Headlines

ಕಾಂಗ್ರೆಸ್‌ನಿಂದ ಕೇರಳದಲ್ಲೂ ಗ್ಯಾರಂಟಿ – ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭರವಸೆ– ಇಂದಿರಾ ಕ್ಯಾಂಟೀನ್‌ ಸೌಲಭ್ಯ | Congress Guarantees Free Bus Travel For Women In Kerala Too

ಕಾಂಗ್ರೆಸ್‌ನಿಂದ ಕೇರಳದಲ್ಲೂ ಗ್ಯಾರಂಟಿ – ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭರವಸೆ– ಇಂದಿರಾ ಕ್ಯಾಂಟೀನ್‌ ಸೌಲಭ್ಯ | Congress Guarantees Free Bus Travel For Women In Kerala Too



ಕಾಂಗ್ರೆಸ್‌ನಿಂದ ಕೇರಳದಲ್ಲೂ ಗ್ಯಾರಂಟಿ – ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭರವಸೆ– ಇಂದಿರಾ ಕ್ಯಾಂಟೀನ್‌ ಸೌಲಭ್ಯ | Congress Guarantees Free Bus Travel For Women In Kerala Too

ಮಹಿಳೆಯರಿಗೆ ಉಚಿತ ಪ್ರಯಾಣ, ಇಂದಿರಾ ಕ್ಯಾಂಟೀನ್‌, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳದಂಥ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಫಲ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲೂ ಜಾರಿಗೊಳಿಸಲು ಕಾಂಗ್ರೆಸ್‌ ಮುಂದಾಗಿದೆ.

 ಕೊಚ್ಚಿ: ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ಇಂದಿರಾ ಕ್ಯಾಂಟೀನ್‌ ವಿಸ್ತರಣೆ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳದಂಥ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಫಲ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲೂ ಜಾರಿಗೊಳಿಸಲು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಯುಡಿಎಫ್‌) ಮುಂದಾಗಿದೆ.

ಏ.9ರಂದು ನಡೆಯಲಿರುವ ಚುನಾವಣೆ

ಏ.9ರಂದು ನಡೆಯಲಿರುವ ಚುನಾವಣೆಗೆ ಪಕ್ಷದ ಹಿರಿಯ ನಾಯಕ ವಿ.ಡಿ.ಸತೀಶನ್‌ ಮತ್ತು ಇತರರು ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಅದರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ವಿವಿಧ ವರ್ಗದವರಿಗೆ ನೀಡುವ ಪಿಂಚಣಿ ಮೊತ್ತ 2000 ರು.ನಿಂದ 3000 ರು.ಗೆ ಏರಿಕೆ, ಕಾಲೇಜು ವಿದ್ಯಾರ್ಥಿನಿಯರಿಗೆ 1 ಸಾವಿರ ರು. ಮಾಸಿಕ ಆರ್ಥಿಕ ನೆರವು, ರಾಜ್ಯದ ಪ್ರತಿ ಕುಟುಂಬಗಳಿಗೂ 25 ಲಕ್ಷ ರು. ಮೌಲ್ಯದ ಆರೋಗ್ಯ ವಿಮೆ, ಸಣ್ಣ ಉದ್ಯಮಗಳಿಗೆ 5 ಲಕ್ಷ ರು. ಬಡ್ಡಿರಹಿತ ಸಾಲ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ, ಹಸಿವು ಮುಕ್ತ ಕೇರಳಕ್ಕಾಗಿ ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟಿನ್‌ ವಿಸ್ತರಣೆ, ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್‌ ತಡೆಯಲು ಪ್ರತ್ಯೇಕ ಆ್ಯಪ್‌ ಬಿಡುಗಡೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.

ಭರವಸೆಗಳೇನು?

– ಕರ್ನಾಟಕದ ‘ಶಕ್ತಿ’ ಮಾದರಿಯಲ್ಲಿ ಕೇರಳದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ

– ವಿವಿಧ ವರ್ಗದವರಿಗೆ ನೀಡಲಾಗುವ ಮಾಸಿಕ ಪಿಂಚಣಿ ಮೊತ್ತ 2000 ರು.ನಿಂದ 3000 ರು.ಗೇರಿಕೆ

– ಕಾಲೇಜು ವಿದ್ಯಾರ್ಥಿನಿಯರಿಗೆ ₹1 ಸಾವಿರ. ಪ್ರತಿ ಕುಟುಂಬಕ್ಕೂ 25 ಲಕ್ಷ ರು. ಆರೋಗ್ಯ ವಿಮೆ

– ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ. ಸಣ್ಣ ಉದ್ದಿಮೆಗಳಿಗೆ ಬಡ್ಡಿರಹಿತ ಸಾಲ

– ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟೀನ್‌ ವಿಸ್ತರಣೆ. ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್‌ ತಡೆಗೆ ಪ್ರತ್ಯೇಕ ಆ್ಯಪ್‌

– ಕೃಷಿಗೆ ಪ್ರತ್ಯೇಕ ಬಜೆಟ್‌, – ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಸರ್ಕಾರಿ ಇಲಾಖೆ ಸ್ಥಾಪನೆ



Source link

Leave a Reply

Your email address will not be published. Required fields are marked *