ಡಿವೋರ್ಸ್ ಸಿಕ್ಕ ಖುಷಿಯಲ್ಲಿ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿದ ಗಂಡ, ಸಂಭ್ರಮದ ವಿಡಿಯೋ | Husband Celebrate Divorce From Wife With 40 Litre Milk Bath Assam

ಡಿವೋರ್ಸ್ ಸಿಕ್ಕ ಖುಷಿಯಲ್ಲಿ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿದ ಗಂಡ, ಸಂಭ್ರಮದ ವಿಡಿಯೋ | Husband Celebrate Divorce From Wife With 40 Litre Milk Bath Assam



ಪತ್ನಿಗೆ ಒಬ್ಬ ಲವರ್. ಆತನ ಜೊತೆ ಓಡಿ ಹೋದರೂ ಪತಿ ಮಾತ್ರ ಕುಟುಂಬದ ಸಂತೋಷ ಹಾಳುಗುತ್ತೆ ಅನ್ನೋ ಕಾರಣಕ್ಕೆ ಮೌನವಾಗಿದ್ದ. ಕೊನೆಗೆ ಪತ್ನಿಯ ಟಾರ್ಚರ್ ತಡಿಯಲು ಆಗದೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದ. ಇದೀಗ ಡಿವೋರ್ಸ್ ಸಿಗುತ್ತಿದ್ದಂತೆ ಗಂಡ ಖುಷಿಯಲ್ಲಿ ಕ್ಷೀರಾಭೀಷಕ ಮಾಡಿದ್ದಾನೆ.

ಗುವ್ಹಾಟಿ (ಜು.13) ಕಳೆದ ಕೆಲ ವರ್ಷಗಳಿಂದ ಪತ್ನಿಯ ಕಿರುಕುಳಕ್ಕೆ ಬೇಸತ್ತಿದ್ದ. ಪತ್ನಿ ಬೇರೊಬ್ಬನ ಜೊತೆ ಓಡಿ ಹೋಗಿದ್ದರೂ ಈತನಿಗೆ ಟಾರ್ಚರ್ ತಪ್ಪಿರಲಿಲ್ಲ. ಕುಟುಂಬ, ಮಗಳು, ಪೋಷಕರು, ಮರ್ಯಾದೆಗೆ ಅಂಜಿ ಈತ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಕೊನೆಗೆ ಟಾರ್ಚರ್ ಹೆಚ್ಚಾಗುತ್ತಿದ್ದಂತೆ ಬೇರೆ ದಾರಿ ಕಾಣದೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದ. ಬಳಿಕ ಕೋರ್ಟು, ಕೇಸು ಎಂದು ಅಲೆದಾಡಿ ಬೇಸತ್ತು ಹೋಗಿದ್ದ. ಇದರ ನಡುವೆ ವಕೀಲರು ಕರೆ ಮಾಡಿ ಡಿವೋರ್ಸ್ ಫೈನಲ್ ಆಗಿದೆ. ಇನ್ನು ಸ್ವತಂತ್ರ ಎಂದು ಸಂದೇಶ ನೀಡಿದ್ದಾರೆ. ಈ ಮಾತು ಕೇಳಿದ ಬೆನ್ನಲ್ಲೇ ಪತಿ ಹಾಲಿನಿಂದ ಸ್ನಾನ ಮಾಡಿದ್ದಾನೆ. ಇಷ್ಟೇ ಅಲ್ಲ ನಾನು ಇನ್ನು ಸಂಪೂರ್ಣ ಸ್ವತಂತ್ರ ಎಂದು ಕುಣಿದಾಡಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.

40 ಲೀಟರ್ ಹಾಲಿನಿಂದ ಸ್ನಾನ

ನಲ್ಬಾರಿ ಜಿಲ್ಲೆಯ ಮನಿಕ್ ಅಲಿಗೆ ಡಿವೋರ್ಸ್ ಸಿಕ್ಕಿದೆ. ಪತ್ನಿಯಿಂದ ಮುಕ್ತಿ ಸಿಕ್ಕದ ಖುಷಿಯಲ್ಲಿ ಬರೋಬ್ಬರಿ 40 ಲೀಟರ್ ಹಾಲಿನಿಂದ ಸ್ನಾನ ಮಾಡಿ ಸಂಭ್ರಮಿಸಿದ್ದಾನೆ. ತನ್ನ ಸಂಭ್ರಮವನ್ನು ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈತನ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ.

ಮನಿಕ್ ಅಲಿ ಮದುವೆಯಾಗಿ ಕೆಲ ವರ್ಷಗಳು ಕಳೆದಿದೆ. ಇವರಿಗೆ ಒಬ್ಬಳು ಮಗಳಿದ್ದಾಳೆ. ಆದರೆ ಮನಿಕ್ ಆಲಿ ಪತ್ನಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಹಲವು ಬಾರಿ ಲವರ್ ಜೊತೆ ಓಡಿ ಹೋಗಿದ್ದಳು. ಈ ವೇಳೆ ತನ್ನ ಮಗಳ ಭವಿಷ್ಯ ನೆನೆದು ಮತ್ತೆ ಸಂಧಾನ ಮಾಡಿ ಪತ್ನಿಯನ್ನು ಕರೆ ತರಲಾಗಿತ್ತು. ಆದರೆ ಪದೇ ಪದೇ ಮನಿಕ್ ಅಲಿಗೆ ಟಾರ್ಚರ್ ನೀಡಿ ಲವರ್ ಜೊತೆ ಓಡಿ ಹೋಗುತ್ತಿದ್ದ ಪತ್ನಿ ನಡೆಯಿಂದ ಮನಿಕ್ ಆಲಿ ಕೂಡ ಬೇಸತ್ತು ಹೋಗಿದ್ದ. ಪತ್ನಿಯನ್ನು ಪ್ರಶ್ನಿಸಿದರೆ ಕಿರುಕುಳ ನೀಡುತ್ತಿದ್ದಳು ಎಂದು ಮನಿಕ್ ಆಲಿ ಹೇಳಿದ್ದಾರೆ.

 

 

ಮಗಳ ಭವಿಷ್ಯದ ದೃಷ್ಟಿಯಿಂದ ಡಿವೋರ್ಸ್ ಉತ್ತಮ ನಿರ್ಧಾರವಲ್ಲ ಎಂದು ಮನಿಕ್ ಆಲಿ ಸಂಧಾನ ಮಾಡಿ ಪತ್ನಿಯನ್ನು ಕರೆತರುತ್ತಿದ್ದ. ಆದರೆ ಪತ್ನಿಯ ಕಿರುಕುಳ ಹೆಚ್ಚಾಗುತ್ತಿದ್ದಂತೆ ತನ್ನಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದ. ಲವರ್ ಜೊತೆ ಓಡಿ ಹೋದ ಪತ್ನಿಗೆ ಮದುವೆಯಾಗಲು ಮೊದಲ ಗಂಡನಿಗೆ ಡಿವೋರ್ಸ್ ನೀಡಿಲ್ಲದ ಕಾರಣ ಕಾನೂನು ಅಡೆ ತಡೆ ಎದುರಾಗಿದೆ. ಇತ್ತ ಮನಿಕ್ ಅಲಿಗೂ ಡಿವೋರ್ಸ್ ಬೇಕಾಗಿತ್ತು. ಇವರಿಬ್ಬರ ಡಿವೋರ್ಸ ಅರ್ಜಿ ಕೊರ್ಟ್ ಮೆಟ್ಟಿಲೇರಿದೆ. ಬಳಿಕ ಹಲವು ಸುತ್ತಿನ ವಿಚಾರಣೆ ಸೇರಿದಂತೆ ಸುದೀರ್ಘ ದಿನಗಳೇ ಬೇಕಾಗಿದೆ.

ಡಿವೋರ್ಸ್ ಅಂತಿಮಗೊಳ್ಳುತ್ತಿದ್ದಂತೆ ಕುಣಿದಾಡಿದ ಮನಿಕ್ ಅಲಿ

ಹಲುವ ವಿಚಾರಣೆ, ಸುದೀರ್ಘ ದಿನಗಳ ಬಳಿಕ ವಕೀಲ ಮನಿಕ್ ಆಲಿಗೆ ಕರೆ ಮಾಡಿದ್ದಾರೆ. ನಿಮ್ಮ ವಿಚ್ಛೇದನ ಕ್ಲಿಯರ್ ಆಗಿದೆ. ಕೋರ್ಟ್ ವಿಚ್ಛೇದನಕ್ಕೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದ್ದರೆ. ಈ ಮಾಹಿತಿ ಕೇಳುತ್ತಿದ್ದಂತೆ ಮನಿಕ್ ಆಲಿ ಖುಷಿ ಡಬಲ್ ಆಗಿದೆ. ಏನು ಮಾಡಬೇಕು ಅನ್ನೋದೆ ತೋಚದಾಗಿದೆ. ನಾನಿನ್ನು ಫ್ರೀ ಎಂದು ಕುಣಿದಾಡಿದ್ದಾನೆ. ಇದೇ ಖುಷಿಯಲ್ಲಿ 40 ಲೀಟರ್ ಹಾಲು ತಂದು ಸ್ನಾನ ಮಾಡಿದ್ದಾನೆ.

 



Source link

Leave a Reply

Your email address will not be published. Required fields are marked *