Headlines

ಕನ್ನಡಪ್ರಭ – ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರತಿಷ್ಠಿತ ಯುಗಾದಿ ಪುರಸ್ಕಾರ ಪ್ರಕಟ | Prestigious Ugadi Awards Announced By Kannada Prabha And Asianet Suvarna News

ಕನ್ನಡಪ್ರಭ – ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರತಿಷ್ಠಿತ ಯುಗಾದಿ ಪುರಸ್ಕಾರ ಪ್ರಕಟ | Prestigious Ugadi Awards Announced By Kannada Prabha And Asianet Suvarna News



ಕನ್ನಡಪ್ರಭ – ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರತಿಷ್ಠಿತ ಯುಗಾದಿ ಪುರಸ್ಕಾರ ಪ್ರಕಟ | Prestigious Ugadi Awards Announced By Kannada Prabha And Asianet Suvarna News

ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಧ್ಯಮ ಸಂಸ್ಥೆಗಳ ಪ್ರತಿಷ್ಠಿತ ಯುಗಾದಿ ಪುರಸ್ಕಾರ ಪ್ರಕಟವಾಗಿದ್ದು, ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಯುಗಾದಿ ಪುರಸ್ಕಾರವು ಪ್ರಶಂಸಾಪತ್ರ, 25,000 ರುಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ

ಬೆಂಗಳೂರು : ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಧ್ಯಮ ಸಂಸ್ಥೆಗಳ ಪ್ರತಿಷ್ಠಿತ ಯುಗಾದಿ ಪುರಸ್ಕಾರ ಪ್ರಕಟವಾಗಿದ್ದು, ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಕಿರುತೆರೆ ಮತ್ತು ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಟಿ.ಎನ್. ಸೀತಾರಾಮ್ ಆಯ್ಕೆ

ಕಿರುತೆರೆ ಮತ್ತು ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಟಿ.ಎನ್. ಸೀತಾರಾಮ್, ಚಿತ್ರನಿರ್ದೇಶನ, ನಟನೆ, ಕಾರ್ಯಕ್ರಮ ನಿರೂಪಣೆ ಸೇರಿ ಬಹುಮುಖಿ ಸಾಧನೆಗಾಗಿ ರಮೇಶ್ ಅರವಿಂದ್, ಚಿತ್ರಕಲೆಯ ಸಾಧ್ಯತೆಯನ್ನು ವಿಸ್ತರಿಸಿ ಪುರಾಣ ಚಿತ್ರಗಳ ಮೂಲಕ ಗಮನ ಸೆಳೆದ ಮಹತ್ವದ ಚಿತ್ರಕಲಾವಿದ ಚಂದ್ರನಾಥ ಆಚಾರ್ಯ, ಜನಪದ ಕ್ಷೇತ್ರದಲ್ಲಿ ಹಾಡುಗಳನ್ನು ಸಂಗ್ರಹಿಸಿ ನಿರಂತರವಾಗಿ ಹಾಡುವ ಪ್ರತಿಭೆಗಾಗಿ ಮೈಸೂರು ಗುರುರಾಜ್, ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆ ಮತ್ತು ಅನುವಾದದ ಮೂಲಕ ಕನ್ನಡದ ಅವಕಾಶ ವಿಸ್ತರಿಸುತ್ತಿರುವ ವಿವೇಕ ಶಾನಭಾಗ್ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ಅಭೂತಪೂರ್ವ ಸಾಧಕರಾಗಿರುವ ಪಂಡಿತ ವಿನಾಯಕ ತೊರವಿ ಈ ಬಾರಿಯ ಯುಗಾದಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

25,000 ರುಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆ

ಯುಗಾದಿ ಪುರಸ್ಕಾರವು ಪ್ರಶಂಸಾಪತ್ರ, 25,000 ರುಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ‘ಗುಬ್ಬಿಗೂಡು’ ಅರ್ಪಿಸುವ, ‘ಕರ್ನಾಟಕ ಚಿತ್ರಕಲಾ ಪರಿಷತ್‌’ ಆಶ್ರಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸದ್ಯದಲ್ಲೇ ನಡೆಯುವ ‘ಯುಗಾದಿ ಸಂಭ್ರಮ’ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

2025ರಲ್ಲಿ ಐವರಿಗೆ ಯುಗಾದಿ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಸಾಹಿತ್ಯ- ಬಿ.ಆರ್‌. ಲಕ್ಷ್ಮಣರಾವ್, ರಂಗಭೂಮಿ- ಅಕ್ಷತಾ ಪಾಂಡವಪುರ, ಸಂಗೀತ- ಪಂಡಿತ್‌ ವೆಂಕಟೇಶ್‌ಕುಮಾರ್‌, ಸಿನಿಮಾ- ಗಿರೀಶ್‌ ಕಾಸರವಳ್ಳಿ, ಕಲೆ ಕ್ಷೇತ್ರದಿಂದ ಪ.ಸ. ಕುಮಾರ್‌ ಪುರಸ್ಕಾರಕ್ಕೆ ಭಾಜನರಾಗಿದ್ದರು.



Source link

Leave a Reply

Your email address will not be published. Required fields are marked *