Headlines

ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ ಮೇಘಾ ಶೆಟ್ಟಿ; ಗ್ರಾಮಾಯಣದಲ್ಲಿ ಭಾರೀ ‘ರಾಮಾಯಣ’ದ ಸೌಂಡ್! | Megha Shetty And Vinay Rajkumar Gramayana Movie Song Becomes Viral

ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ ಮೇಘಾ ಶೆಟ್ಟಿ; ಗ್ರಾಮಾಯಣದಲ್ಲಿ ಭಾರೀ ‘ರಾಮಾಯಣ’ದ ಸೌಂಡ್! | Megha Shetty And Vinay Rajkumar Gramayana Movie Song Becomes Viral


ಶಿವರಾಜ್ ಕುಮಾರ್-ಸುಧಾರಾಣಿಯಂತೆ ಈಗ ವಿನಯ್ ರಾಜ್​ ಕುಮಾರ್ ಮೇಘಾ ಶೆಟ್ಟಿ ಜಿಂಗಿ ಚಕ್ಕ ಜಿಂಗಿ ಚಕ್ಕ ಅಂತ ಹೊಸ ವರ್ಷನಲ್ಲಿ ಕುಣಿದು ಎಲ್ಲರನ್ನ ಕುಣಿಸುತ್ತಿದ್ದಾರೆ. ಈ ಹಾಡಿನ ಮೋಡಿ, ಮೇಘಾ ಶೆಟ್ಟಿ ಕುಣಿತದ ಪರಿ ಪಡ್ಡೆ ಹೈಕಗಳನ್ನ ಹುಚ್ಚೆಬ್ಬಿಸಿರೋದು ಸುಳ್ಳಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿ ಗಿಚ್ಚಿ ಗಿಲಿಗಿಲಿ..!

ಸ್ಯಾಂಡಲ್​ವುಡ್​ಬೆಡಗಿ ಮೇಘಾ ಶೆಟ್ಟಿ ಏಕಾಏಕಿ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. ಮೇಘಾ ಶೆಟ್ಟಿ ‘ಬೆಂಕಿಯಲ್ಲೂ ತಂಪು ಕಂಡೆನು’ ಅಂತ ಕುಣಿದಿದ್ದೇ ಕುಣಿದಿದ್ದು, ಪಡ್ಡೆ ಹೈಕಳು ಥಂಡಾ ಹೊಡೆದಿದ್ದಾರೆ. ಸದ್ಯ ಮೇಘಾ ಕುಣಿತ ಮೆಗಾಟ್ರೆಂಡ್ ಸೃಷ್ಟಿ ಮಾಡಿಬಿಟ್ಟಿದೆ.

ಹೌದುಮ ಈಗ ಸೋಷಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿಯ ಮೇಘ ಸ್ಟೋಟ ಆಗ್ತಾ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ಶೆಟ್ರು ಹುಡುಗಿ ಗಿಚ್ಚಿ ಗಿಲಿಗಿಲಿ ಎಬ್ಬಿಸಿದ್ದಾರೆ. ಮೇಘಾ ಶೆಟ್ಟಿಯ ಹೊಸ ಅವತಾರಕ್ಕೆ ಪಡ್ಡೆ ಹುಡುಗರು ಬೆಂಕಿಯಲ್ಲಿ ತಂಪು ಕಾಣ್ತಾ ಇದ್ದಾರೆ.

ಗ್ರಾಮಾಯಣದಲ್ಲಿ ಮೇಘಾ ಶೆಟ್ಟಿಯ ರಾಮಾಯಣ, ಎಲ್ಲೆಲ್ಲೂ ಟ್ರೆಂಡ್ ಆಗ್ತಿದೆ ಶೆಟ್ರು ಹುಡುಗಿ ಮಸ್ತ್ ಡಾನ್ಸ್!

