನ್‌ ಸೇವೆಗಳು ಅ.24 ರಂದು ರಾತ್ರಿಯಿಂದ 8 ಗಂಟೆಯಿಂದ 17 ಗಂಟೆಗಳ ಕಾಲ ಲಭ್ಯವಿರುವುದಿಲ್ಲ.

ಬೆಂಗಳೂರು (ಅ.22): ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ರಾಜ್ಯದ ಐದೂ ಎಸ್ಕಾಂಗಳಲ್ಲಿ ನಗರ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್‌ ಬಿಲ್‌ ಪಾವತಿ ಸೇರಿ ಯಾವುದೇ ಆನ್‌ಲೈನ್‌ ಸೇವೆಗಳು ಅ.24 ರಂದು ರಾತ್ರಿಯಿಂದ 8 ಗಂಟೆಯಿಂದ 17 ಗಂಟೆಗಳ ಕಾಲ ಲಭ್ಯವಿರುವುದಿಲ್ಲ. ಅ.24 ರಂದು ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆವರೆಗೆ ಐದು ಎಸ್ಕಾಂಗಳ ನಗರ ವ್ಯಾಪ್ತಿಯ ಗ್ರಾಹಕರಿಗೆ (ಆರ್‌ಎಪಿಡಿಆರ್‌ಪಿ) ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ, ಮೀಟರ್‌ ಬದಲಾವಣೆ, ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ಆನ್‌ಲೈನ್‌ ಸೇವೆ ಲಭ್ಯವಿರುವುದಿಲ್ಲ.

ಜತೆಗೆ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆ್ಯಪ್‌, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲೂ ಈ ಸೇವೆ ಅಲಭ್ಯ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ), ಹುಬ್ಬಳ್ಳಿಯ ಹೆಸ್ಕಾಂ, ಕಲಬುರಗಿಯ ಜೆಸ್ಕಾಂ, ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್), ಮಂಗಳೂರಿನ ಮೆಸ್ಕಾಂ ಸೇರಿ ಐದು ಕಂಪೆನಿಗಳ ವ್ಯಾಪ್ತಿಯಲ್ಲಿ ಆನ್‌ಲೈನ್‌ ಸೇವೆ ಲಭ್ಯವಿರುವುದಿಲ್ಲ.

ಯಾವ್ಯಾವ ನಗರ, ಪಟ್ಟಣಗಳಿಗೆ ಸಮಸ್ಯೆ?

ಬೆಸ್ಕಾಂ ವ್ಯಾಪ್ತಿ: ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು, ಶಿಢ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್‌, ಮುಳಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್‌, ಚಳ್ಳಕೆರೆ, ಕುಣಿಗಲ್‌, ಹರಪ್ಪನಹಳ್ಳಿ, ಹರಿಹರ, ಹಿರಿಯೂರು ಮತ್ತು ತಿಪಟೂರು ನಗರ.

ಸೆಸ್ಕ್‌ : ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್. ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ, ಚನ್ನರಾಯಪಟ್ಟಣ.

ಮೆಸ್ಕಾಂ: ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭಧ್ರಾವತಿ, ಚಿಕ್ಕಮಗಳೂರು

ಜೆಸ್ಕಾಂ: ಮಾನ್ವಿ, ಸಿಂಧನೂರು, ಬೀದರ್, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಆಳಂದ, ಭಾಲ್ಕಿ, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮನಾಬಾದ್‌, ಹೊಸಪೇಟೆ

ಹೆಸ್ಕಾಂ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸೇವನೂರು, ಸಿರಸಿ, ಕುಮಟಾ, ಬಾಗಲಕೋಟೆ, ರಬಕವಿ-ಬನಹಟ್ಟಿ, ಗದಗ, ಗೋಕಾಕ್, ಹಾವೇರಿ, ಇಳಕಲ್‌, ಮುಧೋಳ, ರಾಣೆಬೆನ್ನೂರು, ವಿಜಯಪುರ ನಗರ ಉಪ ವಿಭಾಗಗಳ ವ್ಯಾಪ್ತಿಗಳಲ್ಲಿ ಆನ್‌ಲೈನ್‌ ಸೇವೆಗಳು ಲಭ್ಯವಿರುವುದಿಲ್ಲ.



Source link

Leave a Reply

Your email address will not be published. Required fields are marked *