Headlines

Rashmika Mandanna ವಿವಾದಾತ್ಮಕ ಟೀಕೆಗಳಿಗೆ ತಿರುಗೇಟು ನೀಡಿದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ | Rashmika Mandanna Unveils Cocktail 2 Release Date After Threatening Legal Action Over Privacy

Rashmika Mandanna ವಿವಾದಾತ್ಮಕ ಟೀಕೆಗಳಿಗೆ ತಿರುಗೇಟು ನೀಡಿದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ | Rashmika Mandanna Unveils Cocktail 2 Release Date After Threatening Legal Action Over Privacy



Rashmika Mandanna ವಿವಾದಾತ್ಮಕ ಟೀಕೆಗಳಿಗೆ ತಿರುಗೇಟು ನೀಡಿದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ | Rashmika Mandanna Unveils Cocktail 2 Release Date After Threatening Legal Action Over Privacy

ವಿವಾದಾತ್ಮಕ ಟೀಕೆಗಳಿಗೆ ತಿರುಗೇಟು ನೀಡಿದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ, ವೈಯುಕ್ತಿಕ ಬದುಕಿನ ಕುರಿತ ಟೀಕೆಗಳಿಂದ ಮೊದಲ ಬಾರಿ ಗರಂ ಆದ ರಶ್ಮಿಕಾ ಮಂದಣ್ಣ ಇದೀಗ ಅಭಿಮಾನಿಗಳಿಗೆ ಖುಷಿ ವಿಚಾರ ಹಂಚಿಕೊಂಡಿದ್ದಾರೆ.

ಮುಂಬೈ (ಮಾ.13) ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಎಲ್ಲಾ ಭಾಷೆಯಲ್ಲೂ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ವೈಯುಕ್ತಿಕ ಜೀವನದ ಕುರಿತು ಟೀಕೆ ಟಿಪ್ಪಿಗಳು ತೀವ್ರಗೊಂಡಿತ್ತು. ಇದರ ನಡುವೆ ಕೆಲ ಆಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ರಶ್ಮಿಕಾ ಮಂದಣ್ಣ ಹಾಗೂ ಕುಟುಂಬಸ್ಥರನ್ನೇ ಟಾರ್ಗೆಟ್ ಮಾಡಲಾಗಿತ್ತು. ಇದರಿಂದ ಕೆರಳಿದ್ದ ರಶ್ಮಿಕಾ ಮಂದಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದರು.ಜೊತೆಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಈ ಉತ್ತರ ಬೆನ್ನಲ್ಲೇ ಇದೀಗ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗಪಡಿಸಿದ್ದಾರೆ.

ರಶ್ಮಿಕಾ ಅಭಿನಯದ ಸಿನಿಮಾ ಕುತೂಹಲ

ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್, ಕೃತಿ ಸನೋನ್ ಅಭಿನಯದ ಬಾಲಿವುಡ್ ಸಿನಿಮಾ ಕಾಕ್‌ಟೇಲ್ 2 ಸಿನಿಮಾ ಬಿಡುಗಡೆ ದಿನಾಂಕವನ್ನು ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿದ್ದಾರೆ. ಜೂನ್ 19, 2026ರಂದು ಕಾಕ್‌‌ಟೇಲ್ 2 ಸಿನಿಮಾ ಬಿಡುಗಡೆಯಾಗಲಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ರಶ್ಮಿಕಾ ಮಂದಣ್ಣ ಕಾಕ್‌ಟೇಲ್ 2 ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಫಸ್ಟ್‌ಲುಕ್ ರಿಲೀಸ್ ದಿನಾಂಕವೂ ಬಹಿರಂಗ

ರಶ್ಮಿಕಾ ಮಂದಣ್ಣ ಕಾಕ್‌ಟೇಲ್ 2 ಸಿನಿಮಾ ಬಿಡುಗಡೆ ದಿನಾಂಕ ಮಾತ್ರವಲ್ಲ, ಸಿನಿಮಾದ ಫಸ್ಟ್‌ಲುಕ್ ರಿಲೀಸ್ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ. ಮಾರ್ಚ್ 18 ರಂದು ಕಾಕ್‌ಟೇಲ್ 2 ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದ್ದಾರೆ ಎಂದಿದ್ದಾರೆ. ಇದೀಗ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಕಾಕ್‌ಟೇಲ್ 2 ಸಿನಿಮಾಗೆ ಶುಭಕೋರಿದ್ದಾರೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ಬಾಲಿವುಡ್ ದಿಗ್ಗಜ ತಾರಾಗಣವೇ ಇದೆ. ಶಾಹಿದ್ ಕಪೂರ್, ಕೃತಿ ಸನೋಸ್ ಸೇರಿದಂತೆ ಪ್ರಮುಖ ನಟ ನಟಿಯರು ಈ ಸಿನಿಮಾದಲ್ಲಿದ್ದಾರೆ. ಆದರೆ ಅಭಿಮಾನಿಗಳು ಕ್ರೇಜ್ ರಶ್ಮಿಕಾ ಮಂದಣ್ಣ ಮೇಲಿದೆ. ಇದೇ ಕಾರಣದಿಂದ ಸಿನಿಮಾ ತಂಡ ಕೂಡ ಕಾಕ್‌ಟೇಲ್ 2 ಸಿನಿಮಾ ಪ್ರಮೋಶನ್‌ನಲ್ಲಿ ಹೆಚ್ಚಾಗಿ ರಶ್ಮಿಕಾ ಮಂದಣ್ಣ ಅವರನ್ನೇ ಬಳಸಿಕೊಳ್ಳುತ್ತಿದೆ.

ಮೊದಲ ಕಾಕ್‌ಟೇಲ್ ಸಿನಿಮಾದಲ್ಲಿ ಸೈಫ್ ಆಲಿ ಖಾನ್, ದೀಪಿಕಾ ಪಡುಕೋಣೆ, ಡಯಾನಾ ಪೆಂಟಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಾಕ್‌ಟೇಲ್ 2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ರೆಸೆಪ್ಶನ್‌ನಲ್ಲಿ ಕಾಕ್‌ಟೇಲ್ 2 ಸಿನಿಮಾ ತಂಡ ಪಾಲ್ಗೊಂಡಿತ್ತು. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಈ ಆರತಕ್ಷತೆ ನಡೆದಿತ್ತು.



Source link

Leave a Reply

Your email address will not be published. Required fields are marked *