Headlines

agumbe ghat tunnel feasibility: ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು! | Shivamogga Agumbe Ghat Road Upgrade Tunnel Feasibility Study Dpr Tender By Raghavendra Sat

agumbe ghat tunnel feasibility: ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು! | Shivamogga Agumbe Ghat Road Upgrade Tunnel Feasibility Study Dpr Tender By Raghavendra Sat



agumbe ghat tunnel feasibility: ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು! | Shivamogga Agumbe Ghat Road Upgrade Tunnel Feasibility Study Dpr Tender By Raghavendra Sat

ಮಲೆನಾಡು ಮತ್ತು ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ, ರಸ್ತೆ ಅಭಿವೃದ್ಧಿ ಹಾಗೂ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಚಾಲನೆ ನೀಡಲಾಗಿದ್ದು, 6 ತಿಂಗಳಲ್ಲಿ DPR ಸಿದ್ಧವಾಗಲಿದೆ.

ಶಿವಮೊಗ್ಗ/ನವದೆಹಲಿ (ಫೆ.10): ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾದ ‘ಆಗುಂಬೆ ಘಾಟ್’ ರಸ್ತೆಯ ಅಭಿವೃದ್ಧಿಗೆ ದಶಕಗಳ ಕಾಲದ ಕಾಯುವಿಕೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಈ ಅಪಾಯಕಾರಿ ಘಾಟ್ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಮತ್ತು ಇಲ್ಲಿ ಸುರಂಗ ಮಾರ್ಗ ನಿರ್ಮಾಣದ ಸಾಧ್ಯತೆಗಳನ್ನು ಪರಿಶೀಲಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಈಗ ಅಧಿಕೃತವಾಗಿ ಚಾಲನೆ ನೀಡಿದೆ.

ಸಂಸದ ಬಿ.ವೈ.ರಾಘವೇಂದ್ರ ಸತತ ಪ್ರಯತ್ನಕ್ಕೆ ಜಯ:

ಆಗುಂಬೆ ಘಾಟ್ ರಸ್ತೆಯ ದುಸ್ಥಿತಿ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಅವರ ಈ ಸತತ ಪ್ರಯತ್ನದ ಫಲವಾಗಿ, ರಾಷ್ಟ್ರೀಯ ಹೆದ್ದಾರಿ-169ಎ ರಸ್ತೆಯ ಕಿ.ಮೀ 30.75 ರಿಂದ 51.60 ರವರೆಗಿನ ಭಾಗವನ್ನು ಎರಡು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ಹಾಗೂ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

6 ತಿಂಗಳಲ್ಲಿ ವಿಸ್ತೃತ ವರದಿ (DPR) ಸಿದ್ಧ:

ಈ ಯೋಜನೆಗಾಗಿ ವಿಸ್ತೃತ ಯೋಜನಾ ವರದಿ (DPR), ಸಮೀಕ್ಷೆ ಮತ್ತು ಭೂ ಯೋಜನೆಯನ್ನು ಸಿದ್ಧಪಡಿಸಲು ಒಟ್ಟು 2.33 ಕೋಟಿ ರೂ. ಮೀಸಲಿಡಲಾಗಿದ್ದು, ಟೆಂಡರ್ ಆಹ್ವಾನಿಸಲಾಗಿದೆ. ಮುಂದಿನ 6 ತಿಂಗಳ ಕಾಲಮಿತಿಯೊಳಗೆ ಈ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ವಿಶೇಷವೆಂದರೆ, ಈ ಯೋಜನೆಯಲ್ಲಿ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರನ್ನು ಒಳಗೊಳ್ಳಲಾಗುತ್ತಿದ್ದು, ವೈಜ್ಞಾನಿಕವಾಗಿ ಸುರಂಗ ಮಾರ್ಗದ ಸಾಧ್ಯತೆಯನ್ನು ಪರೀಕ್ಷಿಸಲಾಗುತ್ತದೆ.

ಪರಿಸರ ರಕ್ಷಣೆ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ:

ಪಶ್ಚಿಮ ಘಟ್ಟದ ಪರಿಸರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವುದರಿಂದ, ಪ್ರಕೃತಿಗೆ ಹಾನಿಯಾಗದಂತೆ ರಸ್ತೆ ಅಭಿವೃದ್ಧಿಪಡಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. “ಈ ನಿರ್ಧಾರದಿಂದ ಮಲೆನಾಡು ಮತ್ತು ಕರಾವಳಿ ನಡುವಿನ ಪ್ರಯಾಣದ ಸಮಯ ಉಳಿಯಲಿದೆ. ಕೇವಲ ಪ್ರವಾಸೋದ್ಯಮ ಮಾತ್ರವಲ್ಲದೆ, ರೈತರಿಗೆ, ರೋಗಿಗಳಿಗೆ ಮತ್ತು ತುರ್ತು ಸೇವೆಗಳಿಗೆ ಗಣನೀಯ ಲಾಭವಾಗಲಿದೆ,” ಎಂದು ಬಿ.ವೈ.ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರಕ್ಕೆ ಕೃತಜ್ಞತೆ – ರಾಜ್ಯದ ಸಹಕಾರಕ್ಕೆ ಮನವಿ:

ಈ ಐತಿಹಾಸಿಕ ಹೆಜ್ಜೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಸಂಸದರು, ಮುಂದಿನ ಹಂತದ ಭೂಸ್ವಾಧೀನ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಮಲೆನಾಡಿನ ಬಹುಕಾಲದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ.



Source link

Leave a Reply

Your email address will not be published. Required fields are marked *