ತಮಿಳುನಾಡು ಯುವಕನಿಗೆ ದುಬಾರಿ ಜೀವನ ಪಾಠ ಮಾಡಿದ ಬೆಂಗಳೂರು; ಒಂದೇ ವಾರಕ್ಕೆ ₹30,000 ಖರ್ಚು ಮಾಡಿಕೊಂಡು ತೆಪ್ಪಗಾದ! | Bengaluru Expensive Life Tamil Nadu Youth Living Cost Viral Post 30k Spent In One Week Sat

ತಮಿಳುನಾಡು ಯುವಕನಿಗೆ ದುಬಾರಿ ಜೀವನ ಪಾಠ ಮಾಡಿದ ಬೆಂಗಳೂರು; ಒಂದೇ ವಾರಕ್ಕೆ ₹30,000 ಖರ್ಚು ಮಾಡಿಕೊಂಡು ತೆಪ್ಪಗಾದ! | Bengaluru Expensive Life Tamil Nadu Youth Living Cost Viral Post 30k Spent In One Week Sat



ತಮಿಳುನಾಡು ಯುವಕನಿಗೆ ದುಬಾರಿ ಜೀವನ ಪಾಠ ಮಾಡಿದ ಬೆಂಗಳೂರು; ಒಂದೇ ವಾರಕ್ಕೆ ₹30,000 ಖರ್ಚು ಮಾಡಿಕೊಂಡು ತೆಪ್ಪಗಾದ! | Bengaluru Expensive Life Tamil Nadu Youth Living Cost Viral Post 30k Spent In One Week Sat

ಬೆಂಗಳೂರಿಗೆ ಹೊಸದಾಗಿ ಬಂದ ಯುವಕನೊಬ್ಬ ತನ್ನ ಮೊದಲ ವಾರದ ಖರ್ಚಿನ ವಿವರ ಹಂಚಿಕೊಂಡಿದ್ದಾನೆ. HSR ಲೇಔಟ್‌ನಲ್ಲಿ ಬಾಡಿಗೆಗೆ ₹18,000 ಮತ್ತು ಊಟಕ್ಕೆ ₹12,000 ಸೇರಿ ಒಟ್ಟು ₹30,000 ಖರ್ಚು ಮಾಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ದುಬಾರಿ ಜೀವನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು (ಫೆ.19): ‘ಸಿಲಿಕಾನ್ ಸಿಟಿ’ ಬೆಂಗಳೂರು ಅಂದ್ರೆ ಅದು ಬರೀ ಕನಸುಗಳ ನಗರ ಅಷ್ಟೇ ಅಲ್ಲ, ಅದು ಜೇಬು ಖಾಲಿ ಮಾಡುವ ‘ದುಬಾರಿ’ ನಗರ ಕೂಡ ಹೌದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೆಲಸ ಹುಡುಕಿಕೊಂಡು ಅಥವಾ ವೃತ್ತಿಜೀವನ ರೂಪಿಸಿಕೊಳ್ಳಲು ಬೆಂಗಳೂರಿಗೆ ಬರುವವರಿಗೆ ಇಲ್ಲಿನ ಬಾಡಿಗೆ ಮತ್ತು ಜೀವನಶೈಲಿ ಆರಂಭದಲ್ಲೇ ಶಾಕ್ ನೀಡುತ್ತದೆ. ಇದೀಗ ತಮಿಳುನಾಡು ಮೂಲದ ಯುವಕನೊಬ್ಬ ಬೆಂಗಳೂರಿನಲ್ಲಿ ತನ್ನ ಮೊದಲ ವಾರದ ಖರ್ಚಿನ ವಿವರವನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ಒಂದೇ ವಾರಕ್ಕೆ ₹30,000 ವೆಚ್ಚ!

ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಕಾವೇರಿಪಾಕ್ಕಂ ನಿವಾಸಿಯಾದ ಪ್ರಾಹಾ (@Praha37v) ಎಂಬ ಯುವಕ ಇತ್ತೀಚೆಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ನಗರಕ್ಕೆ ಬಂದು ಒಂದು ವಾರ ಕಳೆಯುವಷ್ಟರಲ್ಲಿ ಅವರು ಮಾಡಿದ ಖರ್ಚು ಬರೋಬ್ಬರಿ 30 ಸಾವಿರ ರೂಪಾಯಿ ದಾಟಿದೆ! ಈ ಬಗ್ಗೆ ಅವರು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಾಕಿದ್ದು, ‘ಬೆಂಗಳೂರಿನಲ್ಲಿ ಒಂದು ವಾರ ಪೂರ್ಣಗೊಂಡಿದೆ. ಇಲ್ಲಿನ ಬಾಡಿಗೆಗಾಗಿ ₹18,000 ಕ್ಕೂ ಹೆಚ್ಚು ಮತ್ತು ಕೇವಲ ಊಟಕ್ಕಾಗಿ ₹12,000ಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದೇನೆ. ನಗರದ ಜೀವನ ಅಗ್ಗವಾಗಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸ್ತವ್ಯ:

ತಮ್ಮ ವೃತ್ತಿಜೀವನದ ನಿಮಿತ್ತ ಇಂದಿರಾನಗರ, ಎಚ್‌ಎಸ್‌ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ವಿವಿಧ ಭಾಗಗಳನ್ನು ಪ್ರಾಹಾ ಅನ್ವೇಷಿಸಿದ್ದಾರೆ. ಅಂತಿಮವಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೆಲೆಸಲು ನಿರ್ಧರಿಸಿರುವ ಅವರು, ಅಲ್ಲಿ ಒಂದು ಸುಸಜ್ಜಿತ (Fully Furnished) ಫ್ಲಾಟ್ ಪಡೆದಿದ್ದಾರೆ. ‘ಎಚ್‌ಎಸ್‌ಆರ್‌ನಲ್ಲಿ ಎಲ್ಲವೂ ನಡೆದುಕೊಂಡು ಹೋಗುವ ದೂರದಲ್ಲೇ ಸಿಗುತ್ತವೆ. ಆದರೆ ಖರ್ಚು ಮಾತ್ರ ನಿರೀಕ್ಷೆಗೂ ಮೀರಿದೆ. ನನಗೇನು ಅತಿಯಾಗಿ ಖರ್ಚು ಮಾಡುವ ಅಭ್ಯಾಸವಿಲ್ಲದಿದ್ದರೂ ಇಷ್ಟು ಹಣ ವೆಚ್ಚವಾಗಿದೆ’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ‘ಗ್ರೈಂಡಿಂಗ್’ ಲೈಫ್:

ಖರ್ಚಿನ ಜೊತೆಗೆ ಬೆಂಗಳೂರಿನ ಕೆಲಸದ ಸಂಸ್ಕೃತಿಯ ಬಗ್ಗೆಯೂ ಪ್ರಾಹಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರು ಕೆಲಸ ಮಾಡಲು ಅತ್ಯುತ್ತಮ ಸ್ಥಳ. ಇಲ್ಲಿನ ಜನರು ತಮ್ಮ ಗುರಿ ತಲುಪಲು ಪಡುತ್ತಿರುವ ಶ್ರಮ (Grinding) ಅದ್ಭುತವಾಗಿದೆ. ಇಂತಹ ವಾತಾವರಣವನ್ನು ನಾನು ಈ ಹಿಂದೆ ಎಲ್ಲೂ ನೋಡಿರಲಿಲ್ಲ ಅಥವಾ ನಿರೀಕ್ಷಿಸಿರಲಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.

Scroll to load tweet…

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:

ಫೆಬ್ರವರಿ 17 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಈಗಾಗಲೇ 16 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ’18 ಸಾವಿರ ರೂಪಾಯಿಗೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸುಸಜ್ಜಿತ ಫ್ಲಾಟ್ ಸಿಗಲು ಸಾಧ್ಯವೇ ಇಲ್ಲ, ನೀವು ಅದೃಷ್ಟವಂತರು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ‘ಒಂದು ವಾರದ ಊಟಕ್ಕೆ 12 ಸಾವಿರ ಅಂದ್ರೆ ನೀವು ದಿನಕ್ಕೆ ಸರಾಸರಿ 1700 ರೂಪಾಯಿ ಖರ್ಚು ಮಾಡಿದ್ದೀರಾ? ಇದು ಜೀವನಶೈಲಿಯ ತಪ್ಪೇ ಹೊರತು ನಗರದ ತಪ್ಪಲ್ಲ’ ಎಂದು ಕೆಲವರು ಟೀಕಿಸಿದ್ದಾರೆ. ಇನ್ನೂ ಕೆಲವರು ಹಣ ಉಳಿಸಲು ಸಲಹೆ ನೀಡಿದ್ದು, ‘ಎಚ್‌ಎಸ್‌ಆರ್ ಬದಲಿಗೆ ಬೊಮ್ಮನಹಳ್ಳಿ ಅಥವಾ ಜಿಬಿ ಪಾಳ್ಯದಂತಹ ಕಡೆ ಮನೆ ಹುಡುಕಿದ್ದರೆ ಅಗ್ಗದಲ್ಲಿ ಸಿಗುತ್ತಿತ್ತು’ ಎಂದಿದ್ದಾರೆ.

ಒಟ್ಟಾರೆಯಾಗಿ, ಈ ಪೋಸ್ಟ್ ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಮಧ್ಯಮ ವರ್ಗದ ಯುವಕರು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಪ್ರತಿಬಿಂಬಿಸುತ್ತಿದೆ.



Source link

Leave a Reply

Your email address will not be published. Required fields are marked *