
<p>ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೈ ವೋಲ್ಟೇಜ್ ಸಿನಿಮಾ ದಿ ಡೆವಿಲ್ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದು, ದಿನೇ ದಿನೇ ಈ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗ್ತಿದೆ. ಹೀಗಿರುವಾಗ ದರ್ಶನ್ ಅವರ ಸೋಶಿಯಲ್ ಮೀಡಿಯಾದಿಂದ ಕುತೂಹಲ ಕೆರಳಿಸುವ ಪೋಸ್ಟ್ ಒಂದು ವೈರಲ್ ಆಗಿದೆ. ಪ್ರಸ್ತುತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರ ಎಕ್ಸ್ ಖಾತೆಯಿಂದ ಕಾಯುವಿಕೆ ಬಹುತೇಕ ಅಂತ್ಯವಾಗಿದೆ. ನಾಳೆ ಬೆಳಗ್ಗೆ 10:05ಕ್ಕೆ ಟ್ರೈಲರ್ ಅನೌನ್ಸ್ಮೆಂಟ್ ಎಂಬ ಪೋಸ್ಟೊಂದು ವೈರಲ್ ಆಗಿದೆ. ಒಂದು ಗಂಟೆ ಹಿಂದಷ್ಟೇ ಮಾಡಿದ ಈ ಪೋಸ್ಟ್ನ್ನು ಈಗಾಗಲೇ 78 ಸಾವಿರ ಜನ ವೀಕ್ಷಿಸಿದ್ದಾರೆ.</p><p>ಆದರೆ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವುದರಿಂದ ಅವರ ಖಾತೆಯಿಂದ ಆಗಿರುವ ಪೋಸ್ಟ್ ಬಗ್ಗೆ ಈಗ ಭಾರಿ ಕುತೂಹಲ ಮೂಡಿದೆ. ಅನೇಕರು ದರ್ಶನ್ ಜೈಲಿನಿಂದ ಟ್ವಿಟ್ ಮಾಡಿದ್ರಾ ಅಂತ ಕಾಮೆಂಟ್ ಹಾಕ್ತಿದ್ದಾರೆ. ಇನ್ನೂ ಕೆಲವರು ಟ್ರೈಲರ್ ಲಾಂಚ್ ಎಲ್ಲಿಂದ ಜೈಲಿನಿಂದ ನಾ ಎಂದು ಪ್ರಶ್ನೆ ಮಾಡಿದ್ದಾರೆ.</p><p>ದರ್ಶನ್ ತಮ್ಮ ಸೂಪರ್ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ. ಹೀಗಿರುವಾಗ ದರ್ಶನ್ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.</p>
Source link
ಕಾಯುವಿಕೆ ಮುಗಿತ್ತು: ಡೆವಿಲ್ ಸಿನಿಮಾ ಬಗ್ಗೆ ಜೈಲಿನಿಂದಲೇ ಟ್ವಿಟ್ ಮಾಡಿದ್ರಾ ದರ್ಶನ್?