Headlines

ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಚಿಂತನೆ, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕುಲಪತಿಗಳ ವಿರೋಧ | Karnataka Government Considers Student Elections In Colleges Vice Chancellors Oppose Move

ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಚಿಂತನೆ, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕುಲಪತಿಗಳ ವಿರೋಧ | Karnataka Government Considers Student Elections In Colleges Vice Chancellors Oppose Move



ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಚಿಂತನೆ, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕುಲಪತಿಗಳ ವಿರೋಧ | Karnataka Government Considers Student Elections In Colleges Vice Chancellors Oppose Move

ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಮರುಪ್ರಾರಂಭಿಸುವ ಕುರಿತು ಸಿಎಂ ಚಿಂತನೆ ವ್ಯಕ್ತಪಡಿಸಿದ್ದಾರೆ. ಆದರೆ, ಕ್ಯಾಂಪಸ್‌ನಲ್ಲಿ ಅಶಾಂತಿ, ರಾಜಕೀಯ ಹಸ್ತಕ್ಷೇಪ, ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗುವ ಆತಂಕದಿಂದಾಗಿ ಬಹುತೇಕ ವಿವಿ ಕುಲಪತಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ (ಸ್ಟೂಡೆಂಟ್ ಎಲೆಕ್ಷನ್) ನಡೆಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಈ ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ, ಶಿಕ್ಷಣ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಆದರೆ, ಈ ಚಿಂತನೆಗೆ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳಿಂದ (ವಿಸಿಗಳು) ತೀವ್ರ ವಿರೋಧ ವ್ಯಕ್ತವಾಗಿದೆ. “ಯಾವುದೇ ಕಾರಣಕ್ಕೂ ಕಾಲೇಜುಗಳಲ್ಲಿ ಚುನಾವಣೆ ಬೇಡ” ಎಂಬ ನಿಲುವನ್ನು ವಿಸಿಗಳು ಸಭೆಯಲ್ಲೇ ಸ್ಪಷ್ಟವಾಗಿ ಮಂಡಿಸಿದ್ದಾರೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಕೊಟ್ಟ ಸುಳಿವು

ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳ ಅಗತ್ಯತೆಯನ್ನು ಒತ್ತಿ ಹೇಳಿದರು. ವಿದ್ಯಾರ್ಥಿ ರಾಜಕಾರಣವೇ ಮುಂದಿನ ನಾಯಕತ್ವಕ್ಕೆ ತಳಹದಿಯಾಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಸಿಎಂ ಹೇಳಿದ್ದೇನು?

ವಿದ್ಯಾರ್ಥಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ. ನಮ್ಮ ಕಾಲದಲ್ಲಿ ವಿದ್ಯಾರ್ಥಿ ಚುನಾವಣೆ ಇತ್ತು. ನಾವೂ ಅಲ್ಲಿಂದಲೇ ಬೆಳೆದು ಬಂದವರು ಎಂದು ನೆನಪು ಮಾಡಿಕೊಂಡರು. ಈ ವಿಚಾರದಲ್ಲಿ ಕುಲಪತಿಗಳು ಸಲಹೆ ನೀಡಬೇಕು ಎಂದು ಸೂಚನೆ ನೀಡಿದರು. ಕೆಲವು ಷರತ್ತುಗಳು (ಕಂಡಿಷನ್‌ಗಳು) ಹಾಕಿ ಚುನಾವಣೆ ನಡೆಸಲು ಅವಕಾಶ ನೀಡುವ ಚಿಂತನೆ ಇದೆ ಎಂದರು. ಚುನಾವಣೆ ಇಲ್ಲದೆ ವಿದ್ಯಾರ್ಥಿಗಳು ನಾಯಕರಾಗಿ ಹೇಗೆ ಬೆಳೆದುಕೊಳ್ಳುತ್ತಾರೆ? ಎಂಬ ಪ್ರಶ್ನೆ ಎತ್ತಿದರು. ಇಂದು ಭಾರತದಲ್ಲಿ ವಿದ್ಯಾರ್ಥಿ ನಾಯಕತ್ವವೇ ಕಾಣಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಸಿಎಂ ಅವರ ಈ ಹೇಳಿಕೆಗಳು ಸಭೆಯಲ್ಲಿದ್ದ ವಿಸಿಗಳ ಗಮನ ಸೆಳೆದರೂ, ಅದಕ್ಕೆ ಒಪ್ಪಿಗೆ ಸಿಗಲಿಲ್ಲ.

ವಿಸಿಗಳ ಅಭಿಪ್ರಾಯ ಏನು?

