Headlines

ಗಂಡ ರೇ* ಮಾಡ್ತಿದ್ರೆ, ಹೊರಗೆ ಕಾವಲು ಕಾಯ್ತಿದ್ದ ಬ್ಯುಟಿ ಪಾರ್ಲರ್ ಆಂಟಿ ಯಾಸ್ಮೀನ್ | Wife S Yashmin Khan Support For Husband Sharif S Heinous Act Guna Madhya Pradesh Mrq

ಗಂಡ ರೇ* ಮಾಡ್ತಿದ್ರೆ, ಹೊರಗೆ ಕಾವಲು ಕಾಯ್ತಿದ್ದ ಬ್ಯುಟಿ ಪಾರ್ಲರ್ ಆಂಟಿ ಯಾಸ್ಮೀನ್ | Wife S Yashmin Khan Support For Husband Sharif S Heinous Act Guna Madhya Pradesh Mrq



ಗಂಡ ರೇ* ಮಾಡ್ತಿದ್ರೆ, ಹೊರಗೆ ಕಾವಲು ಕಾಯ್ತಿದ್ದ ಬ್ಯುಟಿ ಪಾರ್ಲರ್ ಆಂಟಿ ಯಾಸ್ಮೀನ್ | Wife S Yashmin Khan Support For Husband Sharif S Heinous Act Guna Madhya Pradesh Mrq

ಬ್ಯೂಟಿ ಪಾರ್ಲರ್ ತರಬೇತಿ ನೆಪದಲ್ಲಿ ಯುವತಿಯರನ್ನು ಮನೆಗೆ ಕರೆಸಿಕೊಂಡು ಪತಿಯ ಅತ್ಯಾ*ಚಾರಕ್ಕೆ ಪತ್ನಿಯೇ ಸಹಾಯ ಮಾಡುತ್ತಿದ್ದ ಆಘಾತಕಾರಿ ಘಟನೆ ನಡೆದಿದೆ. ಪತಿ ಕೋಣೆಯೊಳಗೆ ಕೃತ್ಯ ಎಸಗುತ್ತಿದ್ದರೆ, ಪತ್ನಿ ಹೊರಗೆ ಕಾವಲು ಕಾಯುತ್ತಿದ್ದಳು. 

ಭೋಪಾಲ್: ಕೋಣೆಯೊಳಗೆ ಯುವತಿಯರ ಮೇಲೆ ಗಂಡ ಅತ್ಯಾ*ಚಾರ ಮಾಡ್ತಿದ್ರೆ ಪತ್ನಿ ಕಾವಲು ಕಾಯುತ್ತಿದ್ದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಪೊಲೀಸರು ಮಹಿಳೆ ಮತ್ತು ಆಕೆಯ ಪತಿ, ಮೈದುನನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಗುನಾ ಜಿಲ್ಲೆಯ ಕೈಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು livehindustan ವರದಿ ಮಾಡಿದೆ. ಸಂತ್ರಸ್ತೆ ದೂರು ನೀಡಿದ ನಂತರ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?

ಎಸ್‌ಪಿ ಹಿತಿಕ ವಾಸ್ಲಾ ಪ್ರಕಾರ, ಗುಲಾಬಗಂಜ್ ನಿವಾಸಿಯಾಗಿರುವ ಯಾಸ್ಮೀನ್ ಖಾನ್ ಎಂಬಾಕೆ ಬ್ಯೂಟಿ ಪಾರ್ಲರ್‌ ತರಬೇತಿ ನೀಡುತ್ತಿದ್ದಳು. ಈ ಬ್ಯೂಟಿ ಪಾರ್ಲರ್‌ನಲ್ಲಿ ಯಾಸ್ಮೀನ್ ಗಂಡ ಶರೀಫ್ ಖಾನ್ ಹಾಜರಿರುತ್ತಿದ್ದನು. ಸುಮಾರು 4 ತಿಂಗಳ ಹಿಂದೆ ಸಂತ್ರಸ್ತೆಗೆ ತನ್ನ ಮನೆಗೆ ಬರುವಂತೆ ಯಾಸ್ಮೀನ್ ಹೇಳಿದ್ದಳು. ಸಂತ್ರಸ್ತೆ ಮನೆಗೆ ಹೋದಾಗ ಅಲ್ಲಿ ಯಾಸ್ಮೀನ್ ಬದಲಾಗಿ ಆಕೆಯ ಗಂಡ ಶರೀಪ್ ಖಾನ್ ಕುಳಿತಿದ್ದನು.

