Wife Demands Money from Husband After First Night ಬೆಂಗಳೂರಿನಲ್ಲಿ, ಮದುವೆಯಾದ ಮೊದಲ ರಾತ್ರಿ ಲೈಂಗಿಕ ಕ್ರಿಯೆ ನಡೆಸದ ಕಾರಣಕ್ಕೆ ಪತಿಯಿಂದ ಪತ್ನಿ ಹಾಗೂ ಆಕೆಯ ಕುಟುಂಬದವರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು (ಸೆ.23): ಮದುವೆಯಾದ ಬಳಿಕ ಮೊದಲ ರಾತ್ರಿಯಂದು ಲೈಂಗಿಕ ಕ್ರಿಯೆ ನಡೆಸದ ಗಂಡನಿಂದ ಪತ್ನಿ ಹಾಗೂ ಆಕೆಯ ಕುಟುಂಬದವರು ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ನೊಂದ ಪತಿ ಪ್ರವೀಣ್ನಿಂದ ಪತ್ನಿ ಹಾಗೂ ಸಂಬಂಧಿಕರ ವಿರುದ್ಧ ದೂರು ನೀಡಿದ್ದಾರೆ. ಫಸ್ಟ್ ನೈಟ್ ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಕ್ಕೆ ಪತ್ನಿ ಹಾಗೂ ಕುಟುಂಬದವರಿಂದ ಭಾರೀ ಮೊತ್ತದ ಹಣ ಡಿಮಾಂಡ್ ಮಾಡಲಾಗಿದೆ. ಜೀವನಾಂಶದ ರೀತಿಯಲ್ಲಿ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಗಂಡ ನಪುಂಸಕ ಎಂದ ಪತ್ನಿ
ಮದುವೆ ಆದ ಗಂಡ ನಪುಂಸಕ ಎಂದು ಪತ್ನಿ ಭಾರೀ ಗಲಾಟೆ ಮಾಡಿದ್ದಾಳೆ. ಚಿಕ್ಕಮಗಳೂರು ಮೂಲದ ಯುವತಿಯನ್ನು ಮೇ5 ರಂದು ಪ್ರವೀಣ್ ಮದುವೆಯಾಗಿದ್ದ. ಚಿಕ್ಕಮಗಳರಿನ ತರೀಕೆರೆಯಲ್ಲಿ ಮದುವೆ ನಡೆದಿತ್ತು. ಆದರೆ, ಮದುವೆಯ ನಂತರದ ಮೊದಲ ರಾತ್ರಿಯ ವೇಳೆ ಪ್ರವೀಣ್ ಪತ್ನಿಯನ್ನು ಮುಟ್ಟಲು ಹಿಂದೇಟು ಹಾಕಿದ್ದಾನೆ.
ಈ ವೇಳೆ ಪತ್ನಿಗೆ ಗಂಡನ ಬಗ್ಗೆ ಅನುಮಾನ ಬಂದಿದೆ. ಇದನ್ನು ಮನೆಯವರಿಗೆ ತಿಳಿಸಿದಾಗ ಪತ್ನಿಯ ಕುಟುಂಬಸ್ಥರು ಪ್ರವೀಣ್ನ ವೈದ್ಯಕೀಯ ಪರೀಕ್ಷೆಗೆ ಒತ್ತಾಯಿಸಿದ್ದರು. ಪರೀಕ್ಷೆಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಪ್ರವೀಣ್ ಸಮರ್ಥನಾಗಿದ್ದಾನೆಂದು ವೈದ್ಯರು ತಿಳಿಸಿದ್ದರು. ಆದರೆ, ಮಾನಸಿಕ ಒತ್ತಡದಿಂದ ಸ್ಬಲ್ಪ ಹಿಂದೇಟು ಹಾಕುತ್ತಿದ್ದಾರೆ. ಸ್ವಲ್ಪ ತಾಳ್ಮೆಯಿಂದಿರುವಂತೆ ವೈದ್ಯರು ಪತ್ನಿಗೆ ಸೂಚಿಸಿದ್ದರು.

ಸಿಸಿಟಿಯಲ್ಲಿ ದಾಖಲಾದ ಹಲ್ಲೆಯ ದೃಶ್ಯ
ಆದರೆ, ತಾಳ್ಮೆ ಕಳೆದುಕೊಂಡ ಪತ್ನಿ ಹಾಗೂ ಕುಟುಂಬಸ್ಥರಿಂದ ಪ್ರವೀಣ್ ಮೇಲೆ ಹಲ್ಲೆ ನಡೆಸಲಾಗಿದೆ. ಆಗಸ್ಟ್ 17 ರಂದು ಪ್ರವೀಣ್ ಮನೆಗೆ ನುಗ್ಗಿ ಪತ್ನಿ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ. ಗೋವಿಂದರಾಜನಗರದಲ್ಲಿರುವ ಪ್ರವೀಣ್ ಮನೆಗೆ ನುಗ್ಗಿ ಪತ್ನಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಪತಿ ಮತ್ತವನ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಗೆ ಬಂದು ಗಲಾಟೆ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂದ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ದೂರು ಹಾಗೂ ಪ್ರತಿದೂರು ದಾಖಲಾಗುವ ಸಾಧ್ಯತೆಯೂ ಇದೆ.