‘ನನ್ನೊಬ್ಬನ ನಿರ್ಣಯ ಅಲ್ಲ..’ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ, ಕಾಶೆಪ್ಪನವರ್ ಸ್ಫೋಟಕ ಹೇಳಿಕೆ! | Basava Jaya Mrityunjaya Swamiji Expelled From Kudalasangama Peetha Intl

ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲಸಂಗಮ ಪೀಠದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉಚ್ಚಾಟನೆಗೆ ಕಾರಣಗಳೇನು ತಿಳಿಯಿರಿ

ಬಾಗಲಕೋಟೆ (ಸೆ.21): ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲಸಂಗಮ ಪೀಠದಿಂದ ಉಚ್ಛಾಟನೆ ಮಾಡಲಾಗಿದೆ. ಈ ಕ್ಷಣದಿಂದ ಸ್ವಾಮೀಜಿಗೆ ಕೂಡಲಸಂಗಮ ಪೀಠದೊಂದಿಗೆ ಯಾವುದೇ ಸಂಬಂಧವಿಲ್ಲ, ಅವರು ಇಲ್ಲಿಗೆ ಬರೋ ಹಾಗೆ ಇಲ್ಲ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ನನ್ನೊಬ್ಬನ ನಿರ್ಣಯ ಅಲ್ಲ:

ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ ಸಂಬಂಧ ಇಂದು ಕೂಡಲಸಂಗಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಟ್ರಸ್ಟ್ ನಿರ್ಣಯ, ಇದು ನನ್ನೊಬ್ಬನ ನಿರ್ಣಯವಲ್ಲ ಟ್ರಸ್ಟ್ ನ ಕಾರ್ಯದರ್ಶಿಗಳು ಉಚ್ಛಾಟನೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನೋಟಿಸ್ ಕೊಟ್ರೂ ಪ್ರಯೋಜನವಾಗಲಿಲ್ಲ:

ಸ್ವಾಮೀಜಿ ಹಿಂದಿನಿಂದಲೂ ವಿನಾಕಾರಣ ನಮ್ಮನ್ನು ಹೆದರಿಸೋಕೆ ನೋಡ್ತಿದ್ರು. ಅವರು ಸದಾ ತಪ್ಪು ಹೆಜ್ಜೆ ಇಡುತ್ತಾ ಬಂದಿದ್ರು. ಈ ಬಗ್ಗೆ ಸಾಕಷ್ಟು ಬಾರಿ ನೋಟಿಸ್ ಕೊಟ್ರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಟ್ರಸ್ಟ್ ಈ ನಿರ್ಣಯ ಕೈಗೊಂಡಿದೆ. ಈ ಕ್ಷಣದಿಂದ ಸ್ವಾಮೀಜಿಗೂ ಕೂಡಲಸಂಗಮ ಪೀಠಕ್ಕೆ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ನಿರ್ಣವಲ್ಲ ಎಂದು ಪುನರುಚ್ಚರಿಸಿದರು.

ಕೂಡಲಸಂಗಮ ಪರ್ಯಾಯ ಪೀಠಾಧಿಪತಿ ಯಾರು?

ಈ ನಿರ್ಣಯದಿಂದ ಕೂಡಲಸಂಗಮ ಪೀಠದ ಆಡಳಿತದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಪೀಠಾಧಿಪತಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ

Source link

Leave a Reply

Your email address will not be published. Required fields are marked *