Middle East crisis: ಯುದ್ಧದಲ್ಲಿ 17 ದಿನ ಇರಾನ್‌ ಮುನ್ನಡೆಸಿದ್ದ ಲಾರಿಜಾನಿ ಇಸ್ರೇಲ್‌ನ ದಾಳಿಗೆ ಬಲಿ? | Iran S War Commander Larijani Reportedly Killed In Israeli Airstrike After 17 Day Offensive Rav

ಇರಾನ್‌ನ ಪರಮೋಚ್ಚ ನಾಯಕ ಖಮೇನಿ ಹತ್ಯೆಯ ಬೆನ್ನಲ್ಲೇ, ಇಸ್ರೇಲಿ ಸೇನೆಯು ನಡೆಸಿದ ವಾಯುದಾಳಿಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ ಕಾರ್ಯದರ್ಶಿ ಅಲಿ ಲಾರಿಜಾನಿ ಮತ್ತು ಬಸಿಜ್‌ ಮುಖ್ಯಸ್ಥ ಘೋಲಂ ರೆಜಾ ಸೊಲೈಮಾನಿ ಹತರಾಗಿದ್ದಾರೆ. ಈ ದಾಳಿಯು ಇರಾನ್‌ಗೆ ಮತ್ತೊಂದು ದೊಡ್ಡ ಆಘಾತ ನೀಡಿದೆ. .

– ಭದ್ರತಾ ಮುಖ್ಯಸ್ಥನನ್ನೇ ಹೊಡೆದುರುಳಿಸಿದ ಇಸ್ರೇಲ್‌

ದುಬೈ: ಎರಡು ವಾರದ ಹಿಂದಷ್ಟೇ ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಅಯತೊಲ್ಲ ಖಮೇನಿ ಸೇರಿದಂತೆ ಅವರ ದೊಡ್ಡ ಅತ್ಯಾಪ್ತ ಬಳಕವನ್ನು ಒಂದೇ ಏಟಿನಲ್ಲಿ ಮುಗಿಸಿದ್ದ ಇಸ್ರೇಲಿ ಸೇನೆ, ಖಮೇನಿ ಹತ್ಯೆ ಬಳಿಕ 17 ದಿನಗಳ ಕಾಲ ದೇಶದ ಸೇನಾ ಕಾರ್ಯಾಚರಣೆ ಹೊತ್ತಿದ್ದ ಅಲಿ ಲಾರಿಜಾನಿ ಹಾಗೂ ಮತ್ತೊಬ್ಬ ಹಿರಿಯ ಸೇನಾ ನಾಯಕರನ್ನು ಹತ್ಯೆ ಮಾಡಿದೆ. ಇದು ಈಗಾಗಲೇ ಖಮೇನಿ, ರಕ್ಷಣಾ ಸಚಿವ ಸೇರಿದಂತೆ ಹಲವು ಹಿರಿಯ ನಾಯಕರನ್ನು ಕಳೆದುಕೊಂಡಿದ್ದ ಇರಾನ್‌ಗೆ ದೊಡ್ಡ ಪೆಟ್ಟು ಎಂದು ಬಣ್ಣಿಸಲಾಗಿದೆ. ಆದರೆ ಸಾವಿನ ಸುದ್ದಿಯನ್ನು ಇರಾನ್‌ ಇದುವರೆಗೂ ಖಚಿತಪಡಿಸಿಲ್ಲ.

ಸೋಮವಾರ ರಾತ್ರಿ ನಡೆಸಿದ ವಾಯುದಾಳಿಯಲ್ಲಿ ಇರಾನ್‌ನ ರಾಷ್ಟ್ರೀಯ ಭದ್ರತಾ ಸಮಿತಿ ಕಾರ್ಯದರ್ಶಿ ಅಲಿ ಲಾರಿಜಾನಿ ಹಾಗೂ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ಸ್‌ನ ಅಂಗವಾದ ‘ಬಸಿಜ್‌’ನ ಮುಖ್ಯಸ್ಥ ಜನರಲ್‌ ಘೋಲಂ ರೆಜಾ ಸೊಲೈಮಾನಿಯನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಯಾರೀ ಅಲಿ ಲಾರಿಜಾನಿ?

ಲಾರಿಜಾನಿ ಇರಾನ್‌ನ ಪರಮೋಚ್ಚ ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯದರ್ಶಿ. ಖಮೇನಿಯ ಅತ್ಯಾಪ್ತ. ಇರಾನ್‌ ಸಂಸತ್ತಿನ ಮಾಜಿ ಸ್ಪೀಕರ್‌ ಕೂಡ ಆಗಿದ್ದು, ಪ್ರಭಾವಿ ರಾಜಕಾರಣಿ ಮತ್ತು ಧಾರ್ಮಿಕ ನಾಯಕ ಕೂಡಾ ಹೌದು. ಅಮೆರಿಕ-ಇಸ್ರೇಲ್‌ ವಿರೋಧಿ ನೀತಿಗಾಗಿ ಹೆಸರುವಾಸಿ. ಟ್ರಂಪ್‌ ಸರ್ಕಾರದ ಜತೆಗಿನ ಪರಮಾಣು ಮಾತುಕತೆಯಲ್ಲಿ ಖಮೇನಿಗೆ ಸಲಹಗಾರರಾಗಿದ್ದರು.

ಯಾರೀ ಸೊಲೈಮಾನಿ?:

ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ಸ್‌ನ ಅಂಗವಾದ ಬಸಿಜ್‌ನ ಮುಖ್ಯಸ್ಥ. ಇತ್ತೀಚೆಗೆ ಇರಾನ್ ಆಡಳಿತದ ವಿರುದ್ಧ ಭುಗಿಲೆದ್ದಿದ್ದ ಜನಾಕ್ರೋಶವನ್ನು ಹಿಂಸಾ ಮಾರ್ಗದ ಮೂಲಕ ದಮನಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಸರ್ಕಾರದ ಜನವಿರೋಧಿ ನಿಲುವುಗಳನ್ನು ಯಶಸ್ವಿಯಾಗಿದ್ದರು. ಇದೇ ಕಾರಣಕ್ಕೆ ಅಮೆರಿಕ, ಯುರೋಪಿಯನ್‌ ಒಕ್ಕೂಟ ಮತ್ತು ಇತರೆ ದೇಶಗಳು ಸೊಲೈಮಾನಿ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಿದ್ದವು.

Source link

Leave a Reply

Your email address will not be published. Required fields are marked *