
ಪೋ*ರ್ನ್ ವಿಡಿಯೋಗಳಲ್ಲಿ ಗಂಟೆಗಟ್ಟಲೆ ನಡೆಯುವ ಕ್ರಿಯೆಯನ್ನು ನೋಡಿ ಅನೇಕರು ತಮ್ಮ ಲೈಂ*ಗಿಕ ಜೀವನದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಆದರೆ, ಖ್ಯಾತ ವೈದ್ಯೆ ಡಾ.ದುರ್ಗಶ್ರೀ ಶೆಟ್ಟಿ ಅವರು, ಈ ವಿಡಿಯೋ ಶೂಟಿಂಗ್‌ನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ಮಧ್ಯೆ ಬ್ರೇಕ್‌ಗಳು, ಹಾಸಿಗೆ ಹೇಗೆ ಅಲ್ಲಾಡತ್ತೆ, ಮಹಿಳೆಯರು ಏನು ಮಾಡ್ತಾರೆ ಸೇರಿದಂತೆ ಅಲ್ಲಿ ನಡೆಯುವುದೆಲ್ಲವನ್ನೂ ತಿಳಿಸಿದ್ದಾರೆ.
ಸ್ಮಾರ್ಟ್ಫೋನ್ ಈ ಯುಗದಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅತಿಹೆಚ್ಚು ವೀಕ್ಷಣೆ ಆಗುವುದರಲ್ಲಿ ಟಾಪ್ನಲ್ಲಿ ಇರುವುದು ಪೋ*ರ್ನ್ ವಿಡಿಯೋಗಳಾಗಿವೆ. ಈ ವಿಡಿಯೋ ನೋಡುವ ಚಟ ಅಂಟಿಸಿಕೊಂಡ ಯುವಸಮೂಹದವರು ಅದೆಷ್ಟೋ ಮಂದಿ. ಕೇಂದ್ರ ಸರ್ಕಾರ ಇದಾಗಲೇ ಹಲವಾರು ಇಂಥ ವೆಬ್ಸೈಟ್, ಯುಟ್ಯೂಬ್ಗಳಿಗೆ ಕಡಿವಾಣ ಹಾಕಿದ್ದರೂ, ಒಮ್ಮೆ ಚಟ ಬಂದರೆ ಅದನ್ನು ಹೇಗಾದರೂ ಸರಿ ನೋಡುವ ಜಾಯಮಾನದವರು ಹಲವರು ಇದ್ದಾರೆ. ತಮ್ಮ ವಯಸ್ಸನ್ನು 18 ವರ್ಷಕ್ಕಿಂತ ಹೆಚ್ಚು ಎಂದು ನಮೂದು ಮಾಡಿ ಎಷ್ಟೋ ಅಪ್ರಾಪ್ತರು ಈ ಚಟಕ್ಕೆ ದಾಸರಾಗಿರುವ ಬಗ್ಗೆಯೂಇದಾಗಲೇ ಸಾಕಷ್ಟು ವರದಿಗಳು ಬಂದಿವೆ.
ಗಂಟೆಗಟ್ಟಲೆ ಕ್ರಿಯೆಯಲ್ಲಿ ತೊಡಗ್ತಾರಾ?
ಇಂಥ ವಿಡಿಯೋ ನೋಡಿದವರ ಪೈಕಿ ಹೆಚ್ಚಿನವರು, ಆ ಗಂಡು ಅಥವಾ ಹೆಣ್ಣು ಗಂಟೆಗೂ ಅಧಿಕ ಕಾಲದವರೆಗೆ ಆ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಕಾರಣ, ಅದು ತಮ್ಮ ಮನೆಯ ಗಂಡನಿಗೂ ಅಥವಾ ಹೆಂಡತಿಗೋ ಸಾಧ್ಯವಾಗ್ತಿಲ್ಲ ಏಕೆ ಎಂದು ಬೇಸರ ಪಟ್ಟುಕೊಳ್ಳುತ್ತಾರೆ. ಆದರೆ ಪೋ*ರ್ನ್ ವಿಡಿಯೋಶೂಟ್ಗಳ ಅಸಲಿಯತ್ತೆ ಬೇರೆ ಇದೆ ಎಂದು ಖ್ಯಾತ ವೈದ್ಯೆಯಾಗಿರುವ ಡಾ.ದುರ್ಗಶ್ರೀ ಶೆಟ್ಟಿ ಅವರು, ಇದರ ಸತ್ಯವನ್ನು ತೆರೆದಿಟ್ಟಿದ್ದಾರೆ. chilling_with_chilimbi ಎಂಬ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ವೈದ್ಯೆ ಇಂಥ ಶೂಟಿಂಗ್ ಮಾಡುವಾಗ ಅಲ್ಲಿ ನಡೆಯುವುದು ಏನು, ನಿಜಕ್ಕೂ ಏನಾಗುತ್ತೆ, ಆಮೇಲೆ ಅದು ಜನರಿಗೆ ಯಾವ ರೀತಿ ಕಾಣಿಸುತ್ತದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.
