Headlines

Bengaluru ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು? | Bengaluru Woman Opt 47 Km Instead Of 23km For Travel Internet React

Bengaluru ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು? | Bengaluru Woman Opt 47 Km Instead Of 23km For Travel Internet React



Bengaluru ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು? | Bengaluru Woman Opt 47 Km Instead Of 23km For Travel Internet React

ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು? ಈಕೆ ಘಟನೆ ಹೇಳಿದ ಬೆನ್ನಲ್ಲೇ ಮಹಿಳೆ ಆಯ್ಕೆ ಮಾಡಿಕೊಂಡ ಮಾರ್ಗ ಸರಿ ಎಂದು ಹಲವರು ಹೇಳಿದ್ದಾರೆ. ಏನಿದು ಘಟನೆ 

ಬೆಂಗಳೂರು (ಮಾ.06) ಬೆಂಗಳೂರಿನಲ್ಲಿ ಪ್ರಯಾಣ ಪ್ರಯಾಸದ ಕೆಲಸ. ಹೀಗಾಗಿ ಕಡಿಮೆ ಪ್ರಯಾಣವನ್ನು ಜನರು ಬಯಸುತ್ತಾರೆ. ಎಲ್ಲಾ ಶಾರ್ಟ್ ಕಟ್ ಮಾರ್ಗದ ಮೂಲಕ ಪ್ರಯಾಣ ಮಾಡುತ್ತಾರೆ.ಕೆಲವರು ರಾಂಗ್ ರೂಟ್ ಮೂಲಕ ರಿಸ್ಕ್ ಮೇಲೆ ತೆರಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ 23 ಕಿಲೋಮೀಟರ್ ದೂರದ ಪ್ರಯಾಣಕ್ಕೆ 47 ಕಿಲೋಮೀಟರ್ ಮಾರ್ಗದ ಮೂಲಕ ತೆರಳಿದ್ದಾಳೆ. 47 ಕಿಲೋಮೀಟರ್ ಸುತ್ತಾಡಿ ಗುರಿ ತಲುಪಿದ್ದಾರೆ. ಈಕೆ ತನ್ನ ಪ್ರಯಾಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡ ಬೆನ್ನಲ್ಲೇ ಹಲವರು ಸರಿಯಾಗಿದೆ ಎಂದಿದ್ದಾರೆ.

ಬೆಂಗಳೂರು ನಿವಾಸಿ ಶ್ರಾವಿಕಾ ಜೈನ್ ತಮ್ಮ ಪ್ರಯಾಣದ ಕುರಿತ ಘಟನೆ ವಿವರಿಸಿದ್ದಾರೆ. ಶ್ರಾವಿಕಾ ಜೈನ್‌ಗೆ ತಮ್ಮ ಕೆಲಸಕ್ಕಾಗಿ 23 ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಗೂಗಲ್ ಮ್ಯಾಪ್ ಮೂಲಕ ಹತ್ತಿರದ ಮಾರ್ಗ ಯಾವುದು ಎಂದು ಪರಿಶೀಲಿಸಿದ್ದಾರೆ. ಈ ವೇಳೆ ಎರಡು ಮಾರ್ಗವನ್ನು ಮ್ಯಾಪ್ ತೋರಿಸಿದೆ. ಒಂದು ಮಾರ್ಗದಲ್ಲಿ ಕೇವಲ 23 ಕಿಲೋಮೀಟರ್, ಮತ್ತೊಂದು ಮಾರ್ಗದಲ್ಲಿ 47 ಕಿಲೋಮೀಟರ್. ಈ ಪೈಕಿ ಶ್ರಾವಿಕಾ ಜೈನ್ 47 ಕಿಲೋಮೀಟರ್ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರಾವಿಕಾ ಜೈನ್ 47 ಕಿಲೋಮೀಟರ್ ಮಾರ್ಗ ಆಯ್ಕೆ ಮಾಡಿಕೊಂಡಿದ್ದೇಕೆ

ಶ್ರಾವಿಕಾ ಜೈನ್ 23 ಕಿಲೋಮೀಟರ್ ಪ್ರಯಾಣಕ್ಕೆ ಗೂಗಲ್ ಮ್ಯಾಪ್ ತೋರಿಸಿದ ಸಮಯ 1 ಗಂಟೆ 35 ನಿಮಿಷ. ಅದೆ 47 ಕಿಲೋಮೀಟರ್ ಪ್ರಯಾಣಕ್ಕೆ 1 ಗಂಟೆ 12 ನಿಮಿಷ ಮಾತ್ರ. 23 ಕಿಲೋಮೀಟರ್ ಪ್ರಯಾಣದಲ್ಲಿ ಭಾರಿ ಟ್ರಾಫಿಕ್. ಈ ಟ್ರಾಫಿಕ್‌ನಿಂದ ಬಚಾವ್ ಆಗಲು ಮಹಿಳೆ 47 ಕಿಲೋಮೀಟರ್ ಸುದೀರ್ಘ ಪ್ರಯಾಣದ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂತ ಹೆಚ್ಚಿನ ಪ್ರಯಾಸ ಹಾಗೂ ಆಯಾಸವಿಲ್ಲದೆ ನಿಗಿದತ ಸ್ಥಳ ತಲುಪಿದ್ದಾರೆ.

Scroll to load tweet…

ಈ ಪೋಸ್ಟ್ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಟ್ರಾಫಿಕ್ ಕುರಿತು ಭಾರಿ ಚರ್ಚೆಯಾಗುತ್ತಿದೆ. ಬೆಂಗಳೂರು ವಿಶ್ವದಲ್ಲೇ ಭಾರಿ ಅತೀ ಹೆಚ್ಚು ಸಂಚಾರ ದಟ್ಟಣೆ ನಗರವಾಗಿ ಗುರುತಿಸಿಕೊಂಡಿದೆ. ಜನರು ಅತೀ ಹೆಚ್ಚಿನ ಸಮಯವನ್ನು ಬೆಂಗಳೂರು ರಸ್ತೆಯಲ್ಲೇ ಕಳೆಯುತ್ತಾರೆ. ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಯನದಲ್ಲೂ ಇದು ಸಾಬೀತಾಗಿದೆ. ಇದೀಗ ಮಹಿಳೆಯ ಪೋಸ್ಟ್‌ನಿಂದ ಮತ್ತೆ ಚರ್ಚೆ ಶುರುವಾಗಿದೆ.



Source link

Leave a Reply

Your email address will not be published. Required fields are marked *