Marriage Tips: ಮದುವೆ ಆದ್ಮೇಲೆ ಹೆಂಡ್ತಿಯರು ಗೂಗಲ್‌ನಲ್ಲಿ ಏನ್ ಸರ್ಚ್ ಮಾಡ್ತಾರೆ? ಗಂಡಸ್ರೇ, ಇದನ್ನೊಮ್ಮೆ ಓದಿ! | 7 Things Married Women Secretly Search On Google After Wedding Gvd

Marriage Tips: ಮದುವೆ ಆದ್ಮೇಲೆ ಹೆಂಡ್ತಿಯರು ಗೂಗಲ್‌ನಲ್ಲಿ ಏನ್ ಸರ್ಚ್ ಮಾಡ್ತಾರೆ? ಗಂಡಸ್ರೇ, ಇದನ್ನೊಮ್ಮೆ ಓದಿ! | 7 Things Married Women Secretly Search On Google After Wedding Gvd



Marriage Tips: ಮದುವೆ ಆದ್ಮೇಲೆ ಹೆಂಡ್ತಿಯರು ಗೂಗಲ್‌ನಲ್ಲಿ ಏನ್ ಸರ್ಚ್ ಮಾಡ್ತಾರೆ? ಗಂಡಸ್ರೇ, ಇದನ್ನೊಮ್ಮೆ ಓದಿ! | 7 Things Married Women Secretly Search On Google After Wedding Gvd

ಮದುವೆ ಆದ್ಮೇಲೆ ಒಬ್ಬ ಹೆಣ್ಣಿನ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಹೊಸ ಮನೆ, ಹೊಸ ಜನ… ಇವರ ನಡುವೆ ತನ್ನದೇ ಒಂದು ಗುರುತು ಮೂಡಿಸೋದು ಆಕೆಗೆ ಒಂದು ಸವಾಲಿನ ಕೆಲಸವೇ ಸರಿ. ಆರಂಭದಲ್ಲಿ ಆಕೆಯ ಮನಸ್ಸಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡುತ್ತವೆ.

ಮದುವೆಯಾದ ಮೇಲೆ ಮಹಿಳೆಯ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಹೊಸ ಜವಾಬ್ದಾರಿಗಳು, ಹೊಸ ಮನೆ, ಹೊಸ ಸಂಬಂಧಗಳು… ಹೀಗಿರುವಾಗ ಮನಸ್ಸಲ್ಲಿ ನೂರಾರು ಪ್ರಶ್ನೆಗಳು ಮೂಡೋದು ಸಹಜ. ಎಲ್ಲವನ್ನೂ ಎಲ್ಲರ ಹತ್ತಿರ ಕೇಳೋಕೆ ಆಗಲ್ಲ. ಅದಕ್ಕೇ ಇತ್ತೀಚೆಗೆ ಮಹಿಳೆಯರು ಗೂಗಲ್ ಮೊರೆ ಹೋಗ್ತಾರೆ. ಮದುವೆ ನಂತರ ಹೆಣ್ಣುಮಕ್ಕಳು ಅತಿ ಹೆಚ್ಚು ಸರ್ಚ್ ಮಾಡುವ 7 ವಿಷಯಗಳು ಇಲ್ಲಿವೆ.

ಮದುವೆ ಆದ್ಮೇಲೆ ಒಬ್ಬ ಹೆಣ್ಣಿನ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಹೊಸ ಮನೆ, ಹೊಸ ಜನ… ಇವರ ನಡುವೆ ತನ್ನದೇ ಒಂದು ಗುರುತು ಮೂಡಿಸೋದು ಆಕೆಗೆ ಒಂದು ಸವಾಲಿನ ಕೆಲಸವೇ ಸರಿ. ಆರಂಭದಲ್ಲಿ ಆಕೆಯ ಮನಸ್ಸಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡುತ್ತವೆ. ಆದರೆ, ಅವನ್ನು ಮುಕ್ತವಾಗಿ ಕೇಳೋಕೆ ಆಕೆಗೆ ಸಂಕೋಚ. ಆಗ ಉತ್ತರಕ್ಕಾಗಿ ಆಕೆ ಇಂಟರ್‌ನೆಟ್ ಮೊರೆ ಹೋಗ್ತಾಳೆ. ತನ್ನ ಮನಸ್ಸಿನ ಸಣ್ಣಪುಟ್ಟ ಗೊಂದಲಗಳನ್ನೆಲ್ಲಾ ಗೂಗಲ್‌ನಲ್ಲಿ ಕೇಳಿ ಉತ್ತರ ಹುಡುಕುತ್ತಾಳೆ. ಹಾಗಾದ್ರೆ, ಮದುವೆಯಾದ ಮಹಿಳೆಯರು ಗೂಗಲ್‌ನಲ್ಲಿ ಏನೆಲ್ಲಾ ಸರ್ಚ್ ಮಾಡ್ತಾರೆ ಅಂತ ನೋಡೋಣ ಬನ್ನಿ. ಪ್ರತಿಯೊಬ್ಬ ಗಂಡನಿಗೂ ಈ ಪ್ರಶ್ನೆಗಳ ಬಗ್ಗೆ ಗೊತ್ತಿರಬೇಕು, ಆಗಷ್ಟೇ ತನ್ನ ಹೆಂಡತಿಯನ್ನು ಮನೆಯಲ್ಲಿ ಕಂಫರ್ಟಬಲ್ ಆಗಿ ಇಡಲು ಸಾಧ್ಯ.

ವಿವಾಹಿತ ಮಹಿಳೆಯರ ಸಾಮಾನ್ಯ ಗೂಗಲ್ ಸರ್ಚ್‌ಗಳು

-ಗಂಡನನ್ನ ಖುಷಿಯಾಗಿ ಇಡೋದು ಹೇಗೆ?
ಮದುವೆಯಾದ ಮೇಲೆ ಹೆಚ್ಚಿನ ಮಹಿಳೆಯರು ತಮ್ಮ ಗಂಡನನ್ನು ಹೇಗೆ ಖುಷಿಯಾಗಿ ಇಡಬೇಕು ಅಂತ ಅಂದ್ಕೊಳ್ತಾರೆ. ಇದಕ್ಕಾಗಿ ಅವರು ಗಂಡನ ಇಷ್ಟ-ಕಷ್ಟಗಳು, ಅವರ ಸ್ವಭಾವ ಮತ್ತು ಸಂಬಂಧವನ್ನು ಇನ್ನಷ್ಟು ಚೆನ್ನಾಗಿ ಮಾಡಿಕೊಳ್ಳುವ ದಾರಿಗಳ ಬಗ್ಗೆ ಸರ್ಚ್ ಮಾಡ್ತಾರೆ.

-ಗಂಡನ ಮನಸ್ಸು ಗೆಲ್ಲೋದು ಹೇಗೆ?
ಈ ಪ್ರಶ್ನೆ ಕೂಡ ತುಂಬಾನೇ ಕಾಮನ್. ತಮ್ಮ ಸಂಬಂಧ ಗಟ್ಟಿಯಾಗಿ, ಖುಷಿಖುಷಿಯಾಗಿರಬೇಕು ಅಂತ ಮಹಿಳೆಯರು ಬಯಸುತ್ತಾರೆ. ಅದಕ್ಕಾಗಿ ಗಂಡನ ಮನಸ್ಸು ಗೆಲ್ಲುವ ಟಿಪ್ಸ್‌ಗಳನ್ನು ಹುಡುಕುತ್ತಾರೆ. ಅದರಲ್ಲೂ ಅರೇಂಜ್ ಮ್ಯಾರೇಜ್ ಆದವರು ಈ ಪ್ರಶ್ನೆಯನ್ನು ಹೆಚ್ಚಾಗಿ ಕೇಳುತ್ತಾರೆ.

