ಖಮೇನಿ, ಪುತ್ರನ ಹ*ತ್ಯೆಗೆ ಟ್ರಂಪ್ ಸ್ಕೆಚ್‌? ಪರಮಾಣು ಡೀಲ್‌ಗೆ ಒಪ್ಪದಿದ್ರೆ ಸೀಮಿತ ದಾಳಿ ಇಲ್ಲವೇ ಹ*ತ್ಯೆ | America President Donald Trump Plan For Iran Ali Khamenei S Son S Assassination Mrq

ಅಣ್ವಸ್ತ್ರಕ್ಕೆ ಅಗತ್ಯವಾದ ಯುರೇನಿಯಂ ಸಂಸ್ಕರಣೆ ನಿಲ್ಲಿಸಲು ಇರಾನ್ ಒಪ್ಪದಿದ್ದರೆ, ಆ ದೇಶದ ಮೇಲೆ ಸೀಮಿತ ದಾಳಿ ನಡೆಸಲು ಅಮೆರಿಕ ಯೋಜಿಸುತ್ತಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲಾ ಅಲಿ ಖಮೇನಿ ಮತ್ತು ಪುತ್ರ ಮೋಜತಬಾ ಖಮೇನಿ ಅವರ ಹತ್ಯೆಗೂ ಟ್ರಂಪ್ ಸ್ಕೆಚ್ ಹಾಕಿದ್ದಾರೆ ಎಂದು ವರದಿಯಾಗಿದೆ.

ವಾಷಿಂಗ್ಟನ್‌: ಇರಾನ್‌ ಮೇಲೆ ಸೀಮಿತ ದಾಳಿಯ ಎಚ್ಚರಿಕೆ ಬೆನ್ನಲ್ಲೇ, ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲಾ ಅಲಿ ಖಮೇನಿ ಹಾಗೂ ಅವರ ಪುತ್ರ ಮೋಜತಬಾ ಖಮೇನಿ ಹತ್ಯೆ ಮಾಡುವ ಪ್ಲ್ಯಾನ್‌ ಕೂಡಾ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ರಹಸ್ಯ ಯೋಜನೆಗಳ ಪೈಕಿ ಒಂದಾಗಿದೆ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಸೇನಾ ಬಳಕೆಗೆ ಅಗತ್ಯವಾದ ಯುರೇನಿಯಂ ಸಂಸ್ಕರಣೆ ನಿಲ್ಲಿಸಬೇಕು. ಈ ವಿಷಯದಲ್ಲಿ ಅಮೆರಿಕದ ಜೊತೆ ಇರಾನ್‌ ಒಪ್ಪಂದ ಮಾಡಬೇಕು ಎಂಬುದು ಅಮೆರಿಕ ತಾಕೀತು. ಆದರೆ ಇದಕ್ಕೆ ಇರಾನ್‌ ಒಪ್ಪದೇ ಇರುವ ಕಾರಣ, ಆ ದೇಶದ ಮೇಲೆ ಸೀಮಿತ ದಾಳಿಗೆ ಟ್ರಂಪ್‌ ಯೋಜಿಸಿದ್ದಾರೆ. ಇದರ ಜೊತೆಗೆ ಆಯತೋಲ್ಲಾ ಅಲಿ ಖಮೇನಿ ಹಾಗೂ ಅವರ ಪುತ್ರ ಮೋಜತಬಾ ಖಮೇನಿ ಹತ್ಯೆ ಸೇರಿದಂತೆ ಹಲವು ಮಿಲಿಟರಿ ಆಯ್ಕೆಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮುಂದಿವೆ. ಯಾವುದೇ ಕ್ಷಣದಲ್ಲಿ ಅವರು ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಟ್ರಂಪ್‌ ಸಲಹೆಗಾರರೊಬ್ಬರ ಮಾತುಗಳನ್ನು ಉಲ್ಲೇಖಿಸಿ ಅಮೆರಿಕದ ಆಕ್ಸಿಯೋಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಪಾಕ್ ಬಡತನ ಪ್ರಮಾಣ 11 ವರ್ಷದ ಗರಿಷ್ಠಕ್ಕೆ

‘ಟ್ರಂಪ್‌ ಅವರ ಜೊತೆ ಚರ್ಚಿಸಲಾದ ವಿಷಯಗಳಲ್ಲಿ ಖಮೇನಿ, ಮುಂದಿನ ಉತ್ತರಾಧಿಕಾರಿಯಾದ ಅವರ ಪುತ್ರ ಹಾಗೂ ಮುಲ್ಲಾಗಳನ್ನು ಹೊರಗೆಳೆಯುವುದೂ ಒಂದು. ಆದರೆ ದಾಳಿ ಬಗ್ಗೆ ಅಧ್ಯಕ್ಷರು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನು ಅವರು ಮಾಡದಿರಬಹುದು. ಆದರೆ ನಾಳೆ ಎದ್ದ ತಕ್ಷಣ ‘ಮಾಡಿ’ ಎಂದು ಕರೆ ನೀಡಲೂಬಹುದು’ ಎಂದು ಟ್ರಂಪ್‌ರ ಹಿರಿಯ ಸಲಹೆಗಾರರೊಬ್ಬರು ಹೇಳಿದ್ದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ: ಬೊಂಬೆಯನ್ನೇ ‘ಅಮ್ಮ’ ಅಂದುಕೊಂಡು ಸುತ್ತುತ್ತಿರೋ ಪುಟಾಣಿ ‘ಪಂಚ್’, ವಿಡಿಯೋ ನೋಡಿದ್ರೆ ಕಣ್ಣಾಲಿ ಒದ್ದೆಯಾಗುತ್ತೆ

Source link

Leave a Reply

Your email address will not be published. Required fields are marked *