Headlines

savadatti bus stand accident: ಸವದತ್ತಿ ದುರಂತ: ಸೀಟಿಗಾಗಿ ಓಟ, ಚಕ್ರದಡಿ ಸಿಲುಕಿದ ಕಂದಮ್ಮ | Savadatti Tragedy Baby Gets Stuck Under Bus Wheels After Fall From Mothers Hand

disaster at Savadatti bus stand : ಬೆಳಗಾವಿ ಜಿಲ್ಲೆಯ ಸವದತ್ತಿ ಬಸ್ ನಿಲ್ದಾಣದಲ್ಲಿ, ಸೀಟಿಗಾಗಿ ಬಸ್ ಹತ್ತಲು ಯತ್ನಿಸುತ್ತಿದ್ದ ತಾಯಿಯ ಕೈಯಿಂದ ಜಾರಿದ ಮಗುವಿನ ಕಾಲಿನ ಮೇಲೆ ಸರ್ಕಾರಿ ಬಸ್ ಚಕ್ರ ಹರಿದ ಪರಿಣಾಮ ಮಗು ಗಂಭೀರ ಗಾಯಗೊಂಡಿದೆ.

ಬಸ್ ಚಕ್ರದಡಿ ಸಿಲುಕಿದ ಮಗು

ಬೆಳಗಾವಿ: ಮಗುವಿನ ಕಾಲಿನ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಮಗು ಗಂಭೀರ ಗಾಯಗೊಂಡಂತಹ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಓಡೋಡಿ ಬಂದು ಬಸ್ ಹತ್ತಿ ಸೀಟು ಹಿಡಿಯುವ ರಭಸದಲ್ಲಿ ತಾಯಿಯ ಕೈಯಿಂದ ಮಗು ಆಯತಪ್ಪಿ ಕೆಳಗೆ ಬಿದ್ದಿದೆ. ಇದೇ ವೇಳೆ ಬಸ್‌ನ ಚಕ್ರಗಳು ಮಗುವಿನ ಕಾಲಿನ ಮೇಲೆ ಹರಿದಿದ್ದು, ಮಗು ಘಟನೆಯಲ್ಲಿ ಗಂಭೀರ ಗಾಯಗೊಂಡಿದೆ.

ಸವದತ್ತಿ ಬಸ್ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ

ಬೆಳಗಾವಿ ಜಿಲ್ಲೆಯ ಸವದತ್ತಿ ಬಸ್ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಶಕ್ತಿ ಯೋಜನೆಯ ಪರಿಣಾಮ ಬಸ್‌ಗಳು ಸದಾಕಾಲ ತುಂಬಿ ತುಳುಕುತ್ತಿದ್ದು, ಬಸ್‌ನಲ್ಲಿ ಒಂದು ಸೀಟು ಹಿಡಿಯುವುದೇ ದೊಡ್ಡ ಸಾಹಸವಾಗಿದೆ. ಇದೇ ಕಾರಣಕ್ಕೆ ತಾಯಿ ಮಗುವನ್ನು ಹಿಡಿದುಕೊಂಡು ಓಡಿ ಓಡಿ ಬಂದು ಬಸ್ ಹತ್ತುವ ರಭಸದಲ್ಲಿ ಮಗು ತಾಯಿಯ ಕೈಯಿಂದ ಕೆಳಗೆ ಬಿದ್ದಿದ್ದು, ಇದೇ ವೇಳೆ ಬಸ್ ಚಕ್ರಗಳು ಮಗುವಿನ ಮೇಲೆ ಹರಿದಿದ್ದು, ಪರಿಣಾಮ ಮಗು ತೀವ್ರವಾಗಿ ಗಾಯಗೊಂಡಿದೆ. ಈ ಬಸ್ ಸವದತ್ತಿಯಿಂದ ಬೆಳವಾಡಿ ಕಡೆ ಹೊರಟಿತ್ತು.

ಇದನ್ನೂ ಓದಿ: ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಕುರುಬರ ಸಂಘದ ಜಿಲ್ಲಾಧ್ಯಕ್ಷ, ಸಿದ್ದು ಆಪ್ತನಿಗೆ ಮಸಿ ಎರಚಿ ಆಕ್ರೋಶ

ಕೆಳಗೆ ಬಿದ್ದ ಮಗು ಬಸ್ಸಿನ ಮುಂದಿನ ಚಕ್ರದಡಿ ಸಿಲುಕಿದೆ. ಏಕಾಏಕಿ ಬಸ್ಸು ಸಂಚರಿಸಿದ ಹಿನ್ನೆಲೆ ಈ ಅನಾಹುತ ಸಂಭವಿಸಿದ್ದು, ಮಗುವಿನ ಕಾಲಿಗೆ ಗಂಭೀರ ಗಾಯಗಳಾಗಿವೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೋಟ್‌ಗೆ ಏರುವ ವೇಳೆ ಪದ್ಮಾ ನದಿಗುರುಳಿದ ಬಸ್ : 25 ಜನರ ದಾರುಣ ಸಾವು

Source link

Leave a Reply

Your email address will not be published. Required fields are marked *