Headlines

RCB vs CSK match tickets: 60 ಸೆಕೆಂಡ್‌ನಲ್ಲೇ ಆರ್‌ಸಿಬಿ-ಚೆನ್ನೈ ಟಿಕೆಟ್‌ ಖಾಲಿ! | IPL 2026 | Ipl 2026 Sold Out In 60 Seconds Massive Demand For Rcb Vs Csk Tickets At Chinnaswamy Rav

ಏಪ್ರಿಲ್ 5 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಆರ್‌ಸಿಬಿ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಐಪಿಎಲ್ ಪಂದ್ಯದ ಟಿಕೆಟ್‌ಗಳು ಕೇವಲ ಒಂದು ನಿಮಿಷದಲ್ಲಿ ಸೋಲ್ಡ್‌ಔಟ್‌ ಆಗಿವೆ. ಆರ್‌ಸಿಬಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾರಾಟ ನಡೆಸಿತ್ತು.

ಬೆಂಗಳೂರು (ಏ.2): ಐಪಿಎಲ್‌ನಲ್ಲಿ ಬಹುನಿರೀಕ್ಷಿತ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ಟಿಕೆಟ್‌ ಕೇವಲ ಒಂದೇ ನಿಮಿಷದಲ್ಲಿ ಸೋಲ್ಡ್‌ಔಟ್‌ ಆಗಿದೆ. ಏ.5ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್‌ ಮಾರಾಟವನ್ನು ಬುಧವಾರ, ಆರ್‌ಸಿಬಿ ತನ್ನ ಅಧಿಕೃತ ವೆಬ್‌ಸೈಟ್‌ ಹಾಗೂ ಆ್ಯಪ್‌ನಲ್ಲಿ ನಡೆಸಿತು.

ಟಿಕೆಟ್‌ಗಾಗಿ ಭಾರೀ ಪೈಪೋಟಿ ಕಂಡುಬಂತು. ಮೊದಲ ಪಂದ್ಯದಂತೆಯೇ ಈ ಪಂದ್ಯದ ಟಿಕೆಟ್‌ ಖರೀದಿ ವೇಳೆಯೂ ಅನೇಕರು ಸಮಸ್ಯೆ ಎದುರಿಸಿದರು. ಆದರೂ ಕೇವಲ ಒಂದೇ ನಿಮಿಷದಲ್ಲಿ ಟಿಕೆಟ್‌ಗಳು ಖಾಲಿಯಾದವು. ಸಾರ್ವಜನಿಕರಿಗೆ ಎಷ್ಟು ಟಿಕೆಟ್‌ಗಳನ್ನು ಲಭ್ಯ ಇರಿಸಲಾಗಿತ್ತು ಎನ್ನುವ ಮಾಹಿತಿಯನ್ನು ಆರ್‌ಸಿಬಿ ಹಂಚಿಕೊಂಡಿಲ್ಲ.

ಟಿಕೆಟ್‌ನ ಆರಂಭಿಕ ಬೆಲೆ ₹3750 ಇತ್ತು. ಗರಿಷ್ಠ ಬೆಲೆ ₹47000. ಆದರೆ ಕೆಲವೇ ಸ್ಟ್ಯಾಂಡ್‌ಗಳ ಟಿಕೆಟ್‌ಗಳನ್ನಷ್ಟೇ ಆರ್‌ಸಿಬಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿತು.

Source link

Leave a Reply

Your email address will not be published. Required fields are marked *