Headlines

Nepalಮಾಜಿ ಪ್ರಧಾನಿ ಪತ್ನಿಯನ್ನೇ ಜೀವಂತ ಸುಟ್ಟ ಪ್ರತಿಭಟನಕಾರರು; ವರದಿ | Ex Nepal Pm Wife Rajyalaxmi Chitrakar Burnt Alive After Protester Set Fire House

Nepalಮಾಜಿ ಪ್ರಧಾನಿ ಪತ್ನಿಯನ್ನೇ ಜೀವಂತ ಸುಟ್ಟ ಪ್ರತಿಭಟನಕಾರರು; ವರದಿ | Ex Nepal Pm Wife Rajyalaxmi Chitrakar Burnt Alive After Protester Set Fire House


ನೇಪಾಳದ ಪ್ರತಿಭಟನೆ ಹಾಗೂ ಹಿಂಸಾಚಾರ ಕೈಮೀರಿದೆ. ಪ್ರತಿಭಟನಕಾರರು ಸಿಕ್ಕ ಸಿಕ್ಕ ಕಡೆ ಬೆಂಕಿ ಹಚುತ್ತಿದ್ದಾರೆ. ನೇಪಾಳ ಮಾಜಿ ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಮಾಜಿ ಪ್ರಧಾನಿ ಪತ್ನಿ ಜೀವಂತ ದಹನವಾದ ದಾರುಣ ಘಟನೆ ನಡೆದಿದೆ.

ಕಾಠ್ಮಂಡು (ಸೆ.09) ನೇಪಾಳದ ಪರಿಸ್ಥಿತಿ ಗಂಭೀರವಾಗಿದೆ. ಸೋಶಿಯಲ್ ಮೀಡಿಯಾ ನಿಷೇಧ ವಿರೋಧಿಸಿ ಆರಂಭಗೊಂಡ ಜೆನ್‌ಜಿ ಸಮೂಹದ ಪ್ರತಿಭಟನೆ ಹಿಂಸಾಚಾರಕ್ಕೆ ನೇಪಾಳ ಹೊತ್ತಿ ಉರಿಯುತ್ತಿದೆ. ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ, ನೇಪಾಳ ರಾಷ್ಟ್ರಪತಿಯ ಖಾಸಗಿ ಮನೆಗೆ ಬೆಂಕಿ ಹಚ್ಚಿದ್ದಾರೆ. ನೇಪಾಳ ಸಂಸತ್ತಿಗೆ ದಾಳಿ ಮಾಡಿದ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ. ಸಿಕ್ಕ ಸಿಕ್ಕ ಕಡೆಯಲ್ಲಿ ಬೆಂಕಿ ಹಚ್ಚುತ್ತಿದ್ದಾರೆ.ಈ ಘಟನೆಯಲ್ಲಿ ನೇಪಾಳ ಮಾಜಿ ಪ್ರಧಾನಿ ಝಲನಾಥ್ ಖನಾಲ್ ಮನೆಗೂ ಬೆಂಕಿ ಇಟ್ಟಿದ್ದಾರೆ. ಪೆಟ್ರೋಲ್ ಬಾಂಬ್ ಮೂಲಕ ಬೆಂಕಿ ಒಂದೇ ಭಾಗಿ ಧಗಧಗಿಸಿದೆ. ಪರಿಣಾಮ ಝಲನಾಥ್ ಖನಾಲ್ ಪತ್ನಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ತೀವ್ರ ಸುಟ್ಟಗಾಯಗಳಿಂದ ರಾಜಲಕ್ಷ್ಮಿ ಚಿತ್ರಾಕರ್ ಸಾವು

ಝಲನಾಥ್ ಖನಾಲ್ ಮನೆಯಲ್ಲಿ ಬೆಂಕಿಯ ಕೆನ್ನಾಲಗೆ ತೀವ್ರಗೊಂಡಿದೆ. ತಕ್ಷಣವೇ ಹೊರಗೆ ಓಡಲು ಖನಾಲ್ ಪತ್ನಿ ರಾಜಲಕ್ಷ್ಮಿ ಚಿತ್ರಾಕರ್ ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗಿದ್ದಾರೆ. ಇತ್ತ ರಕ್ಷಣ ಕಾರ್ಯಾಚರಣೆ ಮೂಲಕ ರಾಜಲಕ್ಷ್ಮಿ ಚಿತ್ರಾಕರ್ ಅವರನ್ನು ರಕ್ಷಿಸಿ ಕೀರ್ತೀಪುರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸುಟ್ಟಗಾಯಗಳಾಗಿದ್ದ ಕಾರಣ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ರಾಜಲಕ್ಷ್ಮಿ ಚಿತ್ರಾಕರ್ ಮೃತಪಟ್ಟಿರುವುದಾಗಿ ನೇಪಾಳ ಮಾಧ್ಯಮಗಳು ವರದಿ ಮಾಡಿದೆ.

ಕಾಠ್ಮಂಡುವಿನ ದಲ್ಲುವಿನಲ್ಲಿರುವ ಮನೆಗೆ ಬೆಂಕಿ

ಝಲನಾಥ್ ಖನಾಲ್ ಮನೆ ನೇಪಾಳ ರಾಜಧಾನಿಯ ದಲ್ಲುವಿನಲ್ಲಿದೆ. ಪ್ರತಿಭಟನಾಕಾರರು ಸರ್ಕಾರದ ಭಾಗವಾಗಿರುವ, ಮಾಜಿಯಾಗಿರುವ ಎಲ್ಲಾ ನಾಯಕರನ್ನು ಟಾರ್ಗೆಟ್ ಮಾಡಿದ್ದರು. ಹೀಗೆ ಝಲನಾಥ್ ಮನೆಗೂ ಬೆಂಕಿ ಹಚ್ಚಿದ್ದಾರೆ.

 



Source link

Leave a Reply

Your email address will not be published. Required fields are marked *