
ಮೆಟಾ ಒಡೆತನದ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹಲವು ಹೊಸ ಫೀಚರ್ಗಳನ್ನು ಪರಿಚಯಿಸಿದೆ. ಈ ಅಪ್ಡೇಟ್ನಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ನಡುವೆ ಚಾಟ್ ವರ್ಗಾವಣೆ, ಸ್ಟೋರೇಜ್ ನಿರ್ವಹಣೆ, ಮತ್ತು ಐಫೋನ್ನಲ್ಲಿ 2 ಖಾತೆ ಬಳಸುವ ಸೌಲಭ್ಯಗಳಿವೆ. AI ಆಧಾರಿತ ಫೋಟೋ ಎಡಿಟಿಂಗ್, ರೈಟಿಂಗ್ ಹೆಲ್ಪ್ ಫೀಚರ್ ಇವೆ.
ಕ್ಯಾಲಿಫೋರ್ನಿಯಾ: ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್, ತನ್ನ ಯೂಸರ್ಗಳ ಅನುಕೂಲಕ್ಕಾಗಿ ಹಲವು ಹೊಸ ಫೀಚರ್ಗಳನ್ನು ಪರಿಚಯಿಸಿದೆ. ಕ್ರಾಸ್-ಪ್ಲಾಟ್ಫಾರ್ಮ್ ಬಳಕೆ, ಸ್ಟೋರೇಜ್ ಕಂಟ್ರೋಲ್ ಮತ್ತು AI ಆಧಾರಿತ ಸೌಲಭ್ಯಗಳ ಮೇಲೆ ಈ ಅಪ್ಡೇಟ್ಗಳು ಗಮನಹರಿಸಿವೆ.
ವಾಟ್ಸಾಪ್ನಲ್ಲಿ ಏನೆಲ್ಲಾ ಹೊಸ ಫೀಚರ್ಸ್?
ಈ ಹೊಸ ಅಪ್ಡೇಟ್ನಲ್ಲಿ ಚಾಟ್ ಟ್ರಾನ್ಸ್ಫರ್ ಸಿಸ್ಟಂ ಪ್ರಮುಖ ಆಕರ್ಷಣೆಯಾಗಿದೆ. ಇನ್ಮುಂದೆ ಯೂಸರ್ಗಳು ತಮ್ಮ ಚಾಟ್ಗಳನ್ನು ಐಫೋನ್ನಿಂದ (iOS) ಆಂಡ್ರಾಯ್ಡ್ಗೆ ಮತ್ತು ಆಂಡ್ರಾಯ್ಡ್ನಿಂದ ಐಫೋನ್ಗೆ ಸುಲಭವಾಗಿ ವರ್ಗಾಯಿಸಬಹುದು. ವೈಯಕ್ತಿಕ ಚಾಟ್ಗಳು, ಗ್ರೂಪ್ ಚಾಟ್ಗಳು, ಕಮ್ಯೂನಿಟಿಗಳು, ಚಾನೆಲ್ ಅಪ್ಡೇಟ್ಗಳು, ಕಾಲ್ ಹಿಸ್ಟರಿ ಜೊತೆಗೆ ಫೋಟೋ ಮತ್ತು ವಿಡಿಯೋಗಳನ್ನೂ ಹೊಸ ಡಿವೈಸ್ಗೆ ಮೂವ್ ಮಾಡಬಹುದು.
ಸ್ಟೋರೇಜ್ ಕಂಟ್ರೋಲ್ ವಿಚಾರದಲ್ಲೂ ವಾಟ್ಸಾಪ್ ಹೊಸ ಆಯ್ಕೆಗಳನ್ನು ನೀಡಿದೆ. ಪ್ರತಿ ಚಾಟ್ನಲ್ಲಿರುವ ‘ಮ್ಯಾನೇಜ್ ಸ್ಟೋರೇಜ್’ ಆಪ್ಷನ್ ಬಳಸಿ, ದೊಡ್ಡ ಫೈಲ್ಗಳನ್ನು ಪತ್ತೆಹಚ್ಚಿ ಡಿಲೀಟ್ ಮಾಡಬಹುದು. ಇದರಿಂದ ಪೂರ್ತಿ ಚಾಟ್ ಡಿಲೀಟ್ ಮಾಡದೆ, ಕೇವಲ ಮೀಡಿಯಾ ಫೈಲ್ಗಳನ್ನು ತೆಗೆದುಹಾಕಿ ಫೋನ್ ಸ್ಟೋರೇಜ್ ಉಳಿಸಬಹುದು. ಐಫೋನ್ ಯೂಸರ್ಗಳಿಗಾಗಿ ಒಂದೇ ಫೋನ್ನಲ್ಲಿ ಎರಡು ವಾಟ್ಸಾಪ್ ಅಕೌಂಟ್ ಬಳಸುವ ಫೀಚರ್ ಕೂಡ ಬಂದಿದೆ. ಮೊದಲು ಇದು ಕೇವಲ ಆಂಡ್ರಾಯ್ಡ್ ಫೋನ್ಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಐಫೋನ್ನಲ್ಲೂ ಈ ಸೌಲಭ್ಯ ಸಿಕ್ಕಿದೆ. ಇದರಿಂದ ವೈಯಕ್ತಿಕ ಮತ್ತು ಕೆಲಸದ ಅಕೌಂಟ್ಗಳನ್ನು ನಿಭಾಯಿಸುವುದು ಇನ್ನಷ್ಟು ಸುಲಭವಾಗಲಿದೆ.
ಚಾಟ್ನಲ್ಲೇ ಫೋಟೋ ಎಡಿಟ್
ಇದರ ಜೊತೆಗೆ, AI ಆಧಾರಿತ ಫೀಚರ್ಗಳನ್ನೂ ಸುಧಾರಿಸಲಾಗಿದೆ. ಚಾಟ್ನಲ್ಲೇ ಫೋಟೋ ಎಡಿಟ್ ಮಾಡುವ ಸೌಲಭ್ಯ ಸಿಗಲಿದೆ. ಫೋಟೋದಲ್ಲಿ ಬೇಡವಾದ ವಸ್ತುಗಳನ್ನು ತೆಗೆದುಹಾಕುವುದು, ಬ್ಯಾಕ್ಗ್ರೌಂಡ್ ಬದಲಾಯಿಸುವುದು ಮತ್ತು ಸ್ಟೈಲ್ ಸೇರಿಸುವುದು ಸಾಧ್ಯವಾಗಲಿದೆ. ‘ರೈಟಿಂಗ್ ಹೆಲ್ಪ್’ ಫೀಚರ್ ಬಳಸಿ, ಸಂಭಾಷಣೆಯ ಸಂದರ್ಭಕ್ಕೆ ತಕ್ಕಂತೆ ರಿಪ್ಲೈ ಸಜೆಶನ್ಗಳನ್ನೂ ಪಡೆಯಬಹುದು. ಈ ಎಲ್ಲಾ ಹೊಸ ಫೀಚರ್ಗಳು ಈಗ ಹಂತ ಹಂತವಾಗಿ ಯೂಸರ್ಗಳಿಗೆ ಲಭ್ಯವಾಗುತ್ತಿವೆ. ಮುಂದಿನ ಕೆಲವು ವಾರಗಳಲ್ಲಿ ಎಲ್ಲರಿಗೂ ಈ ಅಪ್ಡೇಟ್ ಸಿಗಲಿದೆ ಎಂದು ಕಂಪನಿ ತಿಳಿಸಿದೆ.