Headlines

ವಾಹನ ಚಲಿಸಿದರೆ ರಸ್ತೆ ಮೇಲೆ ಮೊಳಗಲಿದೆ ‘ಜೈ ಹೋ’ ನಿನಾದ: ಭಾರತದ ಮೊದಲ Musical Road | Mumbai Gets Indias First Musical Road How It Works What You Hear Suc

ವಾಹನ ಚಲಿಸಿದರೆ ರಸ್ತೆ ಮೇಲೆ ಮೊಳಗಲಿದೆ ‘ಜೈ ಹೋ’ ನಿನಾದ: ಭಾರತದ ಮೊದಲ Musical Road | Mumbai Gets Indias First Musical Road How It Works What You Hear Suc



ವಾಹನ ಚಲಿಸಿದರೆ ರಸ್ತೆ ಮೇಲೆ ಮೊಳಗಲಿದೆ ‘ಜೈ ಹೋ’ ನಿನಾದ: ಭಾರತದ ಮೊದಲ Musical Road | Mumbai Gets Indias First Musical Road How It Works What You Hear Suc

 ಭಾರತದ ಮೊದಲ “ಸಂಗೀತ ರಸ್ತೆ”ಯನ್ನು ಉದ್ಘಾಟಿಸಲಾಗಿದೆ. ಈ 500 ಮೀಟರ್ ಉದ್ದದ ರಸ್ತೆಯ ಮೇಲೆ ವಾಹನಗಳು ನಿರ್ದಿಷ್ಟ ವೇಗದಲ್ಲಿ ಚಲಿಸಿದಾಗ, ಎ.ಆರ್. ರೆಹಮಾನ್ ಅವರ ಪ್ರಸಿದ್ಧ ‘ಜೈ ಹೋ’ ಗೀತೆಯ ಸ್ವರಗಳು ಕೇಳಿಸುತ್ತವೆ.  

ಎ.ಆರ್​. ರೆಹಮಾನ್​ ಅವರ ಸುಮಧುರ ಕಂಠದಿಂದ ಮೂಡಿಬಂದಿರುವ ಜೈ ಹೋ ಹಾಡು, ವಿಶ್ವ ಖ್ಯಾತಿಯನ್ನು ಪಡೆದಿದೆ. ಈ ಸುಂದರ ಗಾಯನವನ್ನು ಸವಿಯುವ ಅವಕಾಶ ಈ ಒಂದು ವಿಶೇಷ ರಸ್ತೆಯ ಮೇಲೆ ಸಾಗುವ ವಾಹನ ಚಾಲಕರಿಗೆ ಇನ್ನು ಮುಂದೆ ಲಭ್ಯ ಆಗಲಿದೆ. 500 ಮೀಟರ್ ಉದ್ದದ ರಸ್ತೆಯು ಇದೀಗ ಆಸ್ಕರ್ ಪ್ರಶಸ್ತಿ ವಿಜೇತನ ‘ಜೈ ಹೋ’ ಸ್ವರಗಳೊಂದಿಗೆ ಗುನುಗುತ್ತದೆ. ವಿಶ್ವದಲ್ಲಿಯೇ ಅತ್ಯದ್ಭುತ ಎನ್ನುವಂಥ ಕಲ್ಪನೆಯು ಭಾರತದಲ್ಲಿ ಇದೇ ಮೊದಲ ಬಾರಿಗೆ ಮುಂಬೈನ ಕರಾವಳಿ ಪ್ರದೇಶದ ಜನರಿಗೆ ಸಿಗಲಿದೆ.

ಮುಂಬೈನ ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಪ್ರಯಾಣಿಸುವ ವಾಹನ ಚಾಲಕರಿಗೆ, ಉತ್ತರಕ್ಕೆ ಹೋಗುವ ಲೇನ್‌ನ 500 ಮೀಟರ್ ಉದ್ದದ ರಸ್ತೆಯಲ್ಲಿ ಇದನ್ನು ಅಳವಡಿಸಲಾಗಿದೆ. ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆಯಲ್ಲಿ ಭಾರತದ ಮೊದಲ “ಸಂಗೀತ ರಸ್ತೆ”ಯನ್ನು ಉದ್ಘಾಟಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇದನ್ನು ಉದ್ಘಾಟಿಸಿ, ಈ ಸಂಗೀತ ಸುಧೆಯನ್ನು ಅನುಭವಿಸಿದ್ದುದು ವಿಶೇಷವಾಗಿತ್ತು.

