
Bigg Boss Ranjith Family Files Complaint ಕಿರುತೆರೆ ನಟ ರಂಜಿತ್ ವಿರುದ್ಧ ಅವರ ಬಾವ ಜಗದೀಶ್ ಜೀವ ಬೆದರಿಕೆ ಆರೋಪದ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫ್ಲ್ಯಾಟ್‌ಗೆ ಸಂಬಂಧಿಸಿದ ಈ ಜಗಳದಲ್ಲಿ ಅಕ್ಕ-ತಮ್ಮನ ನಡುವೆ ಗಲಾಟೆಯಾಗಿದೆ.
ಬೆಂಗಳೂರು (ಸೆ.18): ಕಳೆದ ಆವೃತ್ತಿಯ ಬಿಗ್‌ಬಾಸ್ ವೇಳೆ ಜಗದೀಶ್ ಮೇಲೆ ಹಲ್ಲೆಗೆ ಯತ್ನಿಸಿ ಅರ್ಧದಲ್ಲೇ ಸೀಸನ್‌ನಿಂದ ಹೊರಬಿದ್ದಿದ್ದ ಕಿರುತೆರೆ ನಟ ರಂಜಿತ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರನ್ನು ದಾಖಲಿಸಿರುವುದು ಅವರ ಬಾವ ಜಗದೀಶ್. ರಂಜಿತ್‌ನಿಂದ ನನಗೆ ಜೀವ ಬೆದರಿಕೆ ಇದೆ ಎನ್ನುವ ಆರೋಪದಲ್ಲಿ ಜಗದೀಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2018 ರಿಂದ ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಜಗದೀಶ್ ಅವರ ಕುಟುಂಬ ವಾಸವಿದೆ. 2025 ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಭಾವನ ಜೊತೆ ರಂಜಿತ್ ವಾಸವಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೀಗ ಈ ಮನೆ ನಂದು ಎಂದು ಅಕ್ಕ ಹಾಗೂ ತಮ್ಮನ ನಡುವೆ ಗಲಾಟೆ ಶುರುವಾಗಿದೆ. ರಂಜಿತ್ , ರಂಜಿತ್ ಪತ್ನಿ ಹಾಗು vs ರಂಜಿತ್ ಅಕ್ಕ ನ ನಡುವೆ ನಡೆದಿರುವ ಗಲಾಟೆಯ ವಿಡಿಯೋ ಕೂಡ ವೈರಲ್ ಆಗಿದೆ. ಗಲಾಟೆ ವೇಳೆ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ ಎಂದೂ ಆರೋಪಿಸಲಾಗಿದೆ. ಮನೆ ಬಿಟ್ಟು ಹೋಗದೆ ನಂದೆ ಮನೆ ಅಂತಾ ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ದೂರಿನಲ್ಲಿ ತಿಳಿಸಿದ್ದಾರ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎನ್ ಸಿ ಆರ್ ದಾಖಲಾಗಿದ್ದು, ಮನೆಯಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಳ್ಳುವ ವೀಡಿಯೊ ಲಭ್ಯವಾಗಿದೆ.
ತಂದೆಯ ಫ್ಲ್ಯಾಟ್‌ನಲ್ಲಿ ಪಾಲಿಗಾಗಿ ಜಗಳ
ಅಕ್ಕ ತಮ್ಮನ ಜಗಳಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ತಂದೆ ಫ್ಲಾಟ್ ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಪರಸ್ಪರ ದೂರು ದಾಖಲಿಸಿದ್ದಾರೆ. ದೂರು ಪಡೆದು ಪೊಲೀಸರು ಎನ್‌ಸಿಆರ್ ದಾಖಲಿಸಸಿದ್ದಾರೆ. ಫ್ಲಾಟ್ ವಿಚಾರ ( ಸಿವಿಲ್ ವ್ಯಾಜ್ಯ) ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಹಿಂದೆ ಪೂರ್ತಿ ಕುಟುಂಬ ಅದೇ ಫ್ಲಾಟ್ ನಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಅಕ್ಕ ಬೇರೆ ಹೋಗಿದ್ದಾರೆ. ಈ ಮನೆಯಲ್ಲಿ ತನಗೂ ಪಾಲಿದೆ ಎಂದು ಇಬ್ಬರು ವಾದ ಮಾಡಿದ್ದು, ಪರಿಹಾರ ಮಾಡಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ಪೊಲೀಸರು ಇಬ್ಬರಿಗೂ ಬುದ್ದಿ ಹೇಳಿ ಕೋರ್ಟ್‌ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚನೆ ನೀಡಿದ್ದಾರೆ.