Headlines

ಹಾವೇರಿ ಹೆದ್ದಾರಿಯಲ್ಲಿ ಹೈಟೆಕ್ ದರೋಡೆ: ಮೂವಿಂಗ್ ಲಾರಿಯಿಂದಲೇ 25 ಲಕ್ಷದ ಫ್ಲಿಪ್‌ಕಾರ್ಟ್ ಮಾಲು ಮಂಗಮಾಯ!

ಹಾವೇರಿ ಹೆದ್ದಾರಿಯಲ್ಲಿ ಹೈಟೆಕ್ ದರೋಡೆ: ಮೂವಿಂಗ್ ಲಾರಿಯಿಂದಲೇ 25 ಲಕ್ಷದ ಫ್ಲಿಪ್‌ಕಾರ್ಟ್ ಮಾಲು ಮಂಗಮಾಯ!

ಹಾವೇರಿ ಹೆದ್ದಾರಿಯಲ್ಲಿ ಹೈಟೆಕ್ ದರೋಡೆ: ಮೂವಿಂಗ್ ಲಾರಿಯಿಂದಲೇ 25 ಲಕ್ಷದ ಫ್ಲಿಪ್‌ಕಾರ್ಟ್ ಮಾಲು ಮಂಗಮಾಯ!

ಹಾವೇರಿ (ಫೆ.6): ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಾಗುತ್ತಿದ್ದ ಗೂಡ್ಸ್ ವಾಹನದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಸಿನಿಮೀಯ ಶೈಲಿಯಲ್ಲಿ ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ ಮೊಬೈಲ್ ಫೋನ್ ಸೇರಿದಂತೆ ವಿವಿಧ ಬೆಲೆಬಾಳುವ ವಸ್ತುಗಳನ್ನು ವಾಹನ ಚಲಿಸುತ್ತಿದ್ದ ಸಂದರ್ಭದಲ್ಲೇ ಖದೀಮರು ಲೂಟಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದಿಂದ ಮೊಟೇಬೆನ್ನೂರು ತಲುಪುವ ಅವಧಿಯಲ್ಲೇ ಈ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ.

25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮಾಯ

ಈ ದುರ್ಘಟನೆಯು ಬೆಂಗಳೂರಿನಿಂದ ಧಾರವಾಡ ಜಿಲ್ಲೆಯ ಕೊಟೂರ ಗ್ರಾಮದಲ್ಲಿರುವ ಫ್ಲಿಪ್‌ಕಾರ್ಟ್ ವೇರ್‌ಹೌಸ್‌ಗೆ ಲಾರಿ ಸಂಚರಿಸುತ್ತಿದ್ದ ವೇಳೆ ನಡೆದಿದೆ. ಮಲ್ಲಿಕಜಾನ್ ಮುಲ್ಲಾ ಎಂಬುವರಿಗೆ ಸೇರಿದ ಗೂಡ್ಸ್ ಲಾರಿಯಲ್ಲಿ ಈ ಕಳ್ಳತನ ನಡೆದಿದ್ದು, ಖದೀಮರು ವಾಹನದ ‘ಲಿಂಕ್ಡ್ ಡಿವೈಸ್’ ಅನ್ನು ಮುರಿದು ಹಾಕಿದ್ದಾರೆ. ಸುಮಾರು 6 ದೊಡ್ಡ ಬಾಕ್ಸ್‌ಗಳಲ್ಲಿದ್ದ 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ..

ತನಿಖೆ ಚುರುಕುಗೊಳಿಸಿದ ಪೊಲೀಸರ

ಘಟನೆಗೆ ಸಂಬಂಧಿಸಿದಂತೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ರಾಷ್ಟ್ರೀಯ ಹೆದ್ದಾರಿ 48 ರ ಉದ್ದಕ್ಕೂ ಇರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಚಲಿಸುವ ಲಾರಿಯನ್ನು ಏರಿ ಕಳ್ಳತನ ಮಾಡಿರುವ ಈ ಶೈಲಿಯು ಪೊಲೀಸರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ವಿವಿಧ ಆಯಾಮಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.

Source link

Leave a Reply

Your email address will not be published. Required fields are marked *