Headlines

ವೆಡ್ಡಿಂಗ್ ಆ್ಯನಿವರ್ಸರಿಗೆ ಎರಡು ಪದದಲ್ಲಿ ಶುಭಕೋರಿದ ಜಸ್ಪ್ರೀತ್ ಬುಮ್ರಾ! ಕಿಡ್ನಿಗೆ ಟಚ್ ಆಯ್ತು ಎಂದ ಸಂಜನಾ! | Sanjana Ganesan Trolls Jasprit Bumrah Two Word Anniversary Wish Kvn

ವೆಡ್ಡಿಂಗ್ ಆ್ಯನಿವರ್ಸರಿಗೆ ಎರಡು ಪದದಲ್ಲಿ ಶುಭಕೋರಿದ ಜಸ್ಪ್ರೀತ್ ಬುಮ್ರಾ! ಕಿಡ್ನಿಗೆ ಟಚ್ ಆಯ್ತು ಎಂದ ಸಂಜನಾ! | Sanjana Ganesan Trolls Jasprit Bumrah Two Word Anniversary Wish Kvn


ಟೀಂ ಇಂಡಿಯಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿ ಸಂಜನಾ ಗಣೇಶನ್‌ಗೆ ಎರಡು ಪದಗಳಲ್ಲಿ ಶುಭಕೋರಿದ್ದಾರೆ. ಇದಕ್ಕೆ ಸಂಜನಾ ಗಣೇಶನ್ ‘ಕಿಡ್ನಿ ಟಚ್ಚಿಂಗ್ ಕ್ಯಾಪ್ಷನ್’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ನಂತರ ಭಾವನಾತ್ಮಕ ಪತ್ರವನ್ನೂ ಬರೆದಿದ್ದಾರೆ.

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ತಮ್ಮ ಜತೆಗಾರ್ತಿ ಸಂಜನಾ ಗಣೇಶನ್ ಅವರ ಜತೆ ಭಾನುವಾರ ಐದನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ವೇಳೆ ಮಾರಕ ವೇಗಿ ಬುಮ್ರಾ, ತಮ್ಮ ಪತ್ನಿಗಾಗಿ ಎರಡು ಪದಗಳಲ್ಲಿ ಶುಭಕೋರಿದ್ದನ್ನು ಸಂಜನಾ ಗಣೇಶನ್ ಟ್ರೋಲ್ ಮಾಡಿದ್ದಾರೆ.

ಎರಡು ಪದಗಳಲ್ಲಿ ವಿಶ್ ಮಾಡಿದ ಬುಮ್ರಾ

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಜಸ್ಪ್ರೀತ್ ಬುಮ್ರಾ, ತಮ್ಮ ಪತ್ನಿಯ ಫೋಟೋ ಜತೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು (Happy anniversary) ಎಂದು ವಿಶ್ ಮಾಡಿದ್ದರು. ಬುಮ್ರಾ ಹಾರೈಕೆಗೆ ಪ್ರತಿಕ್ರಿಯಿಸಿರುವ ಸಂಜನಾ ಗಣೇಶನ್, ‘ಕಿಡ್ನಿ ಟಚ್ಚಿಂಗ್ ಕ್ಯಾಪ್ಷನ್ ಯಾರ್’ ಎಂದು ರಿಪ್ಲೆ ಮಾಡಿದ್ದಾರೆ.

ಪತಿ ಬುಮ್ರಾಗೆ ಭಾವನಾತ್ಮಕ ಪತ್ರ ಬರೆದ ಸಂಜನಾ, ‘ಜೀವನವು ನಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯಲಿ, ಜಗತ್ತು ಎಷ್ಟೇ ಗದ್ದಲ ಎಬ್ಬಿಸಿದರೂ, ಯಾವಾಗಲೂ ನೀವು, ನಾನು ಮತ್ತು ಮನೆಯಂತೆ ಭಾಸವಾಗುವ ಅಪ್ಪುಗೆ ಇದು ಇರುತ್ತದೆ. ನನ್ನ ಆತ್ಮೀಯ ಸ್ನೇಹಿತನೊಂದಿಗೆ ಐದು ವರ್ಷಗಳ ಮದುವೆ. ನನ್ನ ನೆಚ್ಚಿನ ಕಥೆ, ಯಾವಾಗಲೂ ಮತ್ತು ಶಾಶ್ವತವಾಗಿಯೂ ಇರುತ್ತದೆ.’ ಎಂದು ಬರೆದುಕೊಂಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ರೂವಾರಿ ಬುಮ್ರಾ

ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಜಸ್ಪ್ರೀತ್ ಬುಮ್ರಾ, ನ್ಯೂಜಿಲೆಂಡ್ ಎದುರು 4 ಓವರ್‌ ಬೌಲಿಂಗ್ ಮಾಡಿ ಕೇವಲ 15 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಷ್ಟೇ ಅಲ್ಲದೇ ಫೈನಲ್‌ನಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ಜಸ್ಪ್ರೀತ್ ಬುಮ್ರಾ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜಸ್ಪ್ರೀತ್ ಬುಮ್ರಾ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ 14 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ವರುಣ್ ಚಕ್ರವರ್ತಿ ಜತೆ ಜಂಟಿ ಅಗ್ರಸ್ಥಾನ ಪಡೆದುಕೊಂಡಿದ್ದರು.



Source link

Leave a Reply

Your email address will not be published. Required fields are marked *