Mohanlal: ನಾನು ಡೈರೆಕ್ಟರ್ ಹೇಳಿದಂತೆ ಕೇಳೋ ನಟ, ಸೆಟ್‌ನಲ್ಲಿ ಜಗಳಕ್ಕಿಳಿಯಲ್ಲ: ಮೋಹನ್‌ಲಾಲ್

Mohanlal: ನಾನು ಡೈರೆಕ್ಟರ್ ಹೇಳಿದಂತೆ ಕೇಳೋ ನಟ, ಸೆಟ್‌ನಲ್ಲಿ ಜಗಳಕ್ಕಿಳಿಯಲ್ಲ: ಮೋಹನ್‌ಲಾಲ್



Mohanlal: ನಾನು ಡೈರೆಕ್ಟರ್ ಹೇಳಿದಂತೆ ಕೇಳೋ ನಟ, ಸೆಟ್‌ನಲ್ಲಿ ಜಗಳಕ್ಕಿಳಿಯಲ್ಲ: ಮೋಹನ್‌ಲಾಲ್
<p>ನಾನೊಬ್ಬ ‘ಡೈರೆಕ್ಟರ್, ಆ್ಯಕ್ಟರ್’ ಅಂತ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಹೇಳಿಕೊಂಡಿದ್ದಾರೆ. ‘ಮೈ ಗವರ್ನಮೆಂಟ್ ಪಾಡ್‌ಕಾಸ್ಟ್’ನಲ್ಲಿ ಮಾತನಾಡಿದ ಅವರು, ತಾನು ನಿರ್ದೇಶಕರನ್ನು ವಿರೋಧಿಸುವುದಿಲ್ಲ ಅಥವಾ ಅವರೊಂದಿಗೆ ಜಗಳವಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ನಾನು ನಿರ್ದೇಶಕರ ನಟ. ಅವರೊಂದಿಗೆ ಜಗಳ ಅಥವಾ ವಾದ ಮಾಡುವುದಿಲ್ಲ. ಏನೇ ಭಿನ್ನಾಭಿಪ್ರಾಯಗಳಿದ್ದರೂ, ಅದನ್ನು ಸ್ಕ್ರಿಪ್ಟ್ ಹಂತದಲ್ಲೇ ಚರ್ಚೆ ಮಾಡಬೇಕು. ಸಿನಿಮಾ ಶುರುವಾದ ಮೇಲೆ ಕೆಲವು ಬದಲಾವಣೆಗಳು ಆಗಬಹುದು. ಆಗ ನಿರ್ದೇಶಕರ ಬಳಿ ಅದರ ಬಗ್ಗೆ ಕೇಳಬಹುದು. ಕೆಲವೊಮ್ಮೆ ಅವರಿಗೆ ಅದಕ್ಕೆ ವಿವರಣೆ ನೀಡಲು ಸಾಧ್ಯವಾಗದೇ ಇರಬಹುದು. ಆದರೂ ನಾವು ಅವರ ಜೊತೆನೇ ಮುಂದೆ ಸಾಗಬೇಕು’ ಎಂದು ಮೋಹನ್‌ಲಾಲ್ ವಿವರಿಸಿದ್ದಾರೆ.</p><p>ಸದ್ಯ ಮೋಹನ್‌ಲಾಲ್ ಮತ್ತು ಜೀತು ಜೋಸೆಫ್ ಕಾಂಬಿನೇಷನ್‌ನ ‘ದೃಶ್ಯಂ 3’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಏಪ್ರಿಲ್ 2ರಂದು ಥಿಯೇಟರ್‌ಗಳಿಗೆ ಬರಲಿದೆ. ಇದಲ್ಲದೆ, ಮಹೇಶ್ ನಾರಾಯಣನ್ ನಿರ್ದೇಶನದಲ್ಲಿ ಮಮ್ಮುಟ್ಟಿ ನಾಯಕರಾಗಿ ನಟಿಸುತ್ತಿರುವ ‘ಪೇಟ್ರಿಯಾಟ್’ ಚಿತ್ರದಲ್ಲಿ ಮೋಹನ್‌ಲಾಲ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ವಿಶೇಷ ಅಂದ್ರೆ, ಬರೋಬ್ಬರಿ 19 ವರ್ಷಗಳ ನಂತರ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಈ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಏಪ್ರಿಲ್ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಕುಂಚಾಕ್ಕೊ ಬೋಬನ್, ನಯನತಾರಾ, ರೇವತಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಸುಶಿನ್ ಶ್ಯಾಮ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.</p><p>’ತುಡರುಂ’ ಚಿತ್ರದ ನಂತರ ತರುಣ್ ಮೂರ್ತಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ L366 ಚಿತ್ರದ ಶೂಟಿಂಗ್ ಸದ್ಯ ಪ್ರಗತಿಯಲ್ಲಿದೆ. ಈ ವರ್ಷದ ಮಧ್ಯಭಾಗದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಇನ್ನೊಂದು ವಿಶೇಷವೆಂದರೆ, 13 ವರ್ಷಗಳ ಬಳಿಕ ಈ ಚಿತ್ರದಲ್ಲಿ ಮೀರಾ ಜಾಸ್ಮಿನ್ ಅವರು ಮೋಹನ್‌ಲಾಲ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.</p>



Source link

Leave a Reply

Your email address will not be published. Required fields are marked *