ಯಾಸ್ಮೀನ್‌ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಯುವತಿ ಮೇಲೆ ಶರೀಫ್ ಅತ್ಯಾ*ಚಾರ ಎಸಗಿದ್ದಾನೆ. ನಂತರ ಈ ವಿಷಯ ಯಾರಿಗಾದ್ರೂ ತಿಳಿಸಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಸಂತ್ರಸ್ತೆ ನಾಲ್ಕು ತಿಂಗಳು ಅತ್ಯಾ*ಚಾರದ ವಿಷಯವನ್ನು ಯಾರ ಮುಂದೆಯೂ ಹೇಳಿರಲಿಲ್ಲ. ಶರೀಫ್ ತನ್ನ ಮೇಲೆ ಅತ್ಯಾ*ಚಾರ ಎಸಗಿರುವ ವಿಷಯವನ್ನು ಯಾಸ್ಮೀನ್ ಮುಂದೆ ಸಂತ್ರಸ್ತೆ ಹೇಳಿಕೊಂಡಿದ್ದಳು. ಆದ್ರೆ ಈ ವಿಷಯವನ್ನು ಯಾಸ್ಮೀನ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಈ ಘಟನೆ ಬಳಿಕ ಸಂತ್ರಸ್ತೆಯನ್ನು ಹಲವು ಬಾರಿ ಮನೆಗೆ ಕರೆಸಿಕೊಂಡು ಬೆದರಿಸಿ ಗಂಡನೊಂದಿಗೆ ಮಲಗಲು ಕಳುಹಿಸುತ್ತಿದ್ದಳು. ಶರೀಫ್ ಖಾನ್ ಕೋಣೆಯಲ್ಲಿ ರೇ*ಪ್ ಮಾಡ್ತಿದ್ರೆ ಯಾಸ್ಮೀನ್ ಗೇಟ್ ಬಳಿ ನಿಂತು ಕಾವಲು ಕಾಯುತ್ತಿದ್ದಳು ಎಂದು ಎಸ್‌ಪಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Raichur : ಬಾಣಂತಿಯ ನಿಗೂಢ ಸಾವಿಗೆ ದೆವ್ವ ಕಾರಣ? CCTV ದೃಶ್ಯ ನೋಡಿ ಬೆಚ್ಚಿದ ಸ್ಥಳೀಯರು

ಹೆಂಡ್ತಿ, ತಮ್ಮನ ಮುಂದೆಯೇ ಎಳೆದೊಯ್ದು ರೇ*ಪ್

ಫೋನ್ ಮಾಡಿ ಶನಿವಾರ ಮನೆಗೆ ಬರುವಂತೆ ಯುವತಿಯನ್ನು ಶರೀಫ್ ಖಾನ್ ಕರೆದಿದ್ದಾನೆ. ಬರದಿದ್ರೆ ಅತ್ಯಾ*ಚಾರದ ವಿಷಯವನ್ನು ಬಹಿರಂಗಪಡಿಸೋದಾಗಿ ಬೆದರಿಕೆ ಹಾಕಿದ್ದಾನೆ. ಮನೆಗೆ ಹೋದಾಗ ಅಲ್ಲಿ ಯಾಸ್ಮೀನ್, ಆಕೆಯ ಗಂಡ ಶರೀಫ್ ಮತ್ತು ಮೈದುನ ಮುವೀನ್ ಖಾನ್ ಸಹ ಇದ್ದನು. ಈ ವೇಳೆ ಇಬ್ಬರ ಮುಂದೆಯೇ ಯುವತಿಯನ್ನು ಕೋಣೆಗೆ ಎಳೆದೊಯ್ದು ರೇ-ಪ್ ಮಾಡಲು ಶರೀಫ್ ಮುಂದಾಗಿದ್ದಾನೆ. ಯುವತಿ ವಿರೋಧಿಸಿದಾಗ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಆಗ ಶರೀಫ್ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.

ಈ ಸಂದರ್ಭದಲ್ಲಿ ಆತಂಕಗೊಂಡ ಯುವತಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾಳೆ. ಯುವತಿ ಪೋಷಕರು ಬರುತ್ತಿದ್ದಂತೆ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಅಷ್ಟರಲ್ಲಿ ಅವರನ್ನು ಹಿಡಿದಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮೆಲ್ಲಗೆ ಬರ್ತಾನೆ, ಕಾಂಪೌಂಡ್ ಹಾರ್ತಾನೆ; ಅತ್ತಿತ್ತ ನೋಡಿ ಮಹಿಳೆಯರ ಒಳಉಡುಪು ಕದಿತಾನೆ!

Scroll to load tweet…



Source link

Leave a Reply

Your email address will not be published. Required fields are marked *