ವಿಡಿಯೋ ಶೂಟ್ ಆಗೋದು ಹೀಗೆ
ಅಲ್ಲಿ ಹೆಣ್ಣುಮಕ್ಕಳನ್ನು ಮಲಗಿಸಿ ಇಡಲಾಗುತ್ತದೆ. ಈ ವಿಡಿಯೋ ನೋಡುವ ಜನರು ಅಂದುಕೊಂಡಂತೆ ಅಲ್ಲಿ ಗಂಟೆಗಟ್ಟಲೆ ಏನೂ ಆಗಿರುವುದಿಲ್ಲ. ಪ್ರತಿ ಹತ್ತು ನಿಮಿಷಕ್ಕೆ ಒಮ್ಮೆ ಅವರಿಗೆ ಪಿಜ್ಜಾ ಬ್ರೇಕ್ ನೀಡಲಾಗುತ್ತದೆ. ಆ ಬಳಿಕ ಹೆಣ್ಣುಮಕ್ಕಳು ಮಲಗಿರುವ ಹಾಸಿಗೆಯನ್ನು ಕೈಯಿಂದ ಶೇಕ್ ಮಾಡಲಾಗುತ್ತದೆ. ಆ ಸಮಯದಲ್ಲಿ ಅದರ ಮೇಲೆ ಮಲಗಿದವರು ಮೇಲೆ ಕೆಳಗೆ ಹೋದ ರೀತಿಯಲ್ಲಿ ಕಾಣಿಸುತ್ತದೆ. ಅಸಲಿಗೆ ಅಲ್ಲಿ ಏನು ಕಾಣುತ್ತದೆಯೋ ಆ ಕ್ರಿಯೆ ನಡೆಯುತ್ತಲೇ ಇರುವುದಿಲ್ಲ ಎಂದಿದ್ದಾರೆ ವೈದ್ಯೆ. ಹೀಗೆ ಬೆಡ್ ಶೇಕ್ ಆಗುವಾಗ ಮೇಲಿನಿಂದ ವಿಡಿಯೋ ಮಾಡುತ್ತಾರೆ.
ಕೊರಗುವ ಜನರು
ಮಧ್ಯೆ ಮಧ್ಯೆ ಅವರಿಗೆ ಪಿಜ್ಜಾ ಬ್ರೇಕ್ ಇರುತ್ತದೆ. ಶೂಟಿಂಗ್ನಲ್ಲಿ ಭಾಗಿಯಾಗಿರುವವರು ಆರಾಮಾಗಿ ಪಿಜ್ಜಾ ತಿನ್ನುತ್ತಾ ಇರುತ್ತಾರೆ. ಆದರೆ, ಅಲ್ಲಿ ಎಲ್ಲವೂ ಕೃತಕವಾಗಿ ಮಾಡಿರುತ್ತಾರೆ. ಆದರೆ ಅದನ್ನು ನೋಡಿದ ವೀಕ್ಷಕರು ಗಂಟೆಗಟ್ಟಲೆ ಆ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಪುರುಷನೋ ಅಥವಾ ಮಹಿಳೆಯನ್ನೋ ನೋಡಿ, ಗಂಡಸಾದವ ಹೀಗೆ ಇರಬೇಕು, ಹೆಣ್ಣಾದವಳು ಹೀಗೆ ಇರಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಅಸಲಿಗೆ ಎಲ್ಲವೂ ಭ್ರಮೆ ಅಷ್ಟೇ. ಅಂಥ ನಕಲಿ ವಿಡಿಯೋ ನೋಡಿ ಎಷ್ಟೋ ಮಂದಿ ನಮ್ಮ ಸೆ*ಕ್ಸ್ ಲೈಫ್ ಹೀಗಿಲ್ಲವಲ್ಲ ಎಂದು ಕೊರಗುತ್ತಾರೆ, ಇರುವ ಸುಖವನ್ನೇ ಮರೆಯುತ್ತಾರೆ ಎಂದು ವಿವರಿಸಿದ್ದಾರೆ.