Headlines

ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ | Student Asking Valuator To Pass Him In Exam And Save His Love Suc

ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ | Student Asking Valuator To Pass Him In Exam And Save His Love Suc



ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ | Student Asking Valuator To Pass Him In Exam And Save His Love Suc

ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವುದಾಗಿ ಗೆಳತಿ ಹೇಳಿದ್ದಾಳೆಂಬ ಕಾರಣಕ್ಕೆ, ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾನೆ. 500 ರೂಪಾಯಿ ನೋಟು ಇಟ್ಟು ಬರೆದ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪರೀಕ್ಷೆ ಮತ್ತು ದೇವರ ಮುಂದೆ ಬರುವ ಬೇಡಿಕೆಗಳು ಕೆಲವೊಮ್ಮೆ ಸಕತ್​ ಮಜಾಕೊಡುವಂತಿರುತ್ತದೆ. ತಮ್ಮ ಮನದ ಆಸೆಗಳನ್ನು ದೇವರ ಮುಂದೆ ಭಕ್ತಾದಿಗಳು ಇಡುವುದು ಮಾಮೂಲು. ಆದರೆ ಅತ್ತೆಗೆ ಹುಷಾರಿಲ್ಲದಂತೆ ಮಾಡು, ಮನೆಯವರಿಗೆ ಬುದ್ಧಿ ಬರುವಂತೆ ಮಾಡು, ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡು, ನನ್ನ ಲವರ್​ ನನ್ನನ್ನು ಒಪ್ಪಿಕೊಳ್ಳುವಂತೆ ಮಾಡು… ಹೀಗೆ ಏನೇನೋ ಕೋರಿಕೆಗಳನ್ನು ಬರೆದು ದೇವರ ಹುಂಡಿಯಲ್ಲಿ ಹಾಕುವುದು ಒಂದೆಡೆಯಾದರೆ ಪರೀಕ್ಷೆಯ ಪತ್ರಿಕೆಗಳಲ್ಲಿ, ತಮ್ಮನ್ನು ಪಾಸ್​ ಮಾಡುವಂತೆ ವಿಧವಿಧವಾಗಿ ವಿದ್ಯಾರ್ಥಿಗಳು ಬೇಡಿಕೊಳ್ಳುವುದು ಇದೆ.

ಲೆಟರ್​ ವೈರಲ್​

ಅದೇ ರೀತಿಯ ಉತ್ತರ ಪತ್ರಿಕೆಯೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದರಲ್ಲಿ ಪ್ರೇಮಿಯೊಬ್ಬ ಉತ್ತರ ಪತ್ರಿಕೆಯನ್ನು ಕರೆಕ್ಷನ್​ ಮಾಡುವ ಶಿಕ್ಷಕರಿಗೆ ಬರೆದಿದ್ದಾನೆ. ಇದರಲ್ಲಿ ಆತ ತನ್ನನ್ನು ಪಾಸ್​​ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಆತ ಕೊಟ್ಟಿರುವ ಕಾರಣ ಮಾತ್ರ ಸಕತ್​ ತಮಾಷೆಯಾಗಿದ್ದು, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರಿಗೆ ನಗು ತರಿಸುವಂತಿದೆ.

ಕಾಲ ಬೀಳ್ತೀನಿ ಸರ

ಅದರಲ್ಲಿ ಈ ಪ್ರೇಮಿ, ಸರ್​ ರೀ, ಮೇಡಂ ರೀ. ನಿಮ್ಮ ಕಾಲ ಬೀಳ್ತೀನಿ. ನನ್ನ ಲವ್​ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್​ದಾಗ ಪಾಸ ಆದ್ರ ಅಕಿ ಲವ್ ಮಾಡ್ತೇನೆ ಅಂದಾಳ ರೀ. ನನ್ನ ಹುಡುಗಿ, ಈ 500 ರೂಪಾಯಿ ಇಟ್ಕೊಂಡ್​ ಚಾ ಕುಡೀರಿ ಸರ್​ ರೀ ನನ್ನ ಪಾಸ್​ ಮಾಡಿರಿ ಎಂದು ಇದರಲ್ಲಿ ಆ ವಿದ್ಯಾರ್ಥಿ ಬರೆದಿದ್ದಾನೆ. ಅವನ ಹುಡುಗಿ ಪರೀಕ್ಷೆಯಲ್ಲಿ ಪಾಸ್​ ಆದ್ರೆ ಮಾತ್ರ ಲವ್​ ಮಾಡುತ್ತೇನೆ ಎಂದಿದ್ದಾಳಂತೆ. ಅದಕ್ಕಾಗಿ ಉತ್ತರ ಪತ್ರಿಕೆಯಲ್ಲಿ 500 ರೂಪಾಯಿ ಇಟ್ಟಿರೋ ಈ ಆಸಾಮಿ, ಇದನ್ನು ತೆಗೆದುಕೊಂಡು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡೋರಿಗೆ ಚಹ ಕುಡಿಯಲು ಹೇಳಿದ್ದು, ಪರೀಕ್ಷೆ ಪಾಸ್​ ಮಾಡುವಂತೆ ಕೋರಿಕೊಂಡಿದ್ದಾನೆ.

ಕಮೆಂಟ್ಸ್​ ಸುರಿಮಳೆ

ಇದರ ಫೋಟೋ ವೈರಲ್​ ಆಗುತ್ತದೆ, ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ವಿದ್ಯಾರ್ಥಿಯ ಮನವಿಯನ್ನು ಪುರಸ್ಕರಿಸಿ ಎಂದು ಹಲವರು ಹೇಳುತ್ತಿದ್ದಾರೆ. ಅವನನ್ನು ಪಾಸ್​ ಮಾಡಿದ್ರೆ ಒಂದು ಜೀವ ಉಳಿಸಿದ ಪುಣ್ಯ ಬರುತ್ತದೆ, ಒಂದು ಪ್ರೇಮಿಗಳನ್ನು ಒಟ್ಟುಗೂಡಿಸಿದ ಪುಣ್ಯ ಬರುತ್ತದೆ ಎಂದೆಲ್ಲಾ ಕಮೆಂಟ್ಸ್​ ಹಾಕುತ್ತಿದ್ದಾರೆ. ​ vijayapur_le_dosta ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.



Source link

Leave a Reply

Your email address will not be published. Required fields are marked *