ಸಿಎಂ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಬಹುತೇಕ ಕುಲಪತಿಗಳು, ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ಬೇಡ ಎಂಬುದು ಬಹುಮತದ ಅಭಿಪ್ರಾಯ. Jawaharlal Nehru University (JNU) ಸೇರಿದಂತೆ ಹಲವು ಕಡೆಗಳಲ್ಲಿ ಚುನಾವಣೆ ಬಳಿಕ ಗಲಾಟೆ, ಅಶಾಂತಿ ಹೆಚ್ಚಿರುವ ಉದಾಹರಣೆ ನೀಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಪಕ್ಷಾತೀತವಾಗಿ ಚುನಾವಣೆ ನಡೆಸುವುದು ಕಷ್ಟ ಎಂದು ಅಭಿಪ್ರಾಯಪಟ್ಟರು. ಚುನಾವಣೆ ನಡೆದರೆ ರಾಜಕೀಯ ಪಕ್ಷಗಳ ಪ್ರಭಾವ ತಪ್ಪದೇ ಬೀಳುತ್ತದೆ ಎಂದರು. ಚುನಾವಣೆ ಅಂದ್ರೆ ಕ್ಯಾಂಪೇನ್‌ಗೆ ಹೆಚ್ಚು ಸಮಯ ವ್ಯರ್ಥವಾಗುತ್ತದೆ, ಇದು ಶಿಕ್ಷಣಕ್ಕೆ ಹಾನಿಕಾರಕ ಎಂದು ಹೇಳಿದರು. ವಿದ್ಯಾರ್ಥಿ ಚುನಾವಣೆಗಳು ಕೊನೆಗೆ ಪಕ್ಷದ ಚುನಾವಣೆಗಳಾಗಿಬಿಡುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು. ಈ ಎಲ್ಲ ಕಾರಣಗಳಿಂದಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಬಾರದು ಎಂದು ಬಹುತೇಕ ವಿಸಿಗಳು ಸ್ಪಷ್ಟವಾಗಿ ಹೇಳಿದರು.

ಶಿಕ್ಷಣ ವಲಯದಲ್ಲಿ ಎರಡು ನಿಲುವು

ಒಂದೆಡೆ, ವಿದ್ಯಾರ್ಥಿ ನಾಯಕತ್ವ ಬೆಳೆಸಲು ಚುನಾವಣೆ ಅಗತ್ಯ ಎಂಬ ಸಿಎಂ ಸಿದ್ದರಾಮಯ್ಯ ಅವರ ನಿಲುವು; ಮತ್ತೊಂದೆಡೆ, ಶಿಸ್ತು, ಶಾಂತಿ ಮತ್ತು ವಿದ್ಯಾಭ್ಯಾಸದ ದೃಷ್ಟಿಯಿಂದ ಚುನಾವಣೆ ಬೇಡ ಎಂಬ ವಿಸಿಗಳ ಅಭಿಪ್ರಾಯ—ಈ ಎರಡು ನಿಲುವುಗಳ ನಡುವೆ ಶಿಕ್ಷಣ ವಲಯದಲ್ಲಿ ಚರ್ಚೆ ತೀವ್ರವಾಗಿದೆ.

ಮುಂದಿನ ನಿರ್ಧಾರ ಏನು?

ಒಟ್ಟಾರೆ, ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಕುಲಪತಿಗಳ ಸಲಹೆ, ಪರಿಸ್ಥಿತಿಯ ಅವಲೋಕನ ಮತ್ತು ಸಾಧ್ಯ ಷರತ್ತುಗಳ ಮೇಲೆ ಗಂಭೀರ ಚರ್ಚೆ ನಡೆಸುವ ಸಾಧ್ಯತೆ ಇದೆ. ವಿದ್ಯಾರ್ಥಿ ರಾಜಕಾರಣಕ್ಕೆ ಮರುಜೀವ ನೀಡುವ ಉದ್ದೇಶವೋ, ಅಥವಾ ಕ್ಯಾಂಪಸ್ ಶಾಂತಿಗೆ ಆದ್ಯತೆ ನೀಡುವುದೋ—ಇದನ್ನೇ ಮುಂದಿನ ದಿನಗಳು ನಿರ್ಧರಿಸಲಿದೆ. ರಾಜ್ಯದಲ್ಲಿ ಶಿಕ್ಷಣ ನೀತಿಯ ದಿಕ್ಕಿನ ಮೇಲೆ ಪರಿಣಾಮ ಬೀರುವ ಈ ಮಹತ್ವದ ವಿಚಾರ ಯಾವ ತೀರ್ಮಾನಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *