
ಶನಿವಾರ ಮುಂಜಾನೆ ಇಸ್ರೇಲ್ ರಕ್ಷಣಾ ಪಡೆ (IDF) ಇರಾನ್ ಮೇಲೆ ದಿಢೀರ್ ‘ಮುಂಜಾಗ್ರತಾ ದಾಳಿ’ (Preventive Attack) ನಡೆಸಿದ್ದು, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಭೀಕರ ಸ್ಫೋಟದ ಸದ್ದುಗಳು ಕೇಳಿಬಂದಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಟೆಹ್ರಾನ್ (ಫೆ.28): ಶನಿವಾರ ಮುಂಜಾನೆ ಇಸ್ರೇಲ್ ರಕ್ಷಣಾ ಪಡೆ (IDF) ಇರಾನ್ ಮೇಲೆ ದಿಢೀರ್ ‘ಮುಂಜಾಗ್ರತಾ ದಾಳಿ’ (Preventive Attack) ನಡೆಸಿದ್ದು, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಭೀಕರ ಸ್ಫೋಟದ ಸದ್ದುಗಳು ಕೇಳಿಬಂದಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ದಾಳಿಯ ಬೆನ್ನಲ್ಲೇ, ಇಸ್ರೇಲ್ ತನ್ನ ದೇಶದ ಎಲ್ಲಾ ನಾಗರಿಕರಿಗೆ ಸುರಕ್ಷಿತ ಸ್ಥಳಗಳ ಸಮೀಪವೇ ಇರುವಂತೆ ರಾಷ್ಟ್ರೀಯ ಎಚ್ಚರಿಕೆಯನ್ನು ರವಾನಿಸಿದೆ. ಇರಾನ್‌ನಿಂದ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. “ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರನ್ನು ಸನ್ನದ್ಧಗೊಳಿಸಲು ಈ ಪ್ರೊಆಕ್ಟಿವ್ ಅಲರ್ಟ್ ನೀಡಲಾಗಿದೆ” ಎಂದು ಐಡಿಎಫ್ (IDF) ತಿಳಿಸಿದೆ. ಸದ್ಯದ ವರದಿಗಳ ಪ್ರಕಾರ, ಇರಾನ್‌ನಿಂದ ಇಸ್ರೇಲ್ ಮೇಲೆ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ.