Headlines

Hamas: ಅಕ್ಕಪಕ್ಕದ ದೇಶಗಳ ಮೇಲೆ ದಾಳಿ ಮಾಡಬೇಡಿ; ಇರಾನ್‌ಗೆ ಹಮಾಸ್‌ ಮನವಿ | Hamas statement on Iran | Hamas Urges Iran To Spare Neighboring Countries In Middle East Conflict

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಹಮಾಸ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ. ಅಮೆರಿಕ-ಇಸ್ರೇಲ್ ದಾಳಿಗೆ ಪ್ರತಿಯಾಗಿ ದಾಳಿ ಮಾಡುವ ಹಕ್ಕು ಇರಾನ್‌ಗೆ ಇದೆ, ಆದರೆ ಅಕ್ಕಪಕ್ಕದ ದೇಶಗಳನ್ನು ಟಾರ್ಗೆಟ್ ಮಾಡಬಾರದು ಎಂದು ಹಮಾಸ್ ಮನವಿ ಮಾಡಿದೆ. ಈ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ಎಲ್ಲ ದೇಶಗಳಿಗೂ ಮನವಿ 

ಕೈರೋ: ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಹಮಾಸ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ದಾಳಿಗಳಿಗೆ ಪ್ರತ್ಯುತ್ತರ ನೀಡುವ ಹಕ್ಕು ಇರಾನ್‌ಗೆ ಇದೆ. ಆದರೆ, ನಮ್ಮ ನೆರೆಯ ದೇಶಗಳ ಮೇಲೆ ದಾಳಿ ಮಾಡಬಾರದು ಎಂದು ‘ಇರಾನ್‌ನಲ್ಲಿರುವ ನಮ್ಮ ಸಹೋದರರಿಗೆ’ ನಾವು ಮನವಿ ಮಾಡುತ್ತೇವೆ ಎಂದು ಹಮಾಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ಯಾಲೆಸ್ತೀನ್ ವಿಷಯದಲ್ಲಿ ಇರಾನ್ ಯಾವಾಗಲೂ ಹಮಾಸ್ ಅನ್ನು ಬೆಂಬಲಿಸುತ್ತಾ ಬಂದಿದೆ. ಈ ಯುದ್ಧದ ಸಮಯದಲ್ಲಿ ಹಮಾಸ್, ಇರಾನ್‌ ಜೊತೆ ಒಗ್ಗಟ್ಟು ಪ್ರದರ್ಶಿಸಿತ್ತು. ಈಗ ಇದೇ ಮೊದಲ ಬಾರಿಗೆ ಈ ವಿಷಯದಲ್ಲಿ ಬಹಿರಂಗ ಹೇಳಿಕೆ ನೀಡಿದೆ. ಅಂತರಾಷ್ಟ್ರೀಯ ನಿಯಮಗಳು ಮತ್ತು ಕಾನೂನುಗಳ ಪ್ರಕಾರ ಲಭ್ಯವಿರುವ ಎಲ್ಲಾ ಮಾರ್ಗಗಳ ಮೂಲಕ ದಾಳಿಗೆ ಪ್ರತಿಕ್ರಿಯಿಸುವ ಇರಾನ್‌ನ ಹಕ್ಕನ್ನು ನಾವು ಗೌರವಿಸುತ್ತೇವೆ ಎಂದು ಹಮಾಸ್ ಹೇಳಿದೆ. ಜೊತೆಗೆ, ಈ ವಲಯದ ಎಲ್ಲಾ ದೇಶಗಳು ಮತ್ತು ಅಂತರಾಷ್ಟ್ರೀಯ ಸಂಘಟನೆಗಳು ಈ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು ಅಂತಾನೂ ಹಮಾಸ್ ಕರೆ ನೀಡಿದೆ.

ಯುದ್ಧದ ಆರಂಭದಲ್ಲಿ, ಇರಾನ್‌ನ ಉನ್ನತ ನಾಯಕರೊಬ್ಬರ ಹತ್ಯೆಗೆ ಪ್ರತೀಕಾರವಾಗಿ, ಲೆಬನಾನ್‌ನಲ್ಲಿರುವ ಇರಾನ್‌ನ ಮಿತ್ರಪಕ್ಷವಾದ ಹಿಜ್ಬೊಲ್ಲಾ, ಮಾರ್ಚ್ 2 ರಂದು ಇಸ್ರೇಲ್ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇದರ ನಂತರ, ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮಾಡಿ ಹಿಜ್ಬೊಲ್ಲಾವನ್ನು ಟಾರ್ಗೆಟ್ ಮಾಡಿತ್ತು. ಯೆಮನ್‌ನಲ್ಲಿರುವ ಇರಾನ್ ಪರ ಹೌತಿ ಬಂಡುಕೋರರು ಕೂಡ ಟೆಹ್ರಾನ್‌ಗೆ (ಇರಾನ್ ರಾಜಧಾನಿ) ತಮ್ಮ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

Source link

Leave a Reply

Your email address will not be published. Required fields are marked *