Headlines

Namm metro ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕದೋಷ, ರೈಲು ಇಲ್ಲದೆ ಪ್ರಯಾಣಿಕರ ಪರದಾಟ | Bengaluru Namma Metro Yellow Line Faces Technical Glitch Stranding Commuters

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕದೋಷ, ರೈಲು ಇಲ್ಲದೆ ಪ್ರಯಾಣಿಕರ ಪರದಾಟ, ಸಂಜೆ 7 ಗಂಟೆಯಿಂದ ಸಮಸ್ಯೆ ಎದುರಾಗಿದೆ. ಬಿಎಂಆರ್‌ಸಿಎಲ್ ಸಮಸ್ಯೆ ಖಚಿತಪಡಿಸಿದ್ದು, ಪ್ರಯಾಣಿಕರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದೆ.

ಬೆಂಗಳೂರು (ಸೆ.22) ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ರೈಲುಗಳ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತೀಚೆಗೆ ಉದ್ಘಾಟನೆ ಆಗಿದ್ದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಹಳದಿ ಮೆಟ್ರೋ ಸಂಪರ್ಕ ಮಾರ್ಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆರ್‌ವಿ ರಸ್ತೆ ನಿಲ್ದಾಣದಲ್ಲೇ ಸಮಸ್ಯೆ ಕಂಡು ಬಂದಿದೆ. ಕಳೆದ 40 ನಿಮಿಷಗಳಿಂದ ಮೆಟ್ರೋ ಸೇವೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಸಮಸ್ಯೆಕುರಿತು ಬಿಎಂಆರ್‌ಸಿಎಲ್ ಖಚಿತಪಡಿಸಿದೆ.

ಸಮಸ್ಯೆ ಖಚಿತಪಡಿಸಲು ಅಧಿಕಾರಿಗಳಿಂದ ವಿಳಂಬ, ಪ್ರಯಾಣಿಕರ ಆಕ್ರೋಶ

ಹಳದಿ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದರೂ, ಅಧಿಕಾರಿಗಳು ಯಾವುದೇ ಸೂಚನೆ ನೀಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಜೆ 7 ಗಂಟೆಯಿಂದ ನಿಗದಿತ ವೇಳಾಪಟ್ಟಿಯಂತೆ ರೈಲು ಸಂಚರಿಸಿಲ್ಲ. ಇದರ ಪರಿಣಾಮ ಪ್ರಯಾಣಿಕರು ಕೆಲ ಗಂಟೆಗಳಿಂದ ನಿಲ್ದಾಣಗಳಲ್ಲಿ ಕಾಯುವಂತಾಗಿದೆ. ಪ್ರಯಾಣಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬಿಎಂಆರ್‌ಸಿಎಲ್ ಹಳದಿ ಮೆಟ್ರೋದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.

ಯಾವಾಗ ಸಮಸ್ಯೆ ಬಗೆ ಹರಿಯುತ್ತೆ?

ರಾತ್ರಿ 9 ಗಂಟೆ ವೇಳೆ ಸಮಸ್ಯೆ ಬಗೆಹರಿಯಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಪ್ರಯಾಣಿಕರು ಸಹಕರಿಸಬೇಕು, ಅನಾನೂಕೂಲತೆಗೆ ವಿಷಾಧಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

Source link

Leave a Reply

Your email address will not be published. Required fields are marked *