-ಗಂಡನ ಹತ್ರ ನಮ್ಮ ಮಾತು ಕೇಳುವಂತೆ ಮಾಡೋದು ಹೇಗೆ?
ಕೆಲವು ಮಹಿಳೆಯರು ಸಂಬಂಧದಲ್ಲಿ ಒಂದು ಬ್ಯಾಲೆನ್ಸ್ ಇರಲಿ ಅಂತ ತಮ್ಮ ಸಂಗಾತಿಗೆ ಹೇಗೆ ಅರ್ಥ ಮಾಡಿಸಬೇಕು ಅಥವಾ ತಮ್ಮ ಮಾತನ್ನು ಅವರು ಕೇಳುವಂತೆ ಮಾಡುವುದು ಹೇಗೆ ಅಂತಾನೂ ಅಂದ್ಕೊಳ್ತಾರೆ.

-ಮಗು ಮಾಡಿಕೊಳ್ಳೋಕೆ ಸರಿಯಾದ ಸಮಯ ಯಾವುದು?
ಹೊಸದಾಗಿ ಮದುವೆಯಾದ ಜೋಡಿಗಳ ನಡುವೆ ಇದು ಬಹುದೊಡ್ಡ ಪ್ರಶ್ನೆ. ಮಹಿಳೆಯರು ಸರಿಯಾದ ಸಮಯ, ಪ್ಲಾನಿಂಗ್ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಗೂಗಲ್ ಸಹಾಯ ಪಡೆಯುತ್ತಾರೆ.

-ಗಂಡನ ಮನೆಯಲ್ಲಿ ಹೊಂದ್ಕೊಂಡು ಹೋಗೋದು ಹೇಗೆ?
ಹೊಸ ಕುಟುಂಬದ ಜೊತೆ ಬೆರೆಯೋದು ಅಷ್ಟು ಸುಲಭವಲ್ಲ. ಹಾಗಾಗಿ, ಗಂಡನ ಮನೆಯವರ ಜೊತೆ ಹೇಗೆ ನಡೆದುಕೊಳ್ಳಬೇಕು ಮತ್ತು ಸಂಬಂಧಗಳನ್ನು ಹೇಗೆ ಚೆನ್ನಾಗಿಟ್ಟುಕೊಳ್ಳಬೇಕು ಅಂತ ಮಹಿಳೆಯರು ಸರ್ಚ್ ಮಾಡ್ತಾರೆ.

-ಮದುವೆ ನಂತರ ಜವಾಬ್ದಾರಿಗಳನ್ನು ನಿಭಾಯಿಸುವುದು ಹೇಗೆ?
ಮದುವೆಯಾದ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತವೆ—ಮನೆ, ಕುಟುಂಬ ಮತ್ತು ಸಂಬಂಧಗಳ ನಿರ್ವಹಣೆ. ಇವುಗಳನ್ನು ಸರಿಯಾಗಿ ಮ್ಯಾನೇಜ್ ಮಾಡುವ ಟಿಪ್ಸ್‌ಗಳನ್ನು ಮಹಿಳೆಯರು ಹುಡುಕುತ್ತಾರೆ.

-ಕೆರಿಯರ್ ಮತ್ತು ಸಂಸಾರ ಎರಡನ್ನೂ ಬ್ಯಾಲೆನ್ಸ್ ಮಾಡೋದು ಹೇಗೆ?
ಇವತ್ತಿನ ಮಹಿಳೆಯರು ತಮ್ಮ ಕೆರಿಯರ್ ಬಗ್ಗೆಯೂ ಅಷ್ಟೇ ಸೀರಿಯಸ್ ಆಗಿದ್ದಾರೆ. ಮದುವೆಯಾದ ಮೇಲೆ ಕೆಲಸ ಮತ್ತು ಮನೆ ಎರಡನ್ನೂ ಹೇಗೆ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು ಅಂತ ಅವರು ಅಂದ್ಕೊಳ್ತಾರೆ.



Source link

Leave a Reply

Your email address will not be published. Required fields are marked *