ಸಂಗೀತ ರಸ್ತೆ ಹೇಗೆ ಕಾರ್ಯನಿರ್ವಹಿಸುತ್ತದೆ

ತಂತ್ರಜ್ಞಾನದಿಂದ ಇಂದು ಏನು ಬೇಕಾದರೂ ಮಾಡಲು ಸಾಧ್ಯವಾಗಿದೆ ಎನ್ನುವುದಕ್ಕೆ ಈ ಅದ್ಭುತ ಕಲ್ಪನೆಯೇ ಸಾಕ್ಷಿಯಾಗಿದೆ. ನಿಖರವಾದ ಮಧ್ಯಂತರಗಳು ಮತ್ತು ಆಳದಲ್ಲಿ ವಿನ್ಯಾಸಗೊಳಿಸಲಾದ ‘ಗ್ರೂವ್ಸ್’ ಎಂಬ ರಂಬಲ್ ಪಟ್ಟಿಗಳ ಸರಣಿಯನ್ನು ಡಾಂಬರಿನಲ್ಲಿ ಕೆತ್ತಲಾಗಿದೆ. ಒಂದು ವಾಹನವು ಅವುಗಳ ಮೇಲೆ ಗಂಟೆಗೆ 60-80 ಕಿ.ಮೀ ವೇಗದಲ್ಲಿ ಚಲಿಸಿದಾಗ, ಟೈಯರ್ ಮತ್ತು ರಸ್ತೆಯ ನಡುವಿನ ಘರ್ಷಣೆಯು ಕಂಪನಗಳನ್ನು ಉಂಟುಮಾಡುತ್ತದೆ. ಆ ಕಂಪನಗಳು ಧ್ವನಿ ತರಂಗಗಳನ್ನು ಉತ್ಪಾದಿಸುತ್ತವೆ, ಇದು ಒಟ್ಟಾಗಿ ಅಕಾಡೆಮಿ ಪ್ರಶಸ್ತಿ ವಿಜೇತ ಚಲನಚಿತ್ರ ‘ಸ್ಲಮ್‌ಡಾಗ್ ಮಿಲಿಯನೇರ್’ ನಿಂದ ಎ.ಆರ್. ರೆಹಮಾನ್ ಸಂಯೋಜಿಸಿದ ಜೈ ಹೋ ರಾಗವನ್ನು ಮರುಸೃಷ್ಟಿಸುತ್ತದೆ.

ಭಾರತದಲ್ಲಿ ಮೊದಲ ಸಾಧನೆ

ಅಂದಹಾಗೆ ಇದು ಭಾರತದಲ್ಲಿ ಇಂತಹ ಮೊದಲ ಪ್ರಯೋಗ ಮತ್ತು ವಿಶ್ವದ ಐದನೇ ಪ್ರಯೋಗವಾಗಿದೆ. ಇದೇ ರೀತಿಯ ಸಂಗೀತ ರಸ್ತೆಗಳು ಇದಾಗಲೇ ಹಂಗೇರಿ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ರಚಿಸಲಾಗಿದೆ. ಈ ಕಲ್ಪನೆಯನ್ನು ಮಾಜಿ ಸಂಸತ್ ಸದಸ್ಯ ರಾಹುಲ್ ಶೇವಾಲೆ ಅವರು ಕಲ್ಪಿಸಿಕೊಂಡರು ಮತ್ತು ಮುಂಬೈ ಕರಾವಳಿ ರಸ್ತೆ ಯೋಜನೆಯ ಭಾಗವಾಗಿ ಕಾರ್ಯಗತಗೊಳಿಸಲಾಯಿತು. ಈ ಪರಿಕಲ್ಪನೆಯನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗಿದೆ ಮತ್ತು ಕರಾವಳಿ ರಸ್ತೆಯ ಉದ್ದಕ್ಕೂ ಮತ್ತಷ್ಟು ವಿಸ್ತರಿಸುವ ಯೋಜನೆ ಇದೆ.

ಮೊದಲ ಬಾರಿಗೆ ಈ ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ಭಯ ಪಡಬಾರದು ಎನ್ನುವ ಕಾರಣಕ್ಕೆ, ಸೂಚನಾ ಫಲಕವನ್ನೂ ಹಾಕಲಾಗಿದೆ. ಸದ್ಯಕ್ಕೆ, ಅರೇಬಿಯನ್ ಸಮುದ್ರದ ಒಂದು ಬದಿಯಲ್ಲಿ ಕಾರುಗಳು ಚಲಿಸುತ್ತಿರುವಾಗ, ವಾಹನ ಸವಾರರು ಈ ಅನುಭೂತಿಯನ್ನು ಪಡೆಯಲಿದ್ದಾರೆ.



Source link

Leave a Reply

Your email address will not be published. Required fields are marked *