Headlines

Lakshmi Nivasa Serial: ಏಕಕಾಲಕ್ಕೆ ‘ಲಕ್ಷ್ಮೀ ನಿವಾಸ’ದ ಮೂರು ಪಾತ್ರಗಳು ಅಂತ್ಯ; ಹೀಗ್ಯಾಕೆ ಮಾಡಿದ್ರು? | Three Characters End In Lakshmi Nivasa Kannada Serial

Lakshmi Nivasa Serial: ಏಕಕಾಲಕ್ಕೆ ‘ಲಕ್ಷ್ಮೀ ನಿವಾಸ’ದ ಮೂರು ಪಾತ್ರಗಳು ಅಂತ್ಯ; ಹೀಗ್ಯಾಕೆ ಮಾಡಿದ್ರು? | Three Characters End In Lakshmi Nivasa Kannada Serial



Lakshmi Nivasa Serial: ಏಕಕಾಲಕ್ಕೆ ‘ಲಕ್ಷ್ಮೀ ನಿವಾಸ’ದ ಮೂರು ಪಾತ್ರಗಳು ಅಂತ್ಯ; ಹೀಗ್ಯಾಕೆ ಮಾಡಿದ್ರು? | Three Characters End In Lakshmi Nivasa Kannada Serial

Lakshmi Nivasa Serial Episode: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್‌ ಎದುರಾಗುತ್ತಿದೆ. ಹೀಗಿರುವಾಗ ಮೂರು ಪಾತ್ರಗಳು ಏಕಾಏಕಿ ಅಂತ್ಯ ಆಗಿವೆ. ಇದಕ್ಕೆ ಕಾರಣ ಏನು? ಯಾಕೆ ಹೀಗೆ ಮಾಡಿದರು?

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಜೈಲಿನಿಂದ ಹೊರಗಡೆ ಬಂದಿದ್ದಾರೆ. ಶ್ರೀಕಾಂತ್‌ ಕೊ*ಲೆ ಮಾಡಿದ್ದಾರೆ ಎಂಬ ಆರೋಪದಡಿ ಅವರು ಜೈಲು ಸೇರಿದ್ದರು. ಆಮೇಲೆ ಶ್ರೀಕಾಂತ್‌ ಜೀವಂತವಾಗಿದ್ದಾರೆ ಎಂದಮೇಲೆ ಈ ಆರೋಪ ಯಾಕೆ?

ಶ್ರೀಕಾಂತ್‌ ಬದುಕಿದ್ದಾನೆ!

ಶ್ರೀಕಾಂತ್‌ ತಂಗಿಯನ್ನು ರವಿಶಂಕರ್‌ ಮದುವೆ ಆಗಿದ್ದನು. ಇವನ ಆಸ್ತಿ ಮೇಲಿನ ಆಸೆಗೆ ಶ್ರೀಕಾಂತ್‌ನನ್ನು ಕೊ*ಲೆ ಮಾಡುವ ಪ್ರಯತ್ನಪಟ್ಟಿದ್ದನು. ಆದರೆ ಶ್ರೀಕಾಂತ್‌ ಸಾಯಲಿಲ್ಲ, ಯಾರಿಗೂ ಈ ವಿಷಯ ಗೊತ್ತೇ ಇರಲಿಲ್ಲ. ಶ್ರೀಕಾಂತ್‌ನನ್ನು ಮದುವೆ ಆಗಬೇಕಿದ್ದ ಭಾವನಾ ಕೊನೆಗೆ ಸಿದ್ದೇಗೌಡ್ರನ್ನು ಮದುವೆ ಆಗುವ ಹಾಗೆ ಆಯ್ತು.

ಜೈಲು ಸೇರಿದ ಸಿದ್ದೇಗೌಡ್ರು

ಶ್ರೀಕಾಂತ್‌ ಸಾವಿನ ಹೊಣೆ ಹೊರಿಸಿ ಸಿದ್ದೇಗೌಡ್ರನ್ನು ಜೈಲಿಗೆ ಹಾಕಿಸಿದರು. ಪತಿಯನ್ನು ಉಳಿಸಿಕೊಳ್ಳಲು ಭಾವನಾ ಸಿಕ್ಕಾಪಟ್ಟೆ ಪ್ರಯತ್ನಮಾಡಿದ್ದಾರೆ. ಆದರೂ ಕೂಡ ಸಾಧ್ಯ ಆಗಿಲ್ಲ. ಕೊನೆಗೆ ಶ್ರೀಕಾಂತ್‌ ಕೋರ್ಟ್‌ಗೆ ಬಂದು ನಡೆದಿದ್ದ ಎಲ್ಲ ವಿಷಯವನ್ನು ಹೇಳಿದ್ದಾನೆ.

ಮೂರು ಪಾತ್ರ ಅಂತ್ಯ

ಶ್ರೀಕಾಂತ್‌ ಭಾವನಾ ಬಳಿ, ಇನ್ಮುಂದೆ ನಾನು, ನಿಮ್ಮ ಭೇಟಿ ಆಗೋದಿಲ್ಲ. ನಾನು ನನ್ನ ಮಗಳು ಖುಷಿ, ತಂಗಿ ಜೊತೆಗೆ ವಿದೇಶಕ್ಕೆ ಹೋಗಿ ಅಲ್ಲಿ ಸೆಟಲ್‌ ಆಗ್ತೀನಿ ಎಂದು ಹೇಳಿದ್ದಾರೆ. ಧಾರಾವಾಹಿಯಲ್ಲಿ ವಿದೇಶಕ್ಕೆ ಹೋಗಿದ್ದಾರೆ ಎಂದರೆ ಪಾತ್ರ ಮುಗಿದಂತೆ, ವಿದೇಶದಲ್ಲಿದ್ದವರನ್ನು ತೋರಿಸೋದಿಲ್ಲ.

ಮೂರು ಪಾತ್ರಗಳು ಅಂತ್ಯ!

ಇಷ್ಟುದಿನ ಸತ್ತಿದ್ದ ಶ್ರೀಕಾಂತ್‌ನನ್ನು ಈಗ ಮತ್ತೆ ಬದುಕಿಸಿ ಕರೆತಂದಿರೋದು ದೊಡ್ಡ ಆಶ್ಚರ್ಯವಾಗಿತ್ತು. ಈಗ ಇನ್ನೇನು ಟ್ವಿಸ್ಟ್‌ ಕೊಡೋಕೆ ರೆಡಿ ಆಗಿದ್ದಾರೆ ಎಂದುಕೊಳ್ಳಲಾಗಿತ್ತು. ಅದೇ ಟೈಮ್‌ಗೆ ಸಿದ್ದೇಗೌಡ್ರನ್ನು ಜೈಲಿನಿಂದ ಬಿಡಿಸಿದ್ದಾರೆ, ಒಟ್ಟಿನಲ್ಲಿ ಈ ಮೂರು ಪಾತ್ರಗಳು ಏಕಕಾಲಕ್ಕೆ ಅಂತ್ಯ ಆಗಿವೆ ಎನ್ನಬಹುದು. ಸದ್ಯ ಈ ಮೂರು ಪಾತ್ರಗಳು ತೆರೆ ಮೇಲೆ ಕಾಣಿಸಿಕೊಳ್ಳೋದು ಡೌಟ್.

ಬೇರೆ ಬೇರೆ ಕಥೆ

ದೊಡ್ಡ ತಾರಾಗಣವಿರುವ ಈ ಧಾರಾವಾಹಿಯಲ್ಲಿ ಮೂರು-ನಾಲ್ಕು ಟ್ರ್ಯಾಕ್‌ಗಳು ಸಾಗುತ್ತಿವೆ. ಜಾಹ್ನವಿ-ಜಯಂತ್, ಲಕ್ಷ್ಮೀ-ಶ್ರೀನಿವಾಸ್‌, ಸಿದ್ದೇಗೌಡ್ರು-ಭಾವನಾ ಎಂದು ಸಾಕಷ್ಟು ಕಥೆಯ ಎಳೆಗಳು ಸಾಗುತ್ತಿವೆ. ಒಟ್ಟಿನಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಸಿದ್ದೇಗೌಡ್ರು-ಧನಂಜಯ

ಭಾವನಾ- ದಿಶಾ ಮದನ್‌

ಶ್ರೀಕಾಂತ್-‌ ರಘು ಮುಖರ್ಜಿ

ಲಕ್ಷ್ಮೀ-ಮಾಧುರಿ

ಶ್ರೀನಿವಾಸ್-‌ ಅಶೋಕ್‌ ಜಂಭೆ



Source link

Leave a Reply

Your email address will not be published. Required fields are marked *