
ಪುತ್ತೂರು ಬಿಜೆಪಿ ನಾಯಕನ ಪುತ್ರನಿಂದ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಯುವತಿ ತನಗೆ ನ್ಯಾಯ ಸಿಗಲಿಲ್ಲ ಎಂದು ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಡಿಎನ್ಎ ಪರೀಕ್ಷೆಯಲ್ಲಿ ಆರೋಪಿ ಜೆ. ಕೃಷ್ಣ ರಾವ್ ತಂದೆ ಎಂದು ಸಾಬೀತಾದರೂ ಮದುವೆಗೆ ನಿರಾಕರಿಸಲಾಗಿತ್ತು.
ಪುತ್ತೂರು ಪ್ರೀತಿಯಲ್ಲಿ ಮೋಸ ಸಾಯಲು ಯತ್ನಿಸಿದ ಯುವತಿ:
ಪುತ್ತೂರಿನಲ್ಲಿ ತನ್ನ ಕ್ಲಾಸ್ಮೇಟ್ ಜೊತೆಯೇ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಿ ಮಗು ಆದ ನಂತರವೂ ಮದುವೆಗೆ ನಿರಾಕರಿಸಿದ ಪ್ರಕರಣದಲ್ಲಿ ಈಗ ಮಗುವಿನ ತಾಯಿ ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಪುತ್ತೂರಿನ ಉಚ್ಚಾಟಿತ ಬಿಜೆಪಿ ನಾಯಕರೊಬ್ಬರ ಪುತ್ರ ಜೆ. ಕೃಷ್ಣ ರಾವ್ ಎಂಬಾತ ತನ್ನ ಕ್ಲಾಸ್ಮೇಟ್ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಘಟನೆಯ ಬಳಿಕ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆ ನಡೆದು ಜೆ. ಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದ್ದರು. ಆತನ ಕುಟುಂಬದವರು ಜಾತಿಯ ಕಾರಣದಿಂದ ಇಬ್ಬರ ಮಧ್ಯೆ ಮದುವೆಗೆ ನಿರಾಕರಿಸಿದ್ದಾರೆ. ಬಿಜೆಪಿಯೂ ಸೇರಿದಂತೆ ಹಲವು ಸಂಘಟನೆಗಳು ಕುಟುಂಬದವರ ಜೊತೆ ಮಾತುಕತೆ ನಡೆಸಿ ಯುವತಿಯನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದ್ದರು. ಆದರೆ ಜೆ ಕೃಷ್ಣ ರಾವ್ ಮನೆಯವರು ಹಠಕ್ಕೆ ಬಿದ್ದು, ಮದುವೆಗೆ ಯಾವುದೇ ಕಾರಣಕ್ಕೂ ಒಪ್ಪದೇ ಹೋದ ಕಾರಣ ಈ ವಿಚಾರ ಬೀದಿ ರಾಂಪಟವಾಗಿ ರಾಜ್ಯದ್ಯಾಂತ ಸುದ್ದಿಯಾಗಿತ್ತು.
ಈ ಪ್ರಕರಣದಲ್ಲಿ ಜೆ. ಕೃಷ್ಣ ರಾವ್ ತಾನು ಮಗುವಿನ ತಂದೆ ಅಲ್ಲ ಎಂದು ಹೇಳಿದ್ದನು. ಹೀಗಾಗಿ ಡಿಎನ್ಎ ಪರೀಕ್ಷೆ ಕೂಡ ನಡೆದು, ಆತನೇ ಮಗುವಿನ ತಂದೆ ಎಂಬುದು ಸಾಬೀತಾಗಿತ್ತು. ಜೊತೆಗೆ ಈ ಪ್ರಕರಣದಲ್ಲಿ ಆತ ಜೈಲಿಗೂ ಹೋಗಿ ಬಂದಿದ್ದ. ಆದರೆ ಆತ ಯಾವುದೇ ಶಿಕ್ಷೆ ಇಲ್ಲದೇ ಎರಡೇ ತಿಂಗಳಿಗೆ ಜೈಲಿನಿಂದ ಹೊರಗೆ ಬಂದಿದ್ದು, ಇದರಿಂದ ಯುವತಿ ಖಿನ್ನತೆಗೆ ಜಾರಿದ್ದಳು. ಅಲ್ಲದೇ ಯುವತಿಗೆ ಸಾಮಾಜದಲ್ಲಿ ವ್ಯಾಪಕವಾದ ಟೀಕೆಗಳು ಕೇಳಿ ಬಂದಿದ್ದವು. ಸೋಶಿಯಲ್ ಮೀಡಿಯಾದಲೂ ಈ ಸುದ್ದಿಗಳಿಗೆ ಯುವತಿಯನ್ನು ನಿರಂತರವಾಗಿ ಹೀಗೆಳೆಯುವುದು ನಡೆಯುತ್ತಿತ್ತು. ಇದರಿಂದಾಗಿ ಮನದನೊಂದ ಯುವತಿಗೆ ಸಾಯುವುದಕ್ಕೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಕೂಡಲೇ ಯುವತಿಯ ಮನೆಯವರು ಗಮನಿಸಿ ತಕ್ಷಣ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಇದನ್ನೂ ಓದಿ: ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ
ಜೆ. ಕೃಷ್ಣ ರಾವ್ ಮದುವೆಯಾಗುವುದಕ್ಕೆ ನಿರಾಕರಿಸಿದ್ದಕ್ಕೆ ಯುವತಿ ಠಾಣೆ ಮೆಟ್ಟಿಲೇರಿದ್ದರು. ಜೊತೆಗೆ ಹಲವು ಸಂಘಟನೆಗಳು ಅವರ ಪರವಾಗಿ ಪ್ರತಿಭಟನೆಯನ್ನು ನಡೆಸಿದ್ದರು.. ಹಲವು ಬಿಜೆಪಿ ಮುಖಂಡರು ಅವರ ಮನೆಯವರೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಆದರೆ ಯಾರ ಮಾತುಕತೆಯೂ ಫಲಪ್ರದವಾಗದೇ ಆರೋಪಿ ಜೆ.ಕೃಷ್ಣರಾವ್ ಆರಾಮವಾಗಿ ಓಡಾಡಿಕೊಂಡಿದ್ದಾನೆ. ಇದೆಲ್ಲದರಿಂದ ನೊಂದು ಸಂತ್ರಸ್ತ ಮಹಿಳೆ ಜೆ.ಕೃಷ್ಣ ರಾವ್ ಮಗುವಿನ ತಾಯಿ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಕೃಷ್ಣ ಜೆ ರಾವ್ ಕೃತ್ಯದಿಂದಾಗಿ ಅವರ ತಂದೆಯನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿತ್ತು.
ಇದನ್ನೂ ಓದಿ: ಟಾಪ್ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?