ಮೇಘಾ ಶೆಟ್ಟಿ ಈಗ ಟ್ರೆಂಡಿಂಗ್ ಆಗೋಕೆ ಕಾರಣ ಆಕೆ ಸೊಂಟ ಬಳುಕಿಸಿರೋ ಗ್ರಾಮಾಯಣ ಸಿನಿಮಾದ ಈ ಹಾಡು. ದೊಡ್ಮನೆಯ ಮೂರನೇ ತಲೆಮಾರಿನ ಹುಡುಗ ವಿನಯ್ ರಾಜ್​ ಕುಮಾರ್​ ನಾಯಕನಾಗಿ ನಟಿಸುತ್ತಿರೋ ಗ್ರಾಮಾಯಣ ಸಿನಿಮಾದಲ್ಲಿ ಮೇಘಾ ಶೆಟ್ಟಿಯ ರಾಮಾಯಣ ಇದೆ. ಹೀಗಾಗಿ ಈ ಸಿನಿಮಾದ ಹಾಡಿನಲ್ಲಿ ಮೇಘಾ ಶೆಟ್ಟಿ ಮಸ್ತ್​ ಡಾನ್ಸ್​ ಮಾಡಿದ್ದಾರೆ. ಈ ಹಾಡೇ ಈಗ ಎಲ್ಲಾ ಕಾರ್ಯಕ್ರಮಗಳಲ್ಲಿ ಹೈಲೆಟ್ ಆಗುತ್ತಿದೆ.

ಕನಕಪುರದ ಕನಕೋತ್ಸವದಿಂದ ಹಿಡಿದು, ಸ್ಕೂಲ್​​​ನ ಆನಿವಲ್ ಡೇ, ಜಾತ್ರೆ, ಮದ್ವೆ ಮನೆಯ ವರೆಗೂ ಮೇಘಾ ಶೆಟ್ಟಿ ಡಾನ್ಸ್ ಸದ್ದು ಮಾಡ್ತಾ ಇದೆ. ಮೇಘಾ ಸಡನ್ ಆಗಿ ವೈರಲ್ ಆಗ್ತಾ ಇದ್ದಾರೆ. ಶೆಟ್ರು ಹುಡ್ಗಿಯ ಜಗಮಗ ಕುಣಿತ ಜಗತ್ತನ್ನೇ ಗೆಲ್ಲುತ್ತಿದೆ..

ಮನ ಮೆಚ್ಚಿದ ಹುಡುಗಿ ಚಿತ್ರದ್ದು

ಅಂದಹಾಗೆ ಈ ಹಾಡು ಡಾಕ್ಟರ್ ಶಿವರಾಜ್ ಕುಮಾರ್ ಹಾಗು ಸುಧಾರಾಣಿ ನಟಿಸಿದ್ದ ಮನ ಮೆಚ್ಚಿದ ಹುಡುಗಿ ಚಿತ್ರದ್ದು. ಅಂದು ಶಿವಣ್ಣ ಹಾಗು ಸುಧಾರಾಣಿ ಈ ಹಾಡಿನಿಂದ ಜನ ಮನ ಗೆದ್ದಿದ್ರು. ಈಗ್ಲು ಈ ಹಾಡಿಗೆ ಅದೇ ಕ್ರೇಜ್ ಇದೆ.

ಶಿವರಾಜ್ ಕುಮಾರ್ ಸುಧಾರಾಣಿಯಂತೆ ಈಗ ವಿನಯ್ ರಾಜ್​ ಕುಮಾರ್ ಮೇಘಾ ಶೆಟ್ಟಿ ಜಿಂಗಿ ಚಕ್ಕ ಜಿಂಗಿ ಚಕ್ಕ ಅಂತ ಹೊಸ ವರ್ಷನಲ್ಲಿ ಕುಣಿದು ಎಲ್ಲರನ್ನ ಕುಣಿಸುತ್ತಿದ್ದಾರೆ. ಈ ಹಾಡಿನ ಮೋಡಿ, ಮೇಘಾ ಶೆಟ್ಟಿ ಕುಣಿತದ ಪರಿ ಪಡ್ಡೆ ಹೈಕಗಳನ್ನ ಹುಚ್ಚೆಬ್ಬಿಸಿರೋದು ಸುಳ್ಳಲ್ಲ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..



Source link

Leave a Reply

Your email address will not be published. Required fields are marked *