Headlines

ಖಮೇನಿ ಪುತ್ರ ಇರಾನ್‌ನ ಹೊಸ ನಾಯಕ?ಶಿಯಾ ಸಮುದಾಯದ ಪರಮೋಚ್ಚ ನಾಯಕನಾಗಿ ಮೊಜ್ತಬಾ ಆಯ್ಕೆವದಂತಿ | Is Mojtaba Khamenei Set To Become The New Leader Of Iran

ಖಮೇನಿ ಪುತ್ರ ಇರಾನ್‌ನ ಹೊಸ ನಾಯಕ?ಶಿಯಾ ಸಮುದಾಯದ ಪರಮೋಚ್ಚ ನಾಯಕನಾಗಿ ಮೊಜ್ತಬಾ ಆಯ್ಕೆವದಂತಿ | Is Mojtaba Khamenei Set To Become The New Leader Of Iran



ಖಮೇನಿ ಪುತ್ರ ಇರಾನ್‌ನ ಹೊಸ ನಾಯಕ?ಶಿಯಾ ಸಮುದಾಯದ ಪರಮೋಚ್ಚ ನಾಯಕನಾಗಿ ಮೊಜ್ತಬಾ ಆಯ್ಕೆವದಂತಿ | Is Mojtaba Khamenei Set To Become The New Leader Of Iran

ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಅಯತೊಲ್ಲ ಖಮೇನಿ ಸಾವಿನಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ. ಅಯತೊಲ್ಲ ಆಯ್ಕೆಗೆ ಇರುವ ಉನ್ನತ ಮಟ್ಟದ ಸಮಿತಿ ಈ ಆಯ್ಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಟೆಹ್ರಾನ್‌: ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಅಯತೊಲ್ಲ ಖಮೇನಿ ಸಾವಿನಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ. ಅಯತೊಲ್ಲ ಆಯ್ಕೆಗೆ ಇರುವ ಉನ್ನತ ಮಟ್ಟದ ಸಮಿತಿ ಈ ಆಯ್ಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ವಿಶೇಷವೆಂದರೆ ಕಳೆದ ವರ್ಷ ಸ್ವತಃ ಖಮೇನಿ, ತಮ್ಮ ಉತ್ತರಾಧಿಕಾರಿಯಾಗಲು ಅರ್ಹರಿರುವ ವ್ಯಕ್ತಿಗಳ ಪಟ್ಟಿ ತಯಾರಿಸಿದ್ದರು. ಅದರಲ್ಲಿ ಮೊಜ್ತಬಾ ಹೆಸರು ಇರಲಿಲ್ಲ. ಜೊತೆಗೆ ಇರಾನ್‌ನ ಶಿಯಾ ಧಾರ್ಮಿಕ ವ್ಯವಸ್ಥೆಯಲ್ಲಿ ಮಗನೇ ತಂದೆಯ ಉತ್ತರಾಧಿಕಾರಿಯಾಗುವುದಕ್ಕೆ ಅಷ್ಟೊಂದು ಮನ್ನಣೆ ಇಲ್ಲ. ಆದರೆ ಸದ್ಯ ದೇಶ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಇರುವ ಹಿನ್ನೆಲೆಯಲ್ಲಿ ಅವರನ್ನೇ ಹುದ್ದೆಗೆ ಆಯ್ಕೆ ಮಾಡುವ ನಿರ್ಧಾರವನ್ನು ಆಯ್ಕೆ ಸಮಿತಿ ಕೈಗೊಂಡಿದ್ದು, ಅದನ್ನು ಮೊಜ್ತಬಾ ಕೂಡಾ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಆಯ್ಕೆಗೆ ಕಾರಣಗಳೇನು?

ದೇಶದ ಮೇಲಿನ ಹಿಡಿತ ಕಾಪಾಡುವ ಮತ್ತು ಉನ್ನತ ಹಂತದಲ್ಲಿ ಅಧಿಕಾರಕ್ಕಾಗಿ ತಿಕ್ಕಾಟ ತಡೆಯುವುದು ರೆವಲ್ಯೂಷನರಿ ಗಾರ್ಡ್ಸ್‌ ಒತ್ತಾಸೆ ಉದ್ದೇಶವಾಗಿತ್ತು. ಇದನ್ನು ಸಾಧಿಸಬೇಕಾದರೆ ಆಂತರಿಕವಾಗಿ ಸ್ಥಿರತೆ ಅಗತ್ಯ. ಇದು ಮೊಜ್ತಬಾ ಆಯ್ಕೆಗೆ ಮೊದಲ ಕಾರಣ.

ಇನ್ನೊಂದು ಇಸ್ಲಾಮಿಕ್‌ ಗಣರಾಜ್ಯವನ್ನು ಬಲವಾಗಿ ಪ್ರತಿಪಾದಿಸುವ ಕಟ್ಟರ್‌ ರಾಜಕೀಯ ನಾಯಕರು, ಭದ್ರತಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆ ಪರವಾಗಿರುವ ಜಾಲ ಇವು ಹಿಂದಿನಂತೆಯೇ ಮುಂದುವರೆಯಲು, ಇಸ್ಲಾಮಿಕ್‌ ಗಣರಾಜ್ಯದ ಪರ ಬಲವಾದ ನಿಲುವು ಹೊಂದಿರುವ ವ್ಯಕ್ತಿ ಬೇಕಿತ್ತು. ಈ ಗುಣಗಳು ಮುಜ್ತಬಾರಲ್ಲಿ ಇರುವ ಕಾರಣ ಅವರ ಆಯ್ಕೆಗೆ ಒತ್ತು ನೀಡಲಾಯಿತು.

ಇದರ ಜೊತೆಗೆ ಬಹಳ ಹಿಂದಿನಿಂದಲೂ ರೆವಲ್ಯೂಷನರಿ ಗಾರ್ಡ್ಸ್‌ ಜೊತೆ ಮುಜ್ತಬಾ ಉತ್ತಮ ಸಂಬಂಧ ಹೊಂದಿದ್ದಾರೆ. ತಮ್ಮ ತಂದೆ ಖಮೇನಿ ಧಾರ್ಮಿಕ ನಾಯಕರಾಗಿದ್ದರೂ ಅವರ ಕಚೇರಿಯನ್ನು ಎರಡು ದಶಕಗಳಿಂದ ನಿರ್ವಹಿಸಿದ ಅನುಭವ ಮುಜ್ತಬಾಗಿದೆ.

ಮೊಜ್ತಬಾ ಹಿನ್ನೆಲೆ?

ಖಮೇನಿ ಅವರಿಗೆ 4 ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ಮೊಜ್ತಬಾ 2ನೇ ಪುತ್ರ. ಮೊದಲಿನಿಂದಲೂ ಖಮೇನಿ ಅವರ ಉತ್ತರಾಧಿಕಾರಿ ಆಗಬಹುದಾದ ಸಮರ್ಥ ಎಂದೇ ಬಣ್ಣಿಸಲ್ಪಟ್ಟಿದ್ದರು. ಇರಾನ್‌ನ ಪ್ರಭಾವಿ ಧಾರ್ಮಿಕ ನಾಯಕ ಕೂಡಾ ಆಗಿರುವ ಇವರು ದೇಶದ ಶಕ್ತಿಶಾಲಿ ಅರೆಸೇನಾಪಡೆಯಾದ ರೆವಲ್ಯೂಷನರಿ ಗಾರ್ಡ್ಸ್‌ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಪತ್ನಿ ಜಹ್ರಾ, ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೊಜ್ತಬಾ ಮೇಲೆ 2019ರಲ್ಲೇ ಅಮೆರಿಕ ನಿರ್ಬಂಧ ಹೇರಿತ್ತಾದರೂ ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಭಾರೀ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಅಯತೊಲ್ಲಾಗಳ ಅಧಿಕಾರ, ಹೊಣೆ

1. ಸಲಹಾ ಸಮಿತಿ ಶಿಫಾರಸಿನ ಅನ್ವಯ ಸರ್ಕಾರಕ್ಕೆ ರಾಜಕೀಯದ ದಿಕ್ಕು ತೋರಿಸುವುದು.

2, ಸರ್ಕಾರದ ನೀತಿಗಳು ಸರಿಯಾಗಿ ಜಾರಿಯಾಗುತ್ತಿರುವುದರ ಬಗ್ಗೆ ನಿಗಾ ವಹಿಸುವುದು

3. ಜನಮತಗಣನೆ, ಸೇನೆಗೆ ಆದೇಶ, ಶಾಂತಿ, ಯುದ್ಧ ಘೋಷಣೆಯ ಮಹತ್ವದ ಅಧಿಕಾರ

4. ಚುನಾವಣಾ ಸಂಸ್ಥೆಯ 12 ಸದಸ್ಯರ ಪೈಕಿ 6 ಜನರನ್ನು ನೇಮಕ, ವಜಾದ ಅಧಿಕಾರ

5. ರೆವಲ್ಯೂಷನರಿ ಗಾರ್ಡ್ಸ್‌ ಮುಖ್ಯಸ್ಥ, ನ್ಯಾಯಾಂಗದ ಮುಖ್ಯಸ್ಥ, ಸೇನಾ ಪಡೆ ಮುಖ್ಯಸ್ಥ

6. ಅಧ್ಯಕ್ಷರ ಆಯ್ಕೆ, ವಜಾ, ದೋಷಿಗಳಿಗೆ ಕ್ಷಮಾದಾನ ನೀಡುವ ಅಧಿಕಾರ



Source link

Leave a Reply

Your email address will not be published. Required fields are marked *