Accident 22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ | Truck Accident Arunachal Comes To Light After 4 Days Death Toll Riase To 17

Accident 22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ | Truck Accident Arunachal Comes To Light After 4 Days Death Toll Riase To 17



Accident 22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ | Truck Accident Arunachal Comes To Light After 4 Days Death Toll Riase To 17

22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನದ ಬಳಿಕ ಘಟನೆ ಬೆಳಕಿಗೆ, ಇನ್ನುಳಿದ ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ದುರಂತ ಎಂದರೆ ಅಪಘಾತವಾಗಿ ನಾಲ್ಕು ದಿನ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಅರುಣಾಚಲ ಪ್ರದೇಶ(ಡಿ.11) ಕಾರ್ಮಿಕರ ಹೊತ್ತು ಸಾಗಿದ್ದ ಟ್ರಕ್ ಅಪಘಾತ ಘಟನೆ ಮನಕಲುಕುವಂತಿದೆ. ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿ ಪ್ರದೇಶದಲ್ಲಿ ನಡೆದಿದೆ. ಬರೋಬ್ಬರಿ 10,000 ಅಡಿಗಳ ಎತ್ತರದಲ್ಲಿರುವ ಪರ್ವತಗಳ ಪ್ರದೇಶದಲ್ಲಿ ಈ ದುರಂತ ನಡೆದಿದೆ. ಚಗ್ಲಾಗಾಮ್ ಬಾರ್ಡರ್ ರಸ್ತೆಯಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ 22 ಕಾರ್ಮಿಕರ ಹೊತ್ತು ಸಾಗಿದ ಟ್ರಕ್ ಪ್ರಪಾತಕ್ಕೆ ಉರುಳಿದೆ. ದುರಂತ ಎಂದರೆ ಅಪಘಾತ ಸೋಮವಾರ (ಡಿ.08) ನಡೆದಿದೆ. ಯಾರಿಗೂ ಗೊತ್ತೇ ಆಗಿಲ್ಲ.ತೀವ್ರವಾಗಿ ಗಾಯಗೊಂಡು ಹಲವರು ಮೃತಪತ್ತರೆ, ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆ ಸಿಗದೆ ನರಳಾಡಿದ್ದಾರೆ. ಈ ಪೈಕಿ ತೀವ್ರ ಗಾಯಗೊಂಡ ವ್ಯಕ್ತಿ ತೆವಳುತ್ತಾ ಪ್ರಪಾತದಿಂದ ಮೇಲೆ ಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಭೀಕರ ಅಪಘಾತ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಎನ್‌ಡಿಆರ್‌ಎಫ್ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದವರ ಪರಿಸ್ಥಿತಿ ಗಂಭೀರವಾಗಿದೆ.

ಭಾರತ ಚೀನಾ ಗಡಿಯಿಂದ 45 ಕಿಲೋಮೀಟರ್ ದೂರ

ಅಪಘಾತ ನಡೆದ ಸ್ಥಳ ಭಾರತ ಹಾಗೂ ಚೀನಾ ಗಡಿಯಿಂದ 45 ಕಿಲೋಮೀಟರ್ ದೂರದಲ್ಲಿದೆ. ಕೆಲಸದ ನಿಮಿತ್ತ ಟ್ರಕ್ ಮೂಲಕ 22 ಕಾರ್ಮಿಕರು ಚಗ್ಲಗಾಮ್ ಬಾರ್ಡರ್ ರಸ್ತೆಯಲ್ಲಿ ಸಾಗಿದ್ದಾರೆ. ಈ ಬಾರ್ಡರ್ ವಲಯದ, ಕಾಮಗಾರಿ ಸ್ಥಳಗಳಲ್ಲಿ ಸಂಪೂರ್ಣ ನೆಟ್‌ವರ್ಕ್ ಲಬ್ಯವಿಲ್ಲ. ಕಾರ್ಮಿಕರು ಟ್ರಕ್ ಮೂಲಕ ಪ್ರಯಾಣ ಮಾಡುತ್ತಿದ್ದಂತೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಸಿಗ್ನಲ್ ಇದ್ದರೆ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕುಟುಂಬಸ್ಥರು ಕರೆ ಮಾಡುವ ಪ್ರಯತ್ನ ಮಾಡಲಿಲ್ಲ. ಇತ್ತ ಟ್ರಕ್ ದುರ್ಗಮ ಹಾದಿಯಲ್ಲಿ ಸಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಟ್ರಕ್ ನೇರವಾಗಿ ಪ್ರಪಾತಕ್ಕೆ ಉರುಳಿದೆ. ಭೀಕರ ಅಪಘಾತದಲ್ಲಿ ಟ್ರಕ್ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಅಪಘಾತದಲ್ಲಿ ಹಲವರು ಸ್ಥಳದಲ್ಲೇ ಸಾವು, ಕೆಲವರು ನರಳಿ ಸಾವು

ಅಪಘಾತದ ತೀವ್ರತೆಗೆ ಹಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕೆಲವರು ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಈ ಪೈಕಿ ತೀವ್ರಗಾಯಗೊಂಡಿದ್ದ ಕಾರ್ಮಿಕ ಪ್ರಪಾತದಿಂದ ಮೆಲ್ಲನೆ ತೆವಳುತ್ತಾ ಮೇಲೆ ಬಂದಿದ್ದಾನೆ. ಬಾರ್ಡರ್ ರಸ್ತೆ ಮೇಲೆ ಬಂದರೂ ಈ ರಸ್ತೆಯಲ್ಲಿ ಯಾರೂ ಪತ್ತೆಯಾಗಲಿಲ್ಲ. ಹೀಗಾಗಿ ಹತ್ತಿರದ ಪಟ್ಟಣದ ವರೆಗೆ ತೆರಳಿ ಅದಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈತನ ಮಾಹಿತಿ ಕೇಳಿ ಅಧಿಕಾರಿಗಳು ಆಘಾತಗೊಂಡಿದ್ದಾರೆ. ಗಾಯಗೊಂಡ ಕಾರ್ಮಿಕನ ಮಾಹಿತಿ ಪಡೆದು ತಕ್ಷಣವೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಇತ್ತ ಕಾರ್ಮಿಕನ ಆಸ್ಪತ್ರೆ ದಾಖಲಿಸಲಾಗಿದೆ.

Scroll to load tweet…

22 ಕಾರ್ಮಿಕರ ಪೈಕಿ 17 ಮಂದಿ ಸಾವು

ಘಟನೆಯಲ್ಲಿ 22 ಕಾರ್ಮಿಕರ ಪೈಕಿ 17 ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದವರ ಪೈಕಿ ಕೆಲವು ಕಾರ್ಮಿಕರ ಆರೋಗ್ಯ ಗಂಭೀರವಾಗಿದೆ. ನಾಲ್ಕು ದಿನಗಳಿಂದ ಚಿಕಿತ್ಸೆ, ಆಹಾರ ಏನೂ ಇಲ್ಲದೆ ನರಕಯಾತನೆ ಅನುಭವಿಸಿದ ಭೀಕರ ದುರಂತ ಇದು.



Source link

Leave a Reply

Your email address will not be published. Required